ಜೊಮಾಟೊ ಕಂಪನಿಗೆ ಶಾಕ್: ಸಹಸಂಸ್ಥಾಪಕ ಗೌರವ್ ಗುಪ್ತಾ ರಾಜೀನಾಮೆ

ನವದೆಹಲಿ: ಜನಪ್ರಿಯ ಆಹಾರ ಪೊರೈಕೆ ಸಂಸ್ಥೆ ಜೊಮಾಟೋಗೆ ಶಾಕ್ ಎದುರಾಗಿದ್ದು, ಕಂಪನಿಯ ಬೆಳವಣಿಗೆಗೆ ದುಡಿದಿದ್ದ ಸಹ-ಸಂಸ್ಥಾಪಕ ಗೌರವ್ ಗುಪ್ತಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಜೊಮಾಟೋ ಪೊರೈಕೆ ವಿಭಾಗದ ಮುಖ್ಯಸ್ಥರಾಗಿದ್ದ ಗೌರವ್ ಗುಪ್ತಾ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗೌರವ್ ತಮ್ಮ ಹುದ್ದೆ ತೊರೆದಿರುವ ಸಂಗತಿಯನ್ನು ಮಂಗಳವಾರ ಉದ್ಯೋಗಿಗಳಿಗೆ ಮೇಲ್ ಮೂಲಕ ತಿಳಿಸಿದ್ದಾರೆ.

ನಾನು ನನ್ನ ಜೀವನದಲ್ಲಿ ಹೊಸ ತಿರುವು ತೆಗೆದುಕೊಳ್ಳುತ್ತಿದ್ದೇನೆ ಎಂದಿರುವ ಗೌರವ್ ಗುಪ್ತ,ಜೊಮಾಟೋದಲ್ಲಿ ಕಳೆದ 6 ವರ್ಷ ಅದ್ಭುತವಾಗಿತ್ತು. ಈಗ ಜೊಮಾಟೊ ಮುಂದುವರೆಸಲು ಸೂಕ್ತ ತಂಡವಿದೆ ಎಂದಿದ್ದಾರೆ. ‘

ಜೊಮಾಟೊ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಗೆ ಧನ್ಯವಾದ ಹೇಳಿರುವ ಗೌರವ್, ನಿಮ್ಮ ಪ್ರಯಾಣದ ಭಾಗವಾಗಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ಇದಕ್ಕೆ ಉತ್ತರಿಸಿರುವ ಗೋಯಲ್ ನೀವಿಲ್ಲದ ಜೊಮಾಟೊ ಊಹಿಸಿಕೊಳ್ಳುವುದು ಕಷ್ಟ ಎಂದಿದ್ದಾರೆ.

( Zomato Co-founder Gaurav Gupta Resigns )

Comments are closed.