ಕೊಲೆಸ್ಟ್ರಾಲ್ ಎಂದರೆ ಒಂದು ರೀತಿಯ ದೇಹದಲ್ಲಿರುವ ಜಿಡ್ಡು ಅನ್ನಬಹುದು. ಇದು ಆರೋಗ್ಯಕರ ಕೋಶಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಆದರೆ, ಅತಿಯಾದ ಕೊಲೆಸ್ಟ್ರಾಲ್ ಕಾರ್ಡಿಯೋವೆಸ್ಕ್ಯುಲಾರ್ ಖಾಯಿಲೆಗೆ ಕಾರಣವಾಗಬಹುದು. ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಕೊಬ್ಬಿನ ತರಹ ಶೇಖರಣೆಗೊಳ್ಳುವುದು. ಇದು ಮುಂದೆ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಕೊಲೆಸ್ಟ್ರಾಲ್‌ನ ಪ್ರಮಾಣವನ್ನು ಕಾಯ್ದುಕೊಳ್ಳಲು ತಜ್ಞರು ಪೌಷ್ಟಿಕ ಆಹಾರಗಳಿಂದ ಕೂಡಿದ ಡಯಟ್, ವ್ಯಾಯಾಮ (Yoga Tips) ಮತ್ತು ಸರಿಯಾದ ನಿದ್ದೆಯನ್ನು ಮಾಡುವಂತೆ ಸಲಹೆ ನೀಡುತ್ತಾರೆ.
ಯೋಗಾಸನಗಳನ್ನು (Yoga Tips) ಪ್ರತಿನಿತ್ಯ ಅಭ್ಯಾಸಿಸುವುದು ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಾಯ್ದುಕೊಳ್ಳು ಸಹಾಯ ಮಾಡುತ್ತದೆ ಮತ್ತು ಅಪಧಮನಿಗಳನ್ನು ಮುಚ್ಚಿಕೊಳ್ಳದಂತೆ ನೋಡಿಕೊಳ್ಳುವುದು. ಯೋಗ ತಜ್ಞರಾದ ಅಕ್ಷರಾ ಅವರು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಪ್ರತಿನಿತ್ಯ ನಿಯಮಿತವಾಗಿ ಮಾಡಬೇಕಾದ ಯೋಗಾಸನಗಳನ್ನು ಹೇಳಿದ್ದಾರೆ.
ಪ್ರತಿನಿತ್ಯ ನಿಯಮಿತವಾಗಿ ಅಭ್ಯಾಸ ಮಾಡಬೇಕಾದ ಯೋಗಾಸನಗಳು :
ಕಪಾಲಭಾತಿ :
ಇದು ಅತ್ಯಂತ ಪರಿಣಾಮಕಾರಿಯಾದ ಪ್ರಾಣಾಯಾಮದ ಒಂದು ತಂತ್ರವಾಗಿದೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೇ ಹೊಟ್ಟೆಯ ಭಾಗದ ಸ್ನಾಯುಗಳನ್ನು ಮತ್ತು ಜೀರ್ಣಕ್ರಿಯೆ ಮಾಡುವ ವ್ಯವಸ್ಥೆಯನ್ನು ಉತ್ತೇಜಿಸುವುದು. ಕಪಾಲಭಾತಿಯನ್ನು ಗರ್ಭಿಣಿ ಸ್ತ್ರೀಯರು ನವಮಾಸಗಳವರೆಗೆ ಮಾಡಬಾರದು ಎಂದು ಯೋಗಾ ತಜ್ಞರಾದ ಅಕ್ಷರಾ ಅವರು ಹೇಳುತ್ತಾರೆ.
ಇದನ್ನೂ ಓದಿ : Yoga For Children : ನಿಮ್ಮ ಮಕ್ಕಳ ಬುದ್ಧಿಮಟ್ಟ ಹೆಚ್ಚಬೇಕೆ? ಈ ಐದು ಯೋಗಾಸನ ಹೇಳಿ ಕೊಡಿ
ಸೂರ್ಯ ನಮಸ್ಕಾರ :
ಹನ್ನೊಂದು ಹಂತಗಳ ಸೂರ್ಯ ನಮಸ್ಕಾರವನ್ನು ಪ್ರತಿನಿತ್ಯ ಬೆಳಿಗ್ಗೆ ಮಾಡುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯಮಾಡುತ್ತದೆ. ಸೂರ್ಯ ನಮಸ್ಕಾರದಲ್ಲಿ 8 ಯೋಗಿಕ್ ಆಸನಗಳನ್ನು ಮತ್ತು 24 ಯೋಗಿಕ್ ಕೌಂಟ್‌ಗಳು ಸೇರಿವೆ. ಇಲ್ಲಿಯ 8 ಆಸನಗಳು ಹೊಟ್ಟೆಯ ಭಾಗದ ಸ್ನಾಯುಗಳು ವಿಸ್ತರಿಸಲು ಸಹಾಯಮಾಡುತ್ತದೆ. ಹೊಟ್ಟೆಯ ಭಾಗದ ಸ್ನಾಯುಗಳು ವ್ಯಾಯಾಮಕ್ಕೆ ಒಳಪಟ್ಟಾಗ ಜೀರ್ಣಾಂಗ ವ್ಯೂಹವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡಿ ತನ್ಮೂಲಕ ಕೆಟ್ಟ, ಅನಗತ್ಯ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ. ಅವರು ಹೇಳುವ ಪ್ರಕಾರ ಸೂರ್ಯನಮಸ್ಕಾರವನ್ನು ಆತುರವಾಗಿ ಮಾಡಬಾರದು. ಯೋಗಾಸನದ ನಂತರ ದೇಹವು ಬಿಸಿಯಾಗುವುದು, ಚಯಾಪಚಯದ ಗತಿಯೂ ಹೆಚ್ಚುವುದು. ಅದಕ್ಕಾಗಿ ಸೂರ್ಯನಮಸ್ಕಾರ ಮಾಡಿದ ತಕ್ಷಣ ಸ್ನಾನ ಮಾಡಬಾರದು ಎಂದು ಸಲಹೆ ಕೊಡುತ್ತಾರೆ.
ನಿಯಮಿತವಾಗಿ ಪ್ರತಿನಿತ್ಯ ಯೋಗಾಸನದ ಜೊತೆಗೆ ವಾಕಿಂಗ್ ಮಾಡುವುದನ್ನು ಸೇರಿಸಿಕೊಳ್ಳಿ ಮತ್ತು ಕೊಬ್ಬಿನ ಅಂಶ ಹೆಚ್ಚಾಗಿರುವ ಆಹಾರಗಳನ್ನು ತ್ಯಜಿಸಿ ಮನೆಯಲ್ಲೇ ಮಾಡಿದ ಆರೋಗ್ಯಕರ ಆಹಾರಗಳನ್ನು ಸೇವಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ : Laughter Yoga: ಏನಿದು ಲಾಫರ್ ಯೋಗ? ಇದನ್ನು ಮಾಡುವುದು ಹೇಗೆ? ಏನು ಉಪಯೋಗ?
(Yoga Tips yoga asanas to reduce Cholesterol)