IRCTC Vrat Thali : ಉಪವಾಸ ಮಾಡುವ ಭಕ್ತರಿಗೆ ಶುಭ ಸಮಾಚಾರ; ನವರಾತ್ರಿಗೆ ರೈಲುಗಳಲ್ಲಿ ವೃತ ಥಾಲಿಗಳು ಲಭ್ಯ

ಈ ವರ್ಷ ಇದೇ ಸೆಪ್ಟೆಂಬರ್‌ 26 ರಂದು ನವರಾತ್ರಿ ಪ್ರಾರಂಭವಾಗುತ್ತದೆ. ಅನೇಕ ಭಕ್ತಾದಿಗಳು ನವರಾತ್ರಿಯ ಸಮಯದಲ್ಲಿ ಉಪವಾಸ ವೃತ (Fasting) ಕೈಗೊಳ್ಳುತ್ತಾರೆ. ಹಾಗೆ ರೈಲುಗಳಲ್ಲಿ ಪ್ರಯಾಣಿಸುವ ಅವಶ್ಯಕತೆಯೂ ಇರುತ್ತದೆ. ಅಂತಹ ಸಂದರ್ಭದಲ್ಲಿ ಹಲವರಲ್ಲಿ ಉಪವಾಸದ ಬಗ್ಗೆ ಚಿಂತೆ ಕಾಡುತ್ತಿರುತ್ತದೆ. ಹಬ್ಬದ ಸಂದರ್ಭದಲ್ಲಿ ರೈಲು ಪ್ರಯಾಣ ಕೈಗೊಳ್ಳುವ ಭಕ್ತಾದಿಗಳಿಗೆ IRCTC ಶುಭ ಸಮಾಚಾರ ನೀಡಿದೆ. ಪ್ರಯಾಣದ ಸಂದರ್ಭದಲ್ಲಿ ನಿಶ್ಚಿಂತಯಿಂದ ಉಪವಾಸ ಕೈಗೊಳ್ಳಬಹುದಾಗಿದೆ. IRCTC ರೇಲ್ವೆ ಪ್ರಯಾಣಿಕರಿಗೆ ವಿಶೇಷ ವೃತದ ಥಾಲಿಗಳು (IRCTC Vrat Thali) ರೈಲಿನಲ್ಲಿಯೇ ಸಿಗುವಂತೆ ವ್ಯವಸ್ಥೆ ಮಾಡಿದೆ. ವೃತದ ಥಾಲಿಯು ದೇಶಾದ್ಯಂತ 400 ರೇಲ್ವೇ ಸ್ಟೇಷನ್‌ಗಳಲ್ಲಿ ಲಭ್ಯವಿರುತ್ತದೆ.

ರೇಲ್ವೆಯ ಈ ನಿರ್ಧಾರದಿಂದ ಉಪವಾಸದ ಸಮಯದಲ್ಲಿ ಊಟದ ಬಗ್ಗೆ ಪ್ರಯಾಣಿಕರು ಇನ್ನು ಯಾವುದೇ ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ. IRCTC ನವರಾತ್ರಿಯ ಉಪವಾಸಕ್ಕಾಗಿ ಊಟದ ತಟ್ಟೆಯನ್ನು ಒದಗಿಸುತ್ತದೆ. ಈ ಸೌಲಭ್ಯವು 400 ಸ್ಟೇಷನ್‌ಗಳಲ್ಲಿ ಲಭ್ಯವಿರಲಿದೆ. ವೃತದ ಥಾಲಿಯನ್ನು ಆರ್ಡರ್‌ ಮಾಡಲು ಪ್ರಯಾಣಿಕರು 1323ಗೆ ಕರೆ ಮಾಡುವ ಮೂಲಕ ಬುಕ್‌ ಮಾಡಬಹುದಾಗಿದೆ. ಸ್ವಲ್ಪ ಸಮಯದ ನಂತರ ಶುಚಿಯಾದ ಉಪವಾಸದ ಥಾಲಿಯನ್ನು ಪ್ರಯಾಣಿಕರು ಕುಳಿತ ಜಾಗಕ್ಕೆ ತಲುಪಿಸಲಾಗುತ್ತದೆ.

ಇದನ್ನೂ ಓದಿ : Actor Kiccha Sudeep :ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬರಲಿದ್ದಾರೆ ನಟ ಕಿಚ್ಚ ಸುದೀಪ್

ನವರಾತ್ರಿಯ ಉಪವಾಸದ ಸಮಯದಲ್ಲಿ ಅನೇಕ ಪ್ರಯಾಣಿಕರು ಆಹಾರ ಮತ್ತು ಪಾನೀಯದ ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ವಿಶೇಷ ಥಾಲಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಬೇಡಿಕೆಗೆ ಅನುಗುಣವಾಗಿ ಈ ವ್ಯವಸ್ಥೆಯನ್ನು ಮುಂದುವರಿಸಲಾಗುವುದು ಎಂದು IRCTC ಯ ಪಿಆರ್‌ಒ ಆನಂದ್‌ ಕುಮಾರ್‌ ಝಾ ಹೇಳಿದ್ದಾರೆ.

ಯಾವ ಥಾಲಿಗೆ (IRCTC Vrat Thali ) ಬೆಲೆ ಎಷ್ಟು?

IRCTC ವೃತದ ಥಾಲಿಗಳನ್ನು ಈ ರೀತಿಯಾಗಿ ಜೋಡಿಸಿದೆ. ಕಡಿಮೆ ಬೆಲೆಗೆ ಶುಚಿಯಾದ ವೃತದ ಥಾಲಿಗಳು ಪ್ರಯಾಣಿಕರಿಗೆ ಲಭ್ಯವಾಗಲಿದೆ.

ಹಣ್ಣುಗಳು, ಹುರುಳಿ ಪಕೋಡಾ ಮತ್ತು ಮೊಸರು ಇರುವ ಒಂದು ಥಾಲಿಗೆ 99 ರೂಪಾಯಿಗಳು.

2 ಪರಾಠಗಳು, ಆಲೂಗಡ್ಡೆ ಕರಿ, ಸಾಗು ಪುಡ್ಡಿಂಗ್ ಇರುವ ಒಂದು ಥಾಲಿಗೆ 99 ರೂಪಾಯಿಗಳು.

4 ಪರಾಠಗಳು, 3 ರೀತಿಯ ತರಕಾರಿ ಮತ್ತು ಸಾಗು ಕಿಚಡಿ ಇರುವ ಥಾಲಿಗೆ 199 ರೂಪಾಯಿಗಳು.

ಪನೀರ್‌ ಪರಾಠ, ವೃತ ಮಸಾಲಾ, ಸಿಂಗಡ ಮತ್ತು ಆಲೂ ಪರಾಠ ಇರುವ ಥಾಲಿಗೆ 250 ರೂಪಾಯಿಗಳು.

ಇದನ್ನೂ ಓದಿ : Mysuru Dasara 2022 : ಪ್ರಧಾನಿ ಮೋದಿ ಮೈಸೂರು ದಸರಾಗೆ ವಿಸಿಟ್​ ನೀಡುವ ಬಗ್ಗೆ ಎಸ್​.ಟಿ ಸೋಮಶೇಖರ್​ ಸ್ಪಷ್ಟನೆ

(IRCTC Vrat Thali to be available on trains. Navaratri fasting)

Comments are closed.