ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ 2 ದಿನ ರಜೆ

ನವದೆಹಲಿ : Bank Employees 2 Days Weekly Off : ಬ್ಯಾಂಕ್‌ ಉದ್ಯೋಗಿಗಳಿಗೆ ಇಲ್ಲಿದೆ ಗುಡ್‌ ನ್ಯೂಸ್.‌ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಇನ್ಮುಂದೆ ವಾರದಲ್ಲಿ ಎರಡು ದಿನಗಳ ಕಾಲ ರಜೆಯನ್ನು ಪಡೆಯಲಿದ್ದಾರೆ. ಈ ಕುರಿತು ಬ್ಯಾಂಕ್ ಯೂನಿಯನ್‌ಗಳ ಬೇಡಿಕೆಯನ್ನು ಮುಂದಿಟ್ಟಿದ್ದು, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ನೌಕರರ ಬೇಡಿಕೆಗೆ ಸಮ್ಮತಿ ಸೂಚಿಸಿದೆ. ಶೀಘ್ರದಲ್ಲಿಯೇ ಹೊಸ ರೂಲ್ಸ್ ಜಾರಿಗೆ ಬರುವ ಸಾಧ್ಯತೆಯಿದೆ.

ಬ್ಯಾಂಕ್‌ ಉದ್ಯೋಗಿಗಳು ಪ್ರಸ್ತುತ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಸಂಪೂರ್ಣವಾಗಿ ರಜೆಯನ್ನು ಪಡೆಯುತ್ತಿದ್ದಾರೆ. ತಿಂಗಳ ಮೊದಲ ಹಾಗೂ ಮೂರನೇ ಶನಿವಾರದಂದು ಇಡೀ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಹೊಸ ರೂಲ್ಸ್ ಪ್ರಕಾರ ವಾರದಲ್ಲಿ 5 ದಿನಗಳ ಕಾಲ ಮಾತ್ರವೇ ಕೆಲಸ ಮಾಡುವ ನಿಯಮ ಜಾರಿಗೆ ಬಂದ್ರೆ ಬ್ಯಾಂಕ್ ಉದ್ಯೋಗಿಗಳ ಕೆಲಸದ ಸಮಯವನ್ನು ಪ್ರತಿದಿನ 50 ನಿಮಿಷಗಳಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ವಾರದಲ್ಲಿ ಐದು ದಿನಗಳ ಕೆಲಸ ನಿರ್ವಹಿಸುವ ಬ್ಯಾಂಕ್ ಯೂನಿಯನ್ ಗಳ ಬೇಡಿಕೆಯನ್ನು (Bank Employees 2 Days Weekly Off) ಪರಿಗಣಿಸಿದೆ. ಅಲ್ಲದೇ ಈ ವಿಚಾರಕ್ಕೆ ಸಂಬಂಧಿಸಿದಂತೆ IBA ಮತ್ತು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಎಂಪ್ಲಾಯೀಸ್ (UFBEs) ನಡುವೆ ಮಾತುಕತೆಗಳು ನಡೆಯುತ್ತಿವೆ. ಈಗಾಗಲೇ ವಾರದಲ್ಲಿ 5 ದಿನಗಳ ಉದ್ಯೋಗಿಗಳು ಕರ್ತವ್ಯ ನಿರ್ವಹಣೆ ಮಾಡಲು ಸಂಘವು ತಾತ್ವಿಕವಾಗಿ ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ.

ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 25 ರ ಅಡಿಯಲ್ಲಿ ಸರ್ಕಾರವು ಎಲ್ಲಾ ಶನಿವಾರಗಳನ್ನು ರಜೆಯೆಂದು ಸೂಚಿಸಬೇಕಾಗುತ್ತದೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ನಾಗರಾಜನ್ ತಿಳಿಸಿದ್ದಾರೆ. ಅಲ್ಲದೇ ಪ್ರಸ್ತುತ ಬ್ಯಾಂಕ್ ನೌಕರರು ಪರ್ಯಾಯ ಶನಿವಾರದಂದು ಕೆಲಸ ಮಾಡುತ್ತಾರೆ. ಉದ್ಯೋಗಿ ಗಳು ಪ್ರತಿದಿನ ಬೆಳಗ್ಗೆ 9.45 ರಿಂದ ಸಂಜೆ 5.30 ರವರೆಗೆ 40 ನಿಮಿಷಗಳ ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಮಾರ್ಚ್ 2023 ರಲ್ಲಿ ಬ್ಯಾಂಕ್ ರಜಾದಿನಗಳು

ಬ್ಯಾಂಕ್ ಉದ್ಯೋಗಿಗಳು ಮತ್ತು ಬ್ಯಾಂಕ್ ಗ್ರಾಹಕರು ಮಾರ್ಚ್ 2023 ರಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರ ಸೇರಿದಂತೆ 12 ದಿನಗಳವರೆಗೆ ಬ್ಯಾಂಕ್ ಗಳು ಬಂದ್‌ ಆಗಿರಲಿವೆ. ಆದರೆ ಮಾರ್ಚ್ ತಿಂಗಳ ರಜಾ ದಿನಗಳು ದೇಶದ ಹಲವು ರಾಜ್ಯಗಳಲ್ಲಿ ಬದಲಾವಣೆಯಾಗಲಿದೆ.

ಇದನ್ನೂ ಓದಿ : DigiYatra face recognition: ಡಿಜಿಯಾತ್ರಾ-ಶಕ್ತಗೊಳ್ಳಲಿವೆ ದೆಹಲಿ ವಿಮಾನ ನಿಲ್ದಾಣದ ಬೋರ್ಡಿಂಗ್‌ ಗೇಟ್ ಗಳು

ಇದನ್ನೂ ಓದಿ : TRAI Big Updates : ಇನ್ಮುಂದೆ ಇರೋದಿಲ್ಲ 10 ಅಂಕಿಯ ಮೊಬೈಲ್ ಸಂಖ್ಯೆ

Comments are closed.