Karnataka budget 2023 expectations: ಬಿಜೆಪಿ ಸರಕಾರದ ಕೊನೆಯ ಬಜೆಟ್‌ ನ ನಿರೀಕ್ಷೆಗಳೇನು?

ಬೆಂಗಳೂರು: (Karnataka budget 2023 expectations) ಕರ್ನಾಟಕದ ಬಜೆಟ್‌ ಫೆ.17 (ನಾಳೆ) ರಂದು ಮಂಡನೆಯಾಗಲಿದ್ದು, ಬಿಜೆಪಿ ಸರಕಾರದ ಕೊನೆಯ ಬಜೆಟ್‌ ಇದಾಗಿದೆ. ಬಿಜೆಪಿ ಸರಕಾರದ ಕೊನೆಯ ಬಜೆಟ್‌ ಇದಾಗಿದ್ದರಿಂದ ಈ ಬಾರಿ ಬಜೆಟ್‌ ನಲ್ಲಿ ಹಲವು ನಿರೀಕ್ಷೆಗಳನ್ನಿಡಲಾಗಿದೆ. ನಾಳೆ ಬೆಳಿಗ್ಗೆ 10:15 ಕ್ಕೆ ಸಿಎಂ ಬೊಮ್ಮಾಯಿ ಅವರು ರಾಜ್ಯ ಬಜೆಟ್‌ ಮಂಡಿಸಲಿದ್ದಾರೆ ಎಂದು ಅಧಿಕೃತ ಮಾಹಿತಿಗಳು ಲಭಿಸಿವೆ.

2022-23 ನೇ ಸಾಲಿನ ಬಜೆಟ್‌ ಮಂಡನೆಯಲ್ಲಿ ರಾಜ್ಯದ ಹಣಕಾಸಿನ ಸ್ಥಿತಿ ಸುದಾರಿಸುವತ್ತ ಬೊಮ್ಮಾಯಿ ಅವರು ಗಮನ ಹರಿಸಿದ್ದರು. ಜನಾಕರ್ಷಣೆಗಿಂತಲೂ ದೂರದೃಷ್ಟಿಯ ಯೋಜನೆಗಳಿಗೆ ಒತ್ತು ನೀಡಲಾಗಿತ್ತು. ಆದರೆ ಈ ಬಾರಿ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜ್ಯದ್ಯಂತ ಸಂಚಲನ ಮೂಡಿಸುವ ಮುಂಗಡ ಪತ್ರವನ್ನು ಮಂಡಿಸಬೇಕು ಎಂಬ ಒತ್ತಡ ಬಿಜೆಪಿಯಲ್ಲಿದೆ.

ಬಜೆಟ್‌ ಗೆ ಸಂಬಂಧಿಸಿದಂತೆ ಹಲವು ನಿರೀಕ್ಷೆಗಳಿದ್ದು, ನಾಳೆ ಬಜೆಟ್‌ ಮಂಡಿಸಲು ಬೊಮ್ಮಾಯಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಬದ್ದತಾ ವೆಚ್ಚ ತಗ್ಗಿಸಿ ಯೋಜನಾ ಗಾತ್ರ ಹಿಗ್ಗಿಸುವತ್ತ ಲಕ್ಷ್ಯ ಕೊಟ್ಟಿದ್ದಾರೆ. ಹೀಗಾಗಿ ಹಲವು ಅಭಿವೃದ್ದಿ ಯೋಜನೆಗೆ ಹೆಚ್ಚು ವ್ಯಯ ಮಾಡಬಹುದು ಎಂಬ ಆಲೋಚನೆಯನ್ನು ಬೊಮ್ಮಾಯಿ ಅವರದ್ದಾಗಿದೆ.

