ಫಾರ್ಚೂನರ್ಗೆ ನೇರ ಸವಾಲ್: ಭಾರತಕ್ಕೆ ಎಂಟ್ರಿ ಕೊಡ್ತಿದೆ ಹೊಸ ‘ಕಿಯಾ ಸೊರೆಂಟೊ’, ಜಬರ್ದಸ್ತ್ ಹೈಬ್ರಿಡ್ ಎಂಜಿನ್!
ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು 'ಕಿಯಾ ಇಂಡಿಯಾ' (Kia India) ಮತ್ತೊಂದು ಬೃಹತ್ ಎಸ್ಯುವಿ ಕಾರನ್ನು ತರಲು ಸಂಪೂರ್ಣ ಸಜ್ಜಾಗಿದೆ.

ಬೆಂಗಳೂರು: ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ‘ಕಿಯಾ ಇಂಡಿಯಾ’ (Kia India) ಮತ್ತೊಂದು ಬೃಹತ್ ಎಸ್ಯುವಿ ಕಾರನ್ನು ತರಲು ಸಂಪೂರ್ಣ ಸಜ್ಜಾಗಿದೆ. ಭಾರತದಲ್ಲಿ ಈಗಾಗಲೇ ಹಲವು ಬಾರಿ ರೋಡ್ ಟೆಸ್ಟ್ ನಡೆಸುವಾಗ ಕಾಣಿಸಿಕೊಂಡಿದ್ದ ಬಹುನಿರೀಕ್ಷಿತ ‘ಕಿಯಾ ಸೊರೆಂಟೊ’ (Kia Sorento) ಎಸ್ಯುವಿಯ ಮೊದಲ ಅಧಿಕೃತ ಟೀಸರ್ ಅನ್ನು ಕಂಪನಿ ಇದೀಗ ಬಿಡುಗಡೆ ಮಾಡಿದೆ.
ನಗರದ ಬ್ಯೂಟಿಫುಲ್ ಸಿಲೂಯೆಟ್ (Silhouette) ಹಿನ್ನೆಲೆಯಲ್ಲಿ ಬ್ರ್ಯಾಂಡ್ ಹೆಸರನ್ನು ಸೂಚಿಸುವ ಟೀಸರ್ ಬಿಡುಗಡೆಯಾಗಿದ್ದು, ಆಟೋ ಪ್ರಿಯರಲ್ಲಿ ಭಾರಿ ಕೌತುಕ ಮೂಡಿಸಿದೆ. ಅಲ್ಲದೆ, ಕೆಲವು ಡೀಲರ್ಶಿಪ್ಗಳಲ್ಲಿ ಈ ಕಾರಿನ ಅನಧಿಕೃತ ಬುಕಿಂಗ್ಗಳು ಈಗಾಗಲೇ ಆರಂಭಗೊಂಡಿವೆ!
ಎಷ್ಟಿರಲಿದೆ ಬೆಲೆ? ಬಿಡುಗಡೆ ಯಾವಾಗ?
ಕಿಯಾ ಕಂಪನಿಯು ಅಧಿಕೃತವಾಗಿ ಬಿಡುಗಡೆಯ ದಿನಾಂಕವನ್ನು ಘೋಷಿಸದಿದ್ದರೂ, ಮೂಲಗಳ ಪ್ರಕಾರ ಈ ನೂತನ ಸೊರೆಂಟೊ ಎಸ್ಯುವಿಯು ಬರುವ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಭಾರತೀಯ ರಸ್ತೆಗೆ ಇಳಿಯಲಿದೆ.
ಈ ಕಾರನ್ನು ಭಾರತಕ್ಕೆ ಸಿ ಕೆ ಡಿ (CKD – Completely Knocked Down) ಮಾರ್ಗದ ಮೂಲಕ ತಂದು ಇಲ್ಲಿ ಜೋಡಣೆ (Assemble) ಮಾಡಲಾಗುತ್ತದೆ. ಭಾರತದಲ್ಲಿ ಇದರ ಎಕ್ಸ್-ಶೋರೂಂ ಬೆಲೆ ಸುಮಾರು ₹45 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.
ಕಿಯಾ ಸೊರೆಂಟೊದ ಪ್ರಮುಖ ಆಕರ್ಷಣೆಯೆಂದರೆ ಇದರ ಎನ್ಜಿನ್ ಸಾಮರ್ಥ್ಯ. ಈ ಕಾರು 1.6-ಲೀಟರ್ ಟರ್ಬೊ-ಪೆಟ್ರೋಲ್ ಎನ್ಜಿನ್ ಜೊತೆಗೆ ಹೈಬ್ರಿಡ್ ಪವರ್ಟ್ರೇನ್ (Hybrid Powertrain) ಹೊಂದಿರಲಿದೆ. ಎಲೆಕ್ಟ್ರಿಕ್ ಮೋಟಾರ್ ಬೆಂಬಲದೊಂದಿಗೆ ಐಚ್ಛಿಕ ‘ಆಲ್-ವೀಲ್ ಡ್ರೈವ್’ (AWD) ಸಿಸ್ಟಮ್ ಸಹ ಇದರಲ್ಲಿ ಸಿಗಲಿದೆ. ಇದರಿಂದ ಅತ್ಯುತ್ತಮ ಪವರ್ ಮತ್ತು ಮೈಲೇಜ್ ಎರಡನ್ನೂ ನಿರೀಕ್ಷಿಸಬಹುದು.

