ಮೂರು ದಿನಗಳ ಬಳಿಕ ಮತ್ತೆ ಏರಿಕೆಯ ಹಾದಿಯಲ್ಲಿ ಬಂಗಾರ : ಬೆಳ್ಳಿ ದರ ಇಳಿಕೆ
ಭಾರೀ ದರ ಏರಿಕೆಯ ಮೂಲಕ ಎಲ್ಲರ ಹುಬ್ಬೇರಿಸಿದ್ದ ಬೆಳ್ಳಿಯ ದರದಲ್ಲಿ ಮತ್ತೊಮ್ಮೆ ಭಾರೀ ಕುಸಿತ ಕಂಡುಬಂದಿದೆ