ಆನ್‌ಲೈನ್‌ನಲ್ಲಿ ಕಳಪೆ ಗುಣಮಟ್ಟದ ಮೊಟ್ಟೆಗಳ ಮಾರಾಟ: ಇ-ಕಾಮರ್ಸ್ ಸಂಸ್ಥೆಗಳಿಂದ ವಿವರಣೆ ಕೇಳಿದ FSSAI

ಎಫ್ಎಸ್‌ಎಸ್‌ಎಐ ನೀಡಿರುವ ವರದಿಯ ಪ್ರಕಾರ, ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಳಪೆ ಗುಣಮಟ್ಟದ ಮೊಟ್ಟೆಗಳ ಮಾರಾಟದ ಕುರಿತು ಗ್ರಾಹಕರ ದೂರುಗಳಿಗೆ ಸಂಬಂಧಿಸಿದಂತೆ ಕ್ವಿಕ್-ಕಾಮರ್ಸ್ ಸಂಸ್ಥೆಯಾದ 'ಬ್ಲಿಂಕಿಟ್' (Blinkit) ನಿಂದ FSSAI ವಿವರಣೆಯನ್ನು ಕೇಳಿದೆ.

ಬೆಂಗಳೂರು : ಪ್ರೊಟೀನ್‌ ಹಾಗೂ ಪೋಷಕಾಂಶಗೂ ಸಮೃದ್ದವಾಗಿರುವ ಸೂಪರ್‌ ಪುಡ್‌ ಎಂದೇ ಪರಿಗಣಿಸಲಾಗಿರುವ ಮೊಟ್ಟೆ ವಿತರಣೆಗೆ ಸಂಬಂಧಿಸಿದಂತೆ ಇ ಕಾಮರ್ಸ್‌ ಸಂಸ್ಥೆಗಳಿಂದ ಎಫ್‌ಎಸ್‌ಎಸ್‌ಎಐ ವಿವರಣೆಯನ್ನು ಕೇಳಿದ್ದು, ಇ ಕಾಮರ್ಸ್‌ ಸಂಸ್ಥೆಯಾಗಿರುವ ಬ್ಲಿಂಕಿಟ್‌ಗೆ ನೋಟೀಸ್‌ ಜಾರಿ ಮಾಡಿದೆ.

ತೂಕ ಹೆಚ್ಚಿಸುವುದರಿಂದ ಹಿಡಿದು, ತೂಕ ಹೆಚ್ಚಳದ ವರೆಗೂ ಮೊಟ್ಟೆ ಸಹಕಾರಿ. ಪ್ರೋಟಿನ್‌ ಉದ್ದೇಶದಿಂದಲೇ ನಿತ್ಯವೂ ಲಕ್ಷಾಂತರ ಮಂದಿ ಮೊಟ್ಟೆಯನ್ನು ಖರೀದಿ ಮಾಡ್ತಾರೆ. ಅದ್ರಲ್ಲೂ ಮಹಾನಗರಗಳಲ್ಲಿ ಆನ್‌ಲೈನ್‌ ಮೂಲಕವೇ ಮೊಟ್ಟೆ ಖರೀದಿ ನಡೆಯುತ್ತಿದೆ. ಆದರೆ ಇ ಕಾಮರ್ಸ್‌ ಸೈಟ್‌ಗಳ ಮೂಲಕ ಕಳಪೆ ಗುಣಮಟ್ಟದ ಮೊಟ್ಟೆಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಆಹಾರ ನಿಯಂತ್ರಣ ಸಂಸ್ಥೆಯಾದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ತೀವ್ರ ಕಳವಳ ವ್ಯಕ್ತಪಡಿಸಿದೆ.

ಎಫ್ಎಸ್‌ಎಸ್‌ಎಐ ನೀಡಿರುವ ವರದಿಯ ಪ್ರಕಾರ, ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಳಪೆ ಗುಣಮಟ್ಟದ ಮೊಟ್ಟೆಗಳ ಮಾರಾಟದ ಕುರಿತು ಗ್ರಾಹಕರ ದೂರುಗಳಿಗೆ ಸಂಬಂಧಿಸಿದಂತೆ ಕ್ವಿಕ್-ಕಾಮರ್ಸ್ ಸಂಸ್ಥೆಯಾದ ‘ಬ್ಲಿಂಕಿಟ್’ (Blinkit) ನಿಂದ FSSAI ವಿವರಣೆಯನ್ನು ಕೇಳಿದೆ.

ಕಳಪೆ ಗುಣಮಟ್ಟದ ಮೊಟ್ಟೆ ವಿತರಿಸಿತ್ತಾ ಬ್ಲಿಂಕಿಟ್‌ ?

