Bal Jeevan Bima : ಬಾಲ ಜೀವನ ವಿಮಾ: ಪೋಸ್ಟ್‌ ಆಫೀಸ್‌ನ ಈ ಯೋಜನೆ ಬಗ್ಗೆ ನಿಮಗೆ ಗೊತ್ತಾ..

ಬಾಲ ಜೀವನ ವಿಮಾ ಯೋಜನೆ (Bal Jeevan Bima) ಇದು ಭಾರತೀಯ ಪೋಸ್ಟ್‌ ಆಫೀಸ್‌ ಮಕ್ಕಳ ಭವಿಷ್ಯಕ್ಕಾಗಿ ನೀಡಿರುವ ಲೈಫ್‌ ಇನ್ಶುರೆನ್ಸ್‌ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಪೋಷಕರು ಪೋಸ್ಟ್‌ ಆಫೀಸ್‌ ಖಾತೆಯಲ್ಲಿ ಪ್ರತಿದಿನ 6 ರೂ. ಗಳನ್ನು ಡಿಪೊಸಿಟ್‌ ಮಾಡಬಹುದಾಗಿದೆ. ಇದು ಪಾಲಿಸಿಯ ಪೂರ್ಣಾವಧಿಯ ನಂತರ ಒಟ್ಟು ಒಂದು ಲಕ್ಷ ರೂಪಾಯಿಗಳನ್ನು ಮಕ್ಕಳಿಗೆ ನೀಡುತ್ತದೆ.

ಬಾಲ ಜೀವನ ವಿಮೆಯ ಪ್ರಯೋಜನಗಳು:
ಈ ಯೋಜನೆಯ ಮೂಲ ಉದ್ದೇಶ ಒಂದು ಲಕ್ಷದ ವಿಮೆಯು ಮಗುವಿನ ಶಿಕ್ಷಣ ಅಥವಾ ಇತರ ಹಣಕಾಸಿನ ಜವಾಬ್ದಾರಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಭರಿಸಲು ಸಹಾಯ ಮಾಡುತ್ತದೆ. ಈ ಯೋಜನೆಯ ಪ್ರಮುಖ ಪ್ರಯೋಜನವೆಂದರೆ ಅನಿರೀಕ್ಷಿತವಾಗಿ ಮಗುವನ್ನು ಕಳೆದುಕೊಂಡು ಸಂದರ್ಭದಲ್ಲಿ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಬಾಲ ಜೀವನ ವಿಮೆಯೆಲ್ಲಿ ಮಾಡುವ ದೈನಂದಿನ ಠೇವಣಿಯು ಕುಟುಂಬದ ಮೇಲೆ ಆರ್ಥಿಕ ಹೊರೆ ಕಡಿಮೆಯಾಗಿಸುತ್ತದೆ.

ಬಾಲ ಜೀವನ ವಿಮಾ ಯೋಜನೆಯ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಅದು ಮಕ್ಕಳಲ್ಲಿ ಉಳಿತಾಯ ಮತ್ತು ಆರ್ಥಿಕ ಶಿಸ್ತನ್ನು ಉತ್ತೇಜಿಸುತ್ತದೆ. ಖಾತೆಗೆ ನಿಯಮಿತವಾಗಿ ಹಣವನ್ನು ಠೇವಣಿ ಮಾಡುವ ಮೂಲಕ, ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಉಳಿತಾಯ ಮತ್ತು ಆರ್ಥಿಕ ಯೋಜನೆಗಳ ಮಹತ್ವವನ್ನು ಕಲಿಯಲು ಸಹಾಯವಾಗುತ್ತದೆ.