ಕಾರ್ನಲ್ಲ ಏನೆಲ್ಲಾ ಹೈಟೆಕ್ ಫೀಚರ್ಗಳಿವೆ?
ಭಾರತೀಯ ಆವೃತ್ತಿಯ 2026ರ ಕಿಯಾ ಸೊರೆಂಟೊ ಪ್ರೀಮಿಯಂ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳ ಗಣಿಯಾಗಿದೆ:
- ಡಿಸ್ಪ್ಲೇ: ಡ್ಯುಯಲ್ 12.3-ಇಂಚಿನ ಇನ್ಫೋಟೈನ್ಮೆಂಟ್ ಹಾಗೂ ಡ್ರೈವರ್ ಡಿಸ್ಪ್ಲೇ.
- ಸುರಕ್ಷತೆ: ಲೆವೆಲ್-2 ADAS (Advanced Driver Assistance System) ಸೂಟ್ ಹಾಗೂ ಪೂರ್ಣ-LED ಲೈಟಿಂಗ್.
- ಕಂಫರ್ಟ್: ಪನೋರಮಿಕ್ ಸನ್ರೂಫ್, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಅಡ್ಜಸ್ಟೇಬಲ್ ಮತ್ತು ವೆಂಟಿಲೇಟೆಡ್ ಸೀಟ್ಗಳು.
- ಕನೆಕ್ಟಿವಿಟಿ: ವೈರ್ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ ದೊಡ್ಡ ಸೈಜ್ನ ಅಲಾಯ್ ವೀಲ್ಗಳು.

ಯಾವೆಲ್ಲಾ ಕಾರುಗಳಿಗೆ ನೇರ ಫೈಟ್?
45 ಲಕ್ಷ ರೂ. ಬಜೆಟ್ ವಿಭಾಗದಲ್ಲಿ ಬಿಡುಗಡೆಯಾಗಲಿರುವ ಈ ಸೊರೆಂಟೊ ಎಸ್ಯುವಿ, ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧಿಗಳಿಗೆ ನೇರ ಸವಾಲು ಒಡ್ಡಲಿದೆ:
- ಟೊಯೋಟಾ ಫಾರ್ಚೂನರ್ (Toyota Fortuner)
- ಸ್ಕೋಡಾ ಕೊಡಿಯಾಕ್ (Skoda Kodiaq)
- ಎಂಜಿ ಮೆಜೆಸ್ಟರ್ (MG Majestor)
- ವೋಕ್ಸ್ವ್ಯಾಗನ್ ಟೇರಾನ್ (Volkswagen Tayron)
- ಜೀಪ್ ಮೆರಿಡಿಯನ್ (Jeep Meridian)

