U Mumba vs Bengalore Bulls | ಇಂದು ಕೊನೆಯ ಲೀಗ್ ಎನ್‌ಕೌಂಟರ್, ಅಂತಿಮ ಪಂದ್ಯದಲ್ಲಿ ಬುಲ್ಸ್‌ಗೆ ಯು ಮುಂಬಾ ಎದುರಾಳಿ

ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ (Pro Kabaddi League) ಹಂತದಲ್ಲಿ ಇಂದು ಕೊನೆಯ ಮೂರು ಪಂದ್ಯಗಳು ನಡೆಯಲಿವೆ. ಈಗಾಗಲೇ ಪ್ಲೇ ಆಫ್ ಹಂತಕ್ಕೆ ಎಂಟ್ರಿ ಕೊಟ್ಟಿರುವ ಬೆಂಗಳೂರು ಬುಲ್ಸ್ ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಯು ಮುಂಬಾ (U Mumba vs Bengalore Bulls) ತಂಡವನ್ನು ಎದುರಿಸಲಿದೆ.

ಬೆಂಗಳೂರು ಬುಲ್ಸ್ (U Mumba vs Bangalore Bulls ) ತಂಡ ಆಡಿರುವ 21 ಪಂದ್ಯಗಳಲ್ಲಿ 13 ಗೆಲುವು 7 ಸೋಲು 1 ಟೈ ಸಹಿತ 73 ಅಂಕಗಳೊಂದಿಗೆ ಪಾಯಿಂಟ್ ಪಟ್ಟಯಲ್ಲಿ 3ನೇ ಸ್ಥಾನ ಪಡೆದಿದ್ದು, ಮೂರನೇ ತಂಡವಾಗಿ ಪ್ಲೇ ಆಫ್ ಹಂತಕ್ಕೇರಿದೆ. ಮಂಗಳವಾರ (ಡಿಸೆಂಬರ್ 13) ಮುಂಬೈನಲ್ಲಿ ನಡೆಯಲಿರುವ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡವನ್ನು ಎದುರಿಸಲಿದೆ.

ಶನಿವಾರದ ಮತ್ತೆರಡು ಪಂದ್ಯಗಳು ತಮಿಳ್ ತಲೈವಾಸ್ Vs ಹರ್ಯಾಣ ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್ Vs ಬೆಂಗಾಲ್ ವಾರಿಯರ್ಸ್ ಮಧ್ಯೆ ನಡೆಯಲಿವೆ. ಪ್ಲೇ ಆಫ್ ದೃಷ್ಠಿಯಿಂದ ಈ ಎರಡೂ ಪಂದ್ಯಗಳಿಗೆ ಯಾವುದೇ ಮಹತ್ವವಿಲ್ಲ. ಈ ನಾಲ್ಕು ತಂಡಗಳ ಪೈಕಿ ತಮಿಳ್ ತಲೈವಾಸ್ ಪ್ಲೇ ಆಫ್ ಪ್ರವೇಶಿಸಿದ್ದು, ಉಳಿದ ಮೂರೂ ತಂಡಗಳ ಪ್ಲೇ ಆಫ್ ಬಾಗಿಲು ಬಂದ್ ಆಗಿದ್ದು, ಇಂದಿನ ಪಂದ್ಯಗಳು ಕೇವಲ ಔಪಚಾರಿಕವಷ್ಟೇ.

ಶುಕ್ರವಾರ ನಡೆದ ಪಂದ್ಯಗಳಲ್ಲಿ ಪುಣೇರಿ ಪಲ್ಟನ್ ಪಡ ಯು.ಪಿ ಯೋಧಾ ವಿರುದ್ಧ 41-45ರಲ್ಲಿ ಸೋಲುಂಡರೆ, ಗುಜರಾತ್ ಜೈಂಟ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ 51-51ರಲ್ಲಿ ಟೈನಲ್ಲಿ ಅಂತ್ಯಗೊಂಡಿತು.

U Mumba vs Bangalore Bulls : ಪ್ರೊ ಕಬಡ್ಡಿ ಲೀಗ್-9: ಶನಿವಾರದ ಪಂದ್ಯಗಳು (Pro Kabaddi League) :

  1. ಬೆಂಗಳೂರು ಬುಲ್ಸ್ Vs ಯು ಮುಂಬಾ
  2. ಹರ್ಯಾಣ ಸ್ಟೀಲರ್ಸ್ Vs ತಮಿಳ್ ತಲೈವಾಸ್
  3. ಪಾಟ್ನಾ ಪೇರೇಟ್ಸ್ Vs ಬೆಂಗಾಲ್ ವಾರಿಯರ್ಸ್

ಇದನ್ನೂ ಓದಿ : Eliminator match : ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ಗೆ ದಬಾಂಗ್ ಡೆಲ್ಲಿ ಎದುರಾಳಿ

ಇದನ್ನೂ ಓದಿ : Tamil Talaiwas enters play off : ಅದ್ಭುತ ಕಂಬ್ಯಾಕ್‌ನೊಂದಿಗೆ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟ ತಮಿಳ್ ತಲೈವಾಸ್

ಇದನ್ನೂ ಓದಿ : Pro Kabaddi League: ಫೋಟೋ ಫಿನಿಷ್ ರೇಸ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ಪಡೆಗೆ ಸೋಲು

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

U Mumba vs Bengalore Bulls Last league encounter today, U Mumba will face Bulls in the final match

Comments are closed.