ನಟಿಗೆ ಪೋಟೋಶೂಟ್ ಕಂಟಕ: ದೋಣಿ ಏರಿದ್ದಕ್ಕೆ ನಿಮಿಷಾ ಅರೇಸ್ಟ್

ಚಿತ್ರರಂಗ ಯಾವುದೇ ಇರಲಿ ನಟಿಯರು ದಿನಕ್ಕೊಂದು ಪೋಟೋಶೂಟ್ ಮೂಲಕ ಗಮನ ಸೆಳೆಯೋದು ಕಾಮನ್. ಹೀಗೆ ವಿಭಿನ್ನ ಪೋಟೋಶೂಟ್ ಮೂಲಕ ಬೇಡಿಕೆ ಹೆಚ್ಚಿಸಿ ಕೊಳ್ಳಲು ಹೋದ ನಟಿ ನಿಮಿಷಾ ಆಸ್ತಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.

ಕೇರಳದ ಪಂಬಾ ನದಿಯ ಸನಿಹದಲ್ಲಿರುವ ದೇವಾಲಯದಲ್ಲಿ ದೇವರ ಉತ್ಸವಕ್ಕಾಗಿ ಹಾವಿನ ಆಕಾರದಲ್ಲಿ ದೋಣಿ ನಿರ್ಮಿಸಲಾಗಿದೆ. ಮಹಿಳೆಯರು ಈ ದೋಣಿಯನ್ನು ಏರುವುದು ಹಾಗೂ ಅದರ ಬಳಿ ಚಪ್ಪಲಿ ಧರಿಸಿಕೊಂಡು ಹೋಗುವಂತಿಲ್ಲ.

ಆದರೆ ಪೋಟೋಶೂಟ್ ನೆಪದಲ್ಲಿ ನಿಮಿಷಾ ಚಪ್ಪಲಿ ಸಮೇತ ದೋಣಿ ಏರಿದ್ದು, ಪೋಟೋಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಪೋಟೋಗಳು ವೈರಲ್ ಆಗುತ್ತಿದ್ದಂತೆ ನಿಮಿಷಾ ವಿರುದ್ಧ ದೇವಾಲಯದ ಆಡಳಿತ ಮಂಡಳಿ ಗರಂ ಆಗಿದ್ದು, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದೆ.

ಹೀಗಾಗಿ ದೋಣಿ ಏರಿ ಧಾರ್ಮಿಕ ನಂಬಿಕೆ ಹಾಗೂ ಆಚರಣೆಗೆ ಧಕ್ಕೆ ತಂದ ಆರೋಪದಡಿ ನಟಿ ನಿಮಿಷಾ ಹಾಗೂ ಇದಕ್ಕೆ ಆಕೆಗೆ ನೆರವಾದ ಸ್ನೇಹಿತನನ್ನು ಬಂಧಿಸಲಾಗಿದೆ. ಬಳಿಕ ಬಿಡುಗಡೆಗೊಂಡ ನ      ಟಿ ನಿಮಿಷಾ ಮಾಹಿತಿ ನೀಡಿದ್ದು, ದೋಣಿ ಏರಬಾರದು ಎಂಬುದು ನನಗೆ ಗೊತ್ತಿರಲಿಲ್ಲ. ನಾನು ಪೋಟೋಗಳನ್ನು ಡಿಲೀಟ್ ಮಾಡಿದ ಮೇಲೂ ನನಗೆ ಬೆದರಿಕೆ ಬರುತ್ತಿದೆ. ಇದು ನನಗೆ ಹಾಗೂ ಕುಟುಂಬಕ್ಕೆ ಇಕ್ಕಟ್ಟಿನ ಸ್ಥಿತಿ ತಂದಿದೆ ಎಂದಿದ್ದಾರೆ.

ಇದನ್ನೂ ಓದಿ : ಮೊದಲ ಬಾರಿಗೆ ಮೈಮುಚ್ಚೋ ಬಟ್ಟೆಯಲ್ಲೂ ಗಮನಸೆಳೆದ ನಟಿ- ಮಾಡೆಲ್ ಕಿಮ್

ಇದನ್ನೂ ಓದಿ : ತ್ರಿಷಾ ಕೃಷ್ಣನ್​​ ಹಾಟ್ ಹಾಟ್ ಫೋಟೋ ವೈರಲ್​​..!

( Nimisha faced sharp criticism for entering the Palliyodam by wearing footwear )

Comments are closed.