ಬಾಲ ಜೀವನ ವಿಮಾ ಯೋಜನೆಯ ಪಾಲಿಸಿದಾರರಾಗಲು ಮೊದಲು ಪೋಷಕರು ಹತ್ತಿರದ ಪೋಸ್ಟ್‌ ಆಫೀಸ್‌ಗೆ ತೆರಳಿ ಯೋಜನೆಯ ಅರ್ಜಿ ಅನ್ನು ಭರ್ತಿ ಮಾಡಬೇಕಾಗುತ್ತದೆ. ಈ ಅರ್ಜಿ ಸಲ್ಲಿಕೆಗೆ ಮಗುವಿನ ವಿವರದ ಅವಶ್ಯಕತೆಯಿರುತ್ತದೆ. ಅಂದರೆ ಹೆಸರು, ವಯಸ್ಸು, ಮತ್ತು ಅರ್ಜಿದಾರರ ಗುರುತಿನ ವಿಳಾಸದ ಪುರಾವೆಯನ್ನು ಒದಗಿಸಬೇಕಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು ?
ಬಾಲ ಜೀವನ ವಿಮೆಯನ್ನು 8 ರಿಂದ 12 ವರ್ಷದ ಒಳಗಿನ ಮಕ್ಕಳು ತೆರೆಯಬಹುದಾಗಿದೆ. ಹಾಗಾಗಿ ಮಕ್ಕಳ ವಯಸ್ಸಿನ ದಾಖಲೆ ಪತ್ರವನ್ನು ಒದಗಿಸಬೇಕಾಗುತ್ತದೆ. ಮಗುವಿಗೆ 18 ವರ್ಷ ಆಗುವವರೆಗೆ ಪಾಲಿಸಿಯಿರುತ್ತದೆ.

ಬಾಲ ಜೀವನ ವಿಮೆ ಪಾಲಿಸಿ ಹೇಗೆ ಲಾಭದಾಯಕವಾಗಿದೆ?
ಉದಾಹರಣೆಗೆ ಮಗುವಿಗೆ 10 ವರ್ಷವಾದಾಗ ಪೋಷಕರು ಬಾಲ ಜೀವನ ವಿಮೆ ಪಾಲಿಸಿಯನ್ನು ತೆಗೆದುಕೊಳ್ಳಲು ಬಯಸಿದರೆ, ಹತ್ತಿರದ ಪೋಸ್ಟ್‌ ಆಫೀಸಿಗೆ ತೆರಳಿ ಅಲ್ಲಿ ಅರ್ಜಿ ಸಲ್ಲಿಸವುದರ ಮೂಲಕ ಈ ಪಾಲಿಸಿಯನ್ನು ತೆರೆಯಬಹುದಾಗಿದೆ. ಪ್ರತಿ ದಿನ 6 ರೂಪಾಯಿಗಳೆಂದರೆ, ವಾರ್ಷಿಕವಾಗಿ ಒಟ್ಟು 2,196 ರೂ.ಗಳನ್ನು ಡಿಪಾಸಿಟ್‌ ಮಾಡಬೇಕಾಗುತ್ತದೆ. ನಂತರ ಇದು ಮಗುವಿಗೆ 18 ವರ್ಷ ತುಂಬಿದಾಗ ಪಾಲಿಸಿಯಿಂದ ಒಂದು ಲಕ್ಷ ರೂಪಾಯಿ ಪಡೆಯಬಹುದಾಗಿದೆ. ಒಂದು ವೇಳೆ ಪಾಲಿಸಿದಾರ ಮಗುವನ್ನು ಅನಿರೀಕ್ಷಿತವಾಗಿ ಕುಟುಂಬವು ಕಳೆದುಕೊಂಡರೆ, ಆಗ ಆ ಹಣವು ಮಗುವಿನ ನಾಮಿನಿದಾರರಿಗೆ ದೊರೆಯುತ್ತದೆ.

ಇದನ್ನೂ ಓದಿ : Top 5 Electric Scooters in India: 2022 ರ ಟಾಪ್‌ 5 ಇಲೆಕ್ಟ್ರಿಕ್‌ ಸ್ಕೂಟರ್‌ಗಳು

ಇದನ್ನೂ ಓದಿ : Jio Happy New year Plan : ಹೊಸ ವರ್ಷಕ್ಕೆ ಹೊಸ ಪ್ಲಾನ್‌ ಪರಿಚಯಿಸಿದ ಜಿಯೋ; ಅನ್‌ಲಿಮಿಟೆಡ್‌ ಕರೆ, 2.5 GB ಡಾಟಾ…

(Bal Jeevan Bima post office scheme invest 6 rs daily and get rs 1 lakh)

Comments are closed.