PM Kisan : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ : 20ನೇ ಕಂತು ಯಾವಾಗ ಬಿಡುಗಡೆ ?
PM Kisan : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಹಣವನ್ನು ರೈತರ ಖಾತೆಗೆ ಜಮೆ ಮಾಡುತ್ತಿದೆ. ರೈತರು ಕಾಯುತ್ತಿದ್ದ 20ನೇ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಬಿಗ್‌ಅಪ್ಡೇಟ್ಸ್ ಹೊರಬಿದ್ದಿದೆ.
ಪಿಎಂ ಕಿಸಾನ್ ಯೋಜನೆಯ ಮೂಲಕ ಪ್ರತೀ ರೈತ ಕುಟುಂಬಗಳಿಗೆ ವಾರ್ಷಿಕ 6 ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದೀಗ 20ನೇ ಕಂತಿನ ಹಣ ಬಿಡುಗಡೆಗೆ ರೈತರು ಕಾಯುತ್ತಿದ್ದಾರೆ.
ರೈತರಿಗೆ ಆರ್ಥಿಕ ಬೆಂಬಲ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯನ್ನು ಜಾರಿಗೆ ತಂದಿತ್ತು.
PM Kisan : 20ನೇ ಕಂತು ಬಿಡುಗಡೆ ಯಾವಾಗ ?
ಪಿಎಂ ಕಿಸಾನ್ (PM-KISAN) ಯೋಜನೆಯ 20ನೇ ಕಂತು ಜುಲೈ 2025 ರ ಕೊನೆಯ ವಾರ ಅಥವಾ ಆಗಸ್ಟ್ 2025 ರ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಜುಲೈ 18, 19, 20, 25 ರಂದು ಕಂತು ಬಿಡುಗಡೆಯಾಗಬಹುದು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಭಾರತ ಸರಕಾರ ಯಾವುದೇ ಅಧಿಕೃತ ದಿನಾಂಕ ಘೋಷಣೆ ಇನ್ನೂ ಆಗಿಲ್ಲ.
ಸಾಮಾನ್ಯವಾಗಿ, ಪಿಎಂ ಕಿಸಾನ್ ಕಂತುಗಳನ್ನು ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಈ ಬಾರಿ 20ನೇ ಕಂತಿನ ಬಿಡುಗಡೆ ವಿಳಂಬವಾಗಿದೆ.
Also Read : ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆ ಆಗಿದ್ಯಾ ? ಮೊಬೈಲ್‌ನಲ್ಲೇ ಚೆಕ್ ಮಾಡಿ
19ನೇ ಕಂತು 2025ರ ಫೆಬ್ರವರಿ 24 ರಂದು ಬಿಡುಗಡೆಯಾಗಿತ್ತು, ಸುಮಾರು 9.8 ಕೋಟಿಗೂ ಹೆಚ್ಚು ರೈತರಿಗೆ ₹22,000 ಕೋಟಿಗೂ ಅಧಿಕ ಹಣವನ್ನು ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗಿತ್ತು.
PM Kisan : ಯಾವ ರೈತರಿಗೆ 20ನೇ ಕಂತು ಸಿಗುತ್ತದೆ ?
20ನೇ ಕಂತಿನ ಹಣವನ್ನು ಪಡೆಯಲು ರೈತರು ಈ ಕೆಳಗಿನ ಕೆಲಸಗಳನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ:
ಇ-ಕೆವೈಸಿ (e-KYC) ಪೂರ್ಣಗೊಳಿಸಬೇಕು:
ಇದು ಕಡ್ಡಾಯವಾಗಿದೆ. ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿ OTP ಮೂಲಕ ಅಥವಾ ಸಾಮಾನ್ಯ ಸೇವಾ ಕೇಂದ್ರ (CSC)ಗಳಿಗೆ ತೆರಳಿ ಇಕೆವೈಸಿ ಮಾಡಿಸಬಹುದಾಗಿದೆ.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿರಬೇಕು: ನಿಮ್ಮ ಬ್ಯಾಂಕ್ ಖಾತೆ ಆಧಾರ್‌ಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ: IFSC ಕೋಡ್, ಖಾತೆ ಸಂಖ್ಯೆ ಇತ್ಯಾದಿ ಯಾವುದೇ ತಪ್ಪಿಲ್ಲ ಎಂದು ಖಚಿತಪಡಿಸಿಕೊಳ್ಳಿ.
Also Read : ವಾರ್ಷಿಕ 20 ರೂ. ಕಟ್ಟಿದ್ರೆ 2 ಲಕ್ಷ ರೂಪಾಯಿ ಜೀವ ವಿಮೆ
ಫಲಾನುಭವಿಗಳ ಹೆಸರು ಪರಿಶೀಲಿಸಿ:
ಪಿಎಂ ಕಿಸಾನ್ ಯೋಜನೆಯ ಅಧಿಕೃತ pmkisan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಅದರಲ್ಲಿ ‘ಫಲಾನುಭವಿಗಳ ಪಟ್ಟಿ’ಯಲ್ಲಿ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಅನ್ನೋದನ್ನು ಖಚಿತಪಡಿಸಿಕೊಳ್ಳಿ.
ಭೂ-ಸತ್ಯಾಪನೆ (Land Seeding) ಆಗಿರಬೇಕು: ಭೂ ದಾಖಲೆಗಳ ಸತ್ಯಾಪನೆ ಪೂರ್ಣಗೊಂಡಿರಬೇಕು.
ನಿಮ್ಮ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?
ನಿಮ್ಮ PM-KISAN ಕಂತಿನ ಸ್ಥಿತಿಯನ್ನು ಪರಿಶೀಲಿಸಲು:
ಅಧಿಕೃತ PM-KISAN ವೆಬ್‌ಸೈಟ್‌ಗೆ ಭೇಟಿ ನೀಡಿ: pmkisan.gov.in
‘Farmers Corner’ ವಿಭಾಗದಲ್ಲಿ ‘Beneficiary Status’ ಅಥವಾ ‘Know Your Status’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಇರುವ ಸಂಖ್ಯೆಯನ್ನು ನಮೂದಿಸಿದ, ಬ್ಯಾಂಕ್ ಖಾತೆಯ ವಿವರ ಅಥವಾ ಬ್ಯಾಂಕ್‌ಗೆ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಬೇಕು.
‘Get Data’ ಮೇಲೆ ಕ್ಲಿಕ್ ಮಾಡಿ. ನಿಮ್ಮ ಕಂತಿನ ಸ್ಥಿತಿ ಮತ್ತು ಇತರ ವಿವರಗಳು ಕಾಣಿಸುತ್ತವೆ.
PM-KISAN ಯೋಜನೆಯು ಅರ್ಹ ರೈತರಿಗೆ ವಾರ್ಷಿಕ ₹6,000 ಆರ್ಥಿಕ ಸಹಾಯವನ್ನು ಮೂರು ಸಮಾನ ಕಂತುಗಳಲ್ಲಿತಲಾ 2,000 ರೂಪಾಯಿಯನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಮೂಲಕ ನೀಡುತ್ತದೆ.
PM Kisan Samman Nidhi PM Kisan 20th Installment Relese Updates in Kannada News



