Expectations from state budget: ಗೃಹಿಣಿಯರಿಗೆ ಗೌರವ ಧನ, ರೈತರಿಗೆ ಶೂನ್ಯ ಬಡ್ಡಿಗೆ ಹೆಚ್ಚು ಸಾಲ: ರಾಜ್ಯ ಬಜೆಟ್‌ನಲ್ಲಿ ಹಲವು ನಿರೀಕ್ಷೆ

ಬೆಂಗಳೂರು: (Expectations from state budget) ಬಿಜೆಪಿ ಸರಕಾರದ ಕೊನೆಯ ಬಜೆಟ್ ಅನ್ನು ನಾಳೆ ಸಿಎಂ ಬೊಮ್ಮಾಯಿ ಅವರು ಮಂಡಿಸಲಿದ್ದು, ಕೆಲವು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ನಿರೀಕ್ಷೆಯಂತೆ ಬೊಮ್ಮಾಯಿ ಅವರಿಂದ ಕೆಲವು ಆಕರ್ಷಕ ಯೋಜನೆಗಳ ಘೋಷಣೆಯಾಗಲಿದ್ದು, ಮಹತ್ವದ ನಿರ್ಧಾರದಲ್ಲಿ ಮಹಿಳೆಯರಿಗೆ ವಿಶೇಷ ಯೋಜನೆಯನ್ನು ಜಾರಿ ಮಾಡುವ ಸಾಧ್ಯತೆಯಿದೆ.

ಈ ಬಾರಿ ಕರ್ನಾಟಕ ರಾಜ್ಯ ಬಜೆಟ್‌ ನಲ್ಲಿ ಹಲವು ನಿರೀಕ್ಷೆಗಳಿದ್ದು, ನಿರೀಕ್ಷೆಯಂತೆ ರೈತರಿಗೆ ಹೆಚ್ಚು ಸಾಲ ಸೌಲಭ್ಯ, ಗೃಹಿಣಿಯರಿಗೆ ಗೌರವಧನ, ರೈತರಿಗೆ ಡೀಸೆಲ್‌ ಸಹಾಯಧನದ ವಿಸ್ತರಣೆ, ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ನಮ್ಮ ಕ್ಲಿನಿಕ್‌ ಸ್ಥಾಪನೆ, ಹತ್ತು ಸಾವಿರ ಶಾಲಾ ಕಟ್ಟಡಗಳ ನಿರ್ಮಾಣ ಇತ್ಯಾದಿ ಘೋಷಣೆಗಳನ್ನು ಬೊಮ್ಮಾಯಿ ಅವರು ಮಾಡುವ ನಿರೀಕ್ಷೆಯಿದೆ. ಹಾಗೂ ಕುಲಕಸುಬುಗಳನ್ನು ಮುಂದುವರಿಸಲು ಉತ್ತೇಜಿಸುವಂತಹ ಕ್ರಮಗಳನ್ನು ಸರಕಾರ ಕೈಗೊಳ್ಳಬಹುದು ಎನ್ನಲಾಗುತ್ತಿದೆ.

ಬೆಂಗಳೂರು ಅಭಿವೃದ್ದಿಗೆ ಹತ್ತು ಸಾವಿರ ಕೋಟಿ ರೂ ಮೀಸಲು, ಆಶಾ ಕಾರ್ಯಕರ್ತೆಯರ ಸಂಬಳ ಏರಿಕೆ ಹಾಗೂ ಸರಕಾರಿ ನೌಕರರ 7ನೇ ವೇತನ ಆಯೋಗ ಜಾರಿಯ ಕನಸು ನೆರವೇರುವ ಸಾಧ್ಯತೆಯಿದೆ.

ಏನೆಲ್ಲಾ ಘೋಷಣೆಯಾಗಬಹುದು?
ಗೃಹಲಕ್ಷ್ಮಿ ಯೋಜನೆ:ಗೃಹಿಣಿಯರಿಗೆ 1,500 ರೂ ಸಹಾಯಧನ
ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡಲಾಗುವ ಸಾಲ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ.
ಕಾಯಕ ಯೋಜನೆ: ಕುಲಕಸುಬು ಆಧಾರಿತ ಸಾಂಪ್ರದಾಯಿಕ ವೃತ್ತಿ ಮಾಡುವವರಿಗೆ 50 ಸಾವಿರ ರೂ ಪ್ರೋತ್ಸಾಹ ಧನ.
ರೈತರಿಗೆ ಡೀಸೆಲ್‌ ಸಹಾಯಧನ ವಿಸ್ತರಣೆ
ಗಾಣಿಗ, ಮಡಿವಾಳ, ಮೇದಾರ ನೇಕಾರ, ಕುಂಬಾರ, ಅಕ್ಕಸಾಲಿಗಸಮುದಾಯಗಳಿಗೆ ಪ್ರತ್ಯೇಕ ನಿಗಮ
ನೂತನ ಬೆಂಬಲ ಬೆಲೆ ವಿಧಾನ
ಅಂಗನವಾಡಿ ಆಶಾ ಕಾರ್ಯಕರ್ತರಿಗೆ ಸಂಬಳ ಹೆಚ್ಚಳ
ರಾಜ್ಯದ ಎಲ್ಲಾ ಹೋಬಳಿಗಳಲ್ಲೂ ನಮ್ಮ ಕ್ಲಿನಿಕ್‌ ಸ್ಥಾಪನೆ
ಮಹಿಳಾ ಸ್ವಸಹಾಯ ಸಂಘಗಳಿಗೆ ಸ್ತ್ರೀ ಶಕ್ತಿ ಯೋಜನೆಯಡಿ 5 ಲಕ್ಷ ರೂ ಹಂಚಿಕೆ
ಸ್ವ ಸಹಾಯ ಸಂಘಗಳ ಬಡ್ಡಿ ಅಥವಾ ಸಾಲಗಳ ಮನ್ನಾ
15 ಸಾವಿರ ಶಾಲಾ ಶಿಕ್ಷಕರ ನೇಮಕಾತಿ
ವಿವೇಕ ಯೋಜನೆಯಡಿ ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ
ನೀರಾವರಿ ಯೋಜನೆಗಳಿಗೆ ಹೆಚ್ಚು ಅನುಧಾನ
ಬೆಂಗಳೂರು ಅಭಿವೃದ್ದಿಗೆ 10 ಸಾವಿರ ಕೋಟಿ ರೂ.
ಬೆಂಗಳೂರು ಟ್ರಾಫಿಕ್‌ ಸಮಸ್ಯೆ ನಿಯಂತ್ರಣಕ್ಕೆ ವಿಶೇಷ ಯೋಜನೆ ಜಾರಿ
ರಾಜ್ಯ ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ವರದಿ ಅನುಷ್ಠಾನ ಘೋಷಣೆ

ಇದನ್ನೂ ಓದಿ : Karnataka budget 2023 expectations: ಬಿಜೆಪಿ ಸರಕಾರದ ಕೊನೆಯ ಬಜೆಟ್‌ ನ ನಿರೀಕ್ಷೆಗಳೇನು?

ಇದನ್ನೂ ಓದಿ : Karnataka budget-‌2023: ಸಿಎಂ ಬೊಮ್ಮಾಯಿ ಹೊಸ ಕೃಷಿ ನೀತಿ ಘೋಷಣೆ ಸಾಧ್ಯತೆ

Expectations from state budget: Honorary money for housewives, more loans for farmers at zero interest: Many expectations in state budget

Comments are closed.