ಬ್ಲಿಂಕಿಟ್‌ ಇ- ಕಾಮರ್ಸ್‌ ಸೈಟ್‌ ಬಳಸಿ ಆನ್‌ಲೈನ್‌ ಮೂಲಕ ಅನೇಕ ಗ್ರಾಹಕರು ಮೊಟ್ಟೆಗಳಿಂದ ದುರ್ವಾಸನೆ ಬರುತ್ತಿದ್ದು, ಅವುಗಳ ವಿನ್ಯಾಸ ರಬ್ಬರ್‌ನಂತಿದೆ ಎಂದು ದೂರುಗಳನ್ನು ಸಲ್ಲಿಕೆ ಮಾಡಿದ್ದಾರೆ. ಅಲ್ಲದೇ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಪ್ಲಾಟ್‌ ಫಾರ್ಮ್‌ಗಳಲ್ಲಿ ಮಾರಾಟ ಮಾಡುವ ಇ ಕಾಮರ್ಸ್‌ ಕಂಪೆನಿಗಳೇ ತಮ್ಮ ಉತ್ಪನ್ನಕ್ಕೆ ಜವಾಬ್ದಾರರು ಎಂದು ಹೇಳಿದ್ದಾರೆ.

FSSAI ಬ್ಲಿಂಕಿಟ್‌ಗೆ ನೀಡಿದ ಎಚ್ಚರಿಕೆ ಏನು ?

ಸಾಮಾಜಿಕ ಮಾಧ್ಯಮಗಳ ಮೂಲಕ ಗ್ರಾಹಕರು ಸಲ್ಲಿಕೆ ಮಾಡಿರುವ ದೂರುಗಳನ್ನು ಆಧರಿಸಿ, FSSAI ಸ್ವಯಂಪ್ರೇರಿತವಾಗಿ (Suo-moto) ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಬ್ಲಿಂಕ್ ಕಾಮರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಪತ್ರ ಬರೆದಿದೆ. ಈ ದೂರುಗಳಿಗೆ ಸಂಬಂಧಿಸಿದಂತೆ ಒಂದು ವಾರದೊಳಗೆ ಸಮಗ್ರ “ಕೈಗೊಂಡ ಕ್ರಮಗಳ ವರದಿ” (Action Taken Report – ATR) ಯನ್ನು ಸಲ್ಲಿಸುವಂತೆ ಸೂಚಿಸಿದೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಆಹಾರ ವಸ್ತುಗಳ ಖರೀದಿಗೆ ಸಂಬಂಧಿಸಿದಂತೆ ಆನ್‌ಲೈನ್‌ ಮೂಲಕ ಮಾರಾಟ ಮಾಡಲಾಗುವ ಉತ್ಪನ್ನಗಳ ಸುರಕ್ಷತೆ ಹಾಗೂ ಗುಣಮಟ್ಟದ ಜೊತೆಗೆ ವಿಶ್ವಾಸಾರ್ಹತೆ ಕಾಪಾಡಲು ಇ ಕಾಮರ್ಸ್‌ ಕಂಪೆನಿಗಳು ಕಡ್ಡಾಯವಾಗಿ ನಿಯಮಗಳನ್ನು ಪಾಲನೆ ಮಾಡಲೇ ಬೇಕು ಎಂದು ಎಫ್‌ಎಸ್‌ಎಸ್‌ಎಐ ತಿಳಿಸಿದೆ.

Also Read: 1947ರಲ್ಲಿ ಪೆಟ್ರೋಲ್ ಬೆಲೆ ಎಷ್ಟು ಗೊತ್ತಾ? ಬೆಲೆ ಕೇವಲ ಪೈಸೆಗಳಲ್ಲಿ ಇತ್ತು

ಮೊಟ್ಟೆಗಳ ತಾಜಾತನ ಕಾಯ್ದುಕೊಳ್ಳುವುದು ಹೇಗೆ ?

ಎಫ್‌ಎಸ್‌ಎಸ್‌ಎಐ (FSSAI) ನೀಡಿರುವ ಮಾಹಿತಿಯ ಪ್ರಕಾರ, ಮೊಟ್ಟೆಗಳು ಇಟ್ಟ ನಂತರ ಸುಮಾರು 28±2°C ಕೋಣೆಯ ಉಷ್ಣಾಂಶದಲ್ಲಿ 10-12 ದಿನಗಳವರೆಗೆ ತಮ್ಮ ತಾಜಾತನವನ್ನು ಕಾಯ್ದುಕೊಳ್ಳುತ್ತವೆ. ಆದರೆ ಹೆಚ್ಚಿನ ತಾಪಮಾನದಲ್ಲಿ ಅವು ಬೇಗನೆ ಹಾಳಾಗುತ್ತವೆ. ಮೊಟ್ಟೆಯ ತಾಜಾತನವನ್ನು ಕಾಪಾಡುವಲ್ಲಿ ತಾಪಮಾನವು ಪ್ರಮುಖ ಪಾತ್ರ ವಹಿಸುತ್ತದೆ.