ಈ ಬಾರಿಯ ಬಜೆಟ್‌ ನಿರೀಕ್ಷೆಗಳು:
ಸಾಮಾಜಿಕ ನ್ಯಾಯದಡಿಯಲ್ಲಿ ಹಲವು ಯೋಜನೆಯನ್ನು ಪ್ರಕಟಿಸುವ ಸಾದ್ಯತೆಯಿದ್ದು, ನಾನಾ ಸಮುದಾಯ ತಲುಪಲು ಸಿಎಂ ಗಮನ ಹರಿಸಲಿದ್ದಾರೆ. ಇನ್ನು ಯುವಕರು ಸ್ವಂತ ಕಾಲಿನ ಮೇಲೆ ನಿಂತು ಉದ್ಯಮ ಬೆಳೆಸಬೇಕು ಎಂಬ ಆಶಯದಡಿಯಲ್ಲಿ ಸವೋಧ್ಯಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಸಾಧ್ಯತೆಯಿದ್ದು, ಈ ಉದ್ದೇಶಕ್ಕೆ ಉತ್ತೇಜನಕಾರಿ ಕ್ರಮವನ್ನು ಕೈಗೊಳ್ಳುವ ಸಾಧ್ಯತೆಯಿದೆ.

ಆಶ್ರಯ ಯೋಜನೆಗಳ ಸಹಾಯಧನ ಹೆಚ್ಚಿಸುವುದರ ಜೊತೆಗೆ ಶಾಲಾ ಮೂಲಸೌಕರ್ಯಕ್ಕೆ ಹೆಚ್ಚಿನ ಅನುದಾ, ಮೂಲಸೌಕರ್ಯ ಅಭಿವೃದ್ದಿ ಯೋಜನೆಗಳಿಗೆ ಪ್ರೋತ್ಸಾಹಕ ಕ್ರಮ ನಿರೀಕ್ಷಿಸಲಾಗಿದೆ. ಇನ್ನೂ ರೈತರನ್ನು ಸ್ವಾವಲಂಬಿಗಳಾಗಿಸಲುಕೃಷಿ ಯಂತ್ರೋಪಕರಣ ಸಬ್ಸಿಡಿ ಇನ್ನೀತರ ಸಾಂಪ್ರದಾಯಿಕ ಉಪಕ್ರಮಗಳ ಜೊತೆಗೆ ಬೆಳೆ ನಷ್ಟ, ಹವಮಾನ ವೈಪರಿತ್ಯದಿಂದ ಕೃಷಿ ಕ್ಷೇತ್ರದ ಮೇಲಾಗಿರುವ ದುಷ್ಪರಿಣಾಮ ನೀಗಿಸಲು ವಿಶೇಷ ಒತ್ತು ಕೊಡುವ ನಿರೀಕ್ಷೆಯಿದೆ. ಕೃಷ್ಣಾ, ಕಾವೇರಿ ಕಣಿವೆ ಸೇರಿದಂತೆ ನೀರಾವರಿ ಯೋಜನೆಗಳಿಗೆ ಭಾರೀ ಅನುದಾನವನ್ನು ನಿರೀಕ್ಷಿಸಲಾಗಿದೆ. ಇನ್ನೂ ಕಳಸಾ- ಬಂಡೂರಿ, ಮೇಕೆದಾಟು ಕುಡಿಯುವ ನೀರಿನ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆಯೂ ನಿರೀಕ್ಷೆಯಿದೆ.

ಇದನ್ನೂ ಓದಿ : Karnataka budget-‌2023: ಸಿಎಂ ಬೊಮ್ಮಾಯಿ ಹೊಸ ಕೃಷಿ ನೀತಿ ಘೋಷಣೆ ಸಾಧ್ಯತೆ

ಇದನ್ನೂ ಓದಿ : ಕರ್ನಾಟಕ ಬಜೆಟ್ ಅಧಿವೇಶನ ನಾಳೆಯಿಂದ ಆರಂಭ : ವಿಧಾನಸೌದದ ಸುತ್ತಲೂ ನಿಷೇಧಾಜ್ಞೆ ಜಾರಿ

ಇನ್ನೂ ಮಹಿಳೆಯರಿಗೆ ಆದ್ಯತೆ ನೀಡುವ ಬೊಮ್ಮಾಯಿ ಅವರು ಸ್ತ್ರೀ ಶಕ್ತಿ ಸಂಘಗಳಿಗೆ ಬಲ ತುಂಬುವ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿರೀಕ್ಷೆಯಿದೆ. ಜೊತೆಗೆ ಕೌಟುಂಬಿಕ ನಿರ್ವಹಣೆಗೆ ಸಹಾಯಧನ ನೀಡುವ ವಿಚಾರ ಕೂಡ ಚರ್ಚೆಯಲ್ಲಿದೆ.

Karnataka budget 2023 expectations: What are the expectations of the last budget of the BJP government?

Comments are closed.