ಲಾಕ್ ಡೌನ್ 4.0 ವಿಸ್ತರಣೆ : ಮತ್ತೆ ಮೂರು ತಿಂಗಳು ಇಎಂಐ ವಿನಾಯಿತಿ ?

0

ನವದೆಹಲಿ : ಬ್ಯಾಂಕುಗಳಲ್ಲಿ ಸಾಲ ಪಡೆದವರಿಗೆ ಇದೀಗ ತಲೆನೋವು ಶುರುವಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ನೀಡಲಾಗಿದ್ದ ಇಎಂಐ ವಿನಾಯಿತಿ ಅವಧಿ ಮುಗಿಯಲಿದ್ದು, ಜೂನ್ ನಿಂದ ಸಾಲದ ಕಂತುಗಳ ಮರುಪಾವತಿ ಮಾಡಬೇಕಾಗಿದೆ. ಆದ್ರೀಗ ಆರ್ ಬಿಐ ಮತ್ತೆ ಮೂರು ತಿಂಗಳ ಕಾಲ ಇಎಂಐ ವಿನಾಯಿತಿ ನೀಡಲ ಚಿಂತನೆ ನಡೆಸಿದೆ.

ಹೌದು, ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ನಾಲ್ಕನೇ ಹಂತದ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಜನರು ದುಡಿಮೆಯಿಲ್ಲದೇ ಕಂಗಾಲಾಗಿದ್ದಾರೆ. ಹಲವರು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದ ಲಾಕ್ ಡೌನ್ ಹೇರಿಕೆಯಾದ ಅವಧಿಯಲ್ಲಿಯೇ ಸಾಲದ ಕಂತುಗಳ ಮರುಪಾವತಿಗೆ ಆರ್ ಬಿಐ ಮೂರು ತಿಂಗಳ ವಿನಾಯಿತಿ ನೀಡಿತ್ತು.

ಆದ್ರೀಗ ಮತ್ತೇ ಲಾಕ್ ಡೌನ್ 4.0 ಜಾರಿ ಮಾಡಲಾಗಿದೆ. ಹೀಗಾಗಿ ದುಡಿಮೆಯಿಲ್ಲದೇ ಜನರು ಸಾಲದ ಮರುಪಾವತಿ ಮಾಡಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೆ ಆರ್ ಬಿಐ ಸಂಕಷ್ಟದಲ್ಲಿರುವ ಜನರಿಗೆ ಮತ್ತೊಮ್ಮೆ ನೆರವಾಗಲು ಮುಂದಾಗಿದೆ.

ಜೂನ್ ಮೊದಲ ವಾರದಲ್ಲಿ ಆರ್ ಬಿಐ ಮಹತ್ವದ ಘೋಷಣೆಯನ್ನು ಮಾಡಲಿದ್ದು, ಪ್ರಮುಖವಾಗಿ ಮತ್ತೆ ಮೂರು ತಿಂಗಳ ಕಾಲ ಇಎಂಐ ವಿನಾಯಿತಿ ನೀಡುವ ಸಾಧ್ಯತೆಯಿದೆ. ಆರ್ ಬಿಐ ಈ ಕುರಿತು ಗಂಭೀರ ಚಿಂತನೆ ನಡೆಸುತ್ತಿದೆ. ಒಂದೊಮ್ಮೆ ಆರ್ ಬಿಐ ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡಿದ್ರೆ ಸಾಲ ಪಡೆದ ಗ್ರಾಹಕರಿಗೆ ಅಗಸ್ಟ್ 31ರ ವರೆಗೂ ವಿನಾಯಿತಿ ಸಿಗುವ ಸಾಧ್ಯತೆಯಿದೆ.

Leave A Reply

Your email address will not be published.