  • ಮೊಟ್ಟೆಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವಾಗ, ಅವುಗಳನ್ನು ನಿಗದಿತ ಶೆಲ್ಫ್‌ಗಳು ಅಥವಾ ಎಗ್ ಕೇಸ್‌ಗಳಲ್ಲಿ ಇಡುವುದು ಉತ್ತಮ.
  • ತಂಪಾದ ತಾಪಮಾನ ಅಥವಾ ಸುಸಜ್ಜಿತ ಗಾಳಿ ಇರುವ ಜಾಗದಲ್ಲಿ ಮೊಟ್ಟೆಗಳನ್ನು ಇಡುವ ಅಂಗಡಿಗಳಿಂದಲೇ ಮೊಟ್ಟೆಗಳನ್ನು ಖರೀದಿಸಿ.
  • ಮೊಟ್ಟೆಗಳನ್ನು ಒರಟಾಗಿ ನಿರ್ವಹಿಸುವುದು ಅಥವಾ ಹೆಚ್ಚು ತಾಪಮಾನವಿರುವ ಬಿಸಿ ವಾಹನಗಳಲ್ಲಿ ಬಿಡುವುದನ್ನು ಗ್ರಾಹಕರು ಕಡ್ಡಾಯವಾಗಿ ತಪ್ಪಿಸಬೇಕು. ಮನೆಗೆ ತಲುಪಿದ ತಕ್ಷಣ ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿ ಇಡಿ.
  • ಮನೆಯಲ್ಲೇ ಮೊಟ್ಟೆಯ ಗುಣಮಟ್ಟವನ್ನು ಪರೀಕ್ಷಿಸುವುದು ಹೇಗೆ?
    FSSAI ನ ಯೂಟ್ಯೂಬ್ ವಿಡಿಯೋ ಪ್ರಕಾರ, ಮನೆಯಲ್ಲೇ ಮೊಟ್ಟೆಯ ಗುಣಮಟ್ಟವನ್ನು ಸುಲಭವಾಗಿ ಪರೀಕ್ಷಿಸಬಹುದು:
  • ಒಂದು ಪಾತ್ರೆಯಲ್ಲಿ ನೀರನ್ನು ತುಂಬಿಸಿ, ಅದರಲ್ಲಿ ಮೊಟ್ಟೆಯನ್ನು ಮುಳುಗಿಸಿ.
  • ಈಗ ಮೊಟ್ಟೆಯ ಸ್ಥಿತಿಯನ್ನು ಗಮನಿಸಿ. ಮೊಟ್ಟೆಯು ತಾಜಾವಾಗಿದ್ದರೆ, ಅದು ಪಾತ್ರೆಯ ತಳದಲ್ಲಿ ಅಡ್ಡಲಾಗಿ ಕುಳಿತುಕೊಳ್ಳುತ್ತದೆ.
  • ಮೊಟ್ಟೆಯು ಸ್ವಲ್ಪ ಹಳೆಯದಾಗಿದ್ದರೆ, ಅದು ತಳದಲ್ಲಿ ಒಂದು ಕಡೆ ಮೇಲಕ್ಕೆದ್ದು ನಿಲ್ಲುತ್ತದೆ.

ಒಂದು ವೇಳೆ ಮೊಟ್ಟೆಯು ಕೊಳೆತುಹೋಗಿದ್ದರೆ, ಅದು ನೀರಿನ ಮೇಲ್ಮೈಯಲ್ಲಿ ತೇಲುತ್ತದೆ. (ಮೊಟ್ಟೆ ಹಳೆಯದಾದಂತೆ ಅದರೊಳಗಿನ ನೀರಿನಂಶ ಕಡಿಮೆಯಾಗಿ ಗಾಳಿಯ ಪಾಕೆಟ್ ದೊಡ್ಡದಾಗುವುದರಿಂದ ಹಳೆಯ ಮೊಟ್ಟೆ ತೇಲುತ್ತದೆ).

ತಜ್ಞರ ಪ್ರಕಾರ, ಪ್ರತಿದಿನ ಒಂದು ಮೊಟ್ಟೆಯನ್ನು ತಿನ್ನುವುದರಿಂದ ದೇಹಕ್ಕೆ 75-76 ಕ್ಯಾಲೊರಿಗಳು, 7-8 ಗ್ರಾಂ ಪ್ರೊಟೀನ್, 5 ಗ್ರಾಂ ಕೊಬ್ಬು ಸಿಗುತ್ತದೆ. ಇದು ಸ್ನಾಯುಗಳ ಬೆಳವಣಿಗೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪ್ರತಿ ಮೊಟ್ಟೆಯಲ್ಲಿ 6 ಗ್ರಾಂ ಗಿಂತ ಹೆಚ್ಚು ಪ್ರೊಟೀನ್ ಇರುವುದರಿಂದ, ಇದು ಮಕ್ಕಳಿಗೆ ಅತ್ಯುತ್ತಮ ಪೌಷ್ಟಿಕ ಆಹಾರವಾಗಿದೆ.

Sale of poor quality eggs online FSSAI seeks explanation from e-commerce firms

 

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories