Rahul Dravid Plan : ಟಿ20 ವಿಶ್ವಕಪ್ ಗೆಲ್ಲಲು ಕೋಚ್ ದ್ರಾವಿಡ್ ಜಬರ್ದಸ್ತ್ ಪ್ಲಾನ್; ದ್ರೋಣಾಚಾರ್ಯನ ಬೊಂಬಾಟ್ ಪ್ಲಾನ್’ಗೆ ಬಿಸಿಸಿಐ ಗ್ರೀನ್ ಸಿಗ್ನಲ್

ಬೆಂಗಳೂರು : (Coach Rahul Dravid Plan ) ಭಾರತ ಕ್ರಿಕೆಟ್ ತಂಡದ ಕಳೆದ 9 ವರ್ಷಗಳಿಂದ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. 2011ರಲ್ಲಿ ಕೊನೆಯ ಬಾರಿ ವಿಶ್ವಕಪ್ ಗೆದ್ದ ನಂತರ ವರ್ಲ್ಡ್ ಕಪ್ ಭಾರತಕ್ಕೆ ಮರೀಚಿಕೆಯಾಗುತ್ತಾ ಬಂದಿದೆ. ಈ ಬಾರಿ ವಿಶ್ವಕಪ್ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಇದಕ್ಕಾಗಿ ಜಬರ್ದಸ್ತ್ ಪ್ಲಾನ್ ಮಾಡಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿ (ICC T20 World Cup) ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾ ದಲ್ಲಿ ನಡೆಯಲಿದೆ. ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ವಿಶ್ವಕಪ್ ಗೆಲ್ಲಲು ಪಣ ತೊಟ್ಟಿರುವ ಕೋಚ್ ರಾಹುಲ್ ದ್ರಾವಿಡ್ (Team India Coach Rahul Dravid) ಎರಡು ಬೇಡಿಕೆಗಳನ್ನು ಬಿಸಿಸಿಐ ಮುಂದಿಟ್ಟಿದ್ದಾರೆ.
ದ್ರಾವಿಡ್ ಬೇಡಿಕೆ ನಂ.1: ನಾಲ್ಕು ದಿನ ಮೊದಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾಗೆ ತೆರಳುವುದು.
ದ್ರಾವಿಡ್ ಬೇಡಿಕೆ ನಂ.2: ವಿಶ್ವಕಪ್ ಆರಂಭಕ್ಕೂ ಮುನ್ನ 2 ಹೆಚ್ಚುವರಿ ಅಭ್ಯಾಸ ಪಂದ್ಯಗಳನ್ನು ಆಡಿಸುವುದು.

ಇದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಬಿಸಿಸಿಐ ಮುಂದಿಟ್ಟಿರುವ ಬೇಡಿಕೆ. ದ್ರಾವಿಡ್ ಅವರ ಈ ಎರಡೂ ಬೇಡಿಕೆಗಳಿಗೆ ಬಿಸಿಸಿಐ ಗ್ರೀನ್ ಸಿಗ್ನಲ್ ಕೊಟ್ಟಿದೆ. ಹೀಗಾಗಿ ಆಕ್ಟೋಬರ್ 9ರಂದು ಆಸ್ಟ್ರೇಲಿಯಾಗೆ ತೆರಳಬೇಕಿದ್ದ ಟೀಮ್ ಇಂಡಿಯಾ ವಿಶ್ವಕಪ್ ತಂಡ, ಅಕ್ಟೋಬರ್ 5 ಅಥವಾ 6ರಂದು ಕಾಂಗರೂ ನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ.

ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತಕ್ಕೆ ಎರಡು ಅಭ್ಯಾಸ ಪಂದ್ಯಗಳು ನಿಗದಿಯಾಗಿವೆ. ಐಸಿಸಿ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ಅಕ್ಟೋಬರ್ 17ರಂದು ನ್ಯೂಜಿಲೆಂಡ್ ವಿರುದ್ಧ ಹಾಗೂ ಅಕ್ಟೋಬರ್ 18ರಂದು ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಈ ಎರಡೂ ಅಭ್ಯಾಸ ಪಂದ್ಯಗಳು ಬ್ರಿಸ್ಬೇನ್’ನ ಗಬ್ಬಾ ಮೈದಾನದಲ್ಲಿ ನಡೆಯಲಿವೆ. ಹೆಚ್ಚುವರಿಯಾಗಿ 2 ಅಭ್ಯಾಸ ಪಂದ್ಯಗಳಿಗೆ ಕೋಚ್ ರಾಹುಲ್ ದ್ರಾವಿಡ್ ಬೇಡಿಕೆ ಇಟ್ಟಿರುವ ಕಾರಣ, ಆಸ್ಟ್ರೇಲಿಯಾದ ಸ್ಥಳೀಯ ತಂಡಗಳ ಜೊತೆ ಪ್ರದರ್ಶನ ಪಂದ್ಯವನ್ನು ಆಯೋಜಿಸಲು ಬಿಸಿಸಿಐ ಮುಂದಾಗಿದೆ.

ಟಿ20 ವಿಶ್ವಕಪ್’ಗೆ (ICC T20 World Cup schedule) ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.

ಐಸಿಸಿ ಟಿ20 ವಿಶ್ವಕಪ್: ಭಾರತದ ವೇಳಾಪಟ್ಟಿ (ಗ್ರೂಪ್-2)
Vs ಪಾಕಿಸ್ತಾನ: ಅಕ್ಟೋಬರ್ 23
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್, ಮೆಲ್ಬೋರ್ನ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)

Vs ಅರ್ಹತಾ ಸುತ್ತಿನ ತಂಡ: ಅಕ್ಟೋಬರ್ 27
ಸ್ಥಳ: ಸಿಡ್ನಿ ಕ್ರಿಕೆಟ್ ಗ್ರೌಂಡ್, ಸಿಡ್ನಿ
ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ (ಭಾರತೀಯ ಕಾಲಮಾನ)

Vs ದಕ್ಷಿಣ ಆಫ್ರಿಕಾ: ಅಕ್ಟೋಬರ್ 30
ಸ್ಥಳ: ಪರ್ತ್
ಪಂದ್ಯ ಆರಂಭ: ಮಧ್ಯಾಹ್ನ 4.30ಕ್ಕೆ (ಭಾರತೀಯ ಕಾಲಮಾನ)

Vs ಬಾಂಗ್ಲಾದೇಶ: ನವೆಂಬರ್ 02
ಸ್ಥಳ: ಅಡಿಲೇಡ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)

Vs ಅರ್ಹತಾ ಸುತ್ತಿನ ತಂಡ: ನವೆಂಬರ್ 06
ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಮೈದಾನ, ಮೆಲ್ಬೋರ್ನ್
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ (ಭಾರತೀಯ ಕಾಲಮಾನ)

ನೇರಪ್ರಸಾರ (Live Telecast): Stat Sports Network
ಲೈವ್ ಸ್ಟ್ರೀಮಿಂಗ್ (Live Streaming): Disney + Hotstar

ಇದನ್ನೂ ಓದಿ : Rohit Sharma World No1 : T20 Cricket ನಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕವೇ 2328 ರನ್ ; ಹಿಟ್‌ಮ್ಯಾನ್ ರೋಹಿತ್ ಜಗತ್ತಿಗೇ ನಂ.1

ಇದನ್ನೂ ಓದಿ : India vs Australia 2nd T20: ಭಾರತಕ್ಕೆ ಮಾಡು ಇಲ್ಲ ಮಡಿ ಪಂದ್ಯ; ತಂಡದಲ್ಲಿ ಇದೊಂದು ಬದಲಾವಣೆ ಮಾಡದಿದ್ದರೆ ಗೆಲುವು ಕಷ್ಟ.. ಕಷ್ಟ

Coach Rahul Dravid Plan To Win T20 World Cup BCCI green signal

Comments are closed.