SBI : ಬ್ಯಾಂಕ್ ವ್ಯವಹಾರದಲ್ಲಿ ಹಲವು ಬದಲಾವಣೆ : ಗ್ರಾಹಕರಿಗೆ ಮಹತ್ವದ ಸೂಚನೆ

ನವದೆಹಲಿ : ಭಾರತ ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಂಗ್ ಸೇವೆಯಲ್ಲಿ ಹಲವು ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಅದ್ರಲ್ಲೂ ಎಟಿಎಂ ಹಾಗೂ ನಗದ ಪಡೆಯುವಿಕೆಯ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಇನ್ಮುಂದೆ ಇತರ ಬ್ಯಾಂಕುಗಳ ಎಟಿಎಂ ಹಾಗೂ ಚೆಕ್ ಬಳಕೆ ಇನ್ನಷ್ಟು ದುಬಾರಿಯಾಗಲಿದೆ.

ಪ್ರಮುಖವಾಗಿ BSBD ಖಾತೆದಾರರಿಗೆ ಪ್ರತೀ ತಿಂಗಳು ನಾಲ್ಕು ಉಚಿತ ವಿಥ್ ಡ್ರಾ ಮಿತಿಯನ್ನು ನೀಡಲಾಗಿದೆ. ಇದರಲ್ಲಿ ಎಟಿಎಂ ಹಾಗೂ ಬ್ಯಾಂಕ್ ಶಾಕೆಗಳನ್ನು ಬಳಸಿ ವ್ಯವಹಾರ ಮಾಡಬಹುದಾಗಿದೆ. ಆದ್ರೆ ವಿಥ್ ಡ್ರಾ ಅವಧಿ ಮುಗಿದ ನಂತರದಲ್ಲಿ ಪ್ರತೀ ವಿಥ್ ಡ್ರಾ ಗೆ 15 ರೂಪಾಯಿ ಹಾಗೂ ಜಿಎಸ್ ಟಿಯನ್ನು ವಿಧಿಸಲಾಗುತ್ತದೆ. ಆದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಹಾಗೂ ಎಟಿಎಂ ವ್ಯವಹಾರಕ್ಕೆ ಇದು ಅನ್ವಯವಾಗುವುದಿಲ್ಲ.

ಕೇವಲ ಎಟಿಎಂ ವ್ಯವಹಾರಕ್ಕೆ ಮಾತ್ರವಲ್ಲ ಚೆಕ್ ವ್ಯವಹಾರದಲ್ಲಿಯೂ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಪ್ರಮುಖವಾಗಿ ಗ್ರಾಹಕರಿಗೆ ಒಂದು ವರ್ಷದ ಅವಧಿಗೆ 10 ಚೆಕ್ ಲೀವ್ಸ್ ಗಳನ್ನು ನೀಡಲಾಗುತ್ತೆ. ಆದರೆ 10 ಚೆಕ್ ಲೀವ್ಸ್ ಮುಗಿದ ನಂತರದ ಮತ್ತೆ 10 ಚೆಕ್ ಲೀವ್ಸ್ ಪಡೆಯಲು 40 ರೂಪಾಯಿ ಹಾಗೂ ಜಿಎಸ್ ಟಿ, 25 ಚೆಕ್ ಲೀವ್ಸ್ ಗೆ 75 ರೂ. ಮತ್ತು ಜಿಎಸ್ ಟಿ ಹಾಗೂ ತುರ್ತು ಚೆಕ್ ಬುಕ್ ಬೇಕಾದ್ರೆ 10 ಚೆಕ್ ಲೀವ್ಸ್ ಪಡೆಯಲು ಜಿಎಸ್ ಟಿ ಜೊತೆಗೆ 50 ರೂಪಾಯಿ ನೀಡಬೇಕಾಗುತ್ತದೆ. ಆದರೆ ಈ ನಿಯಮಗಳು ಹಿರಿಯ ನಾಯಕರಿಗೆ ಅನ್ವಯವಾಗುವುದಿಲ್ಲ.

ಗ್ರಾಹಕರು ನಡೆಸುವ ನಗದು ವ್ಯವಹಾರದ ಮೇಲೆಯೂ ನಿರ್ಬಂಧವನ್ನು ಹೇರಲಾಗಿದೆ. ಪ್ರಮುಖವಾಗಿ ಈ ಹಿಂದೆ ದಿನಕ್ಕೆ ಚೆಕ್ ಬಳಸಿ ನಗರು ಹಣ ಪಡೆಯುವ ಮಿತಿಯನ್ನು 50 ಸಾವಿರದಿಂದ 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇನ್ನು ಚೆಕ್ ಇಲ್ಲದೇ ಪಾಸ್ ಬುಕ್ ಬಳಸಿ 25 ಸಾವಿರ ರೂಪಾಯಿ ಹಾಗೂ ಥರ್ಡ್ ಪಾರ್ಟಿ ವಿಥ್ ಡ್ರಾ ಮಿಥಿಯನ್ನು 50 ಸಾವಿರಕ್ಕೆ ನಿಗದಿ ಮಾಡಲಾಗಿದೆ. ಈ ಆದೇಶ ಮುಂದಿನ ತಿಂಗಳು ಜಾರಿಗೆ ಬರುವ ಸಾಧ್ಯತೆಯಿದೆ.

Comments are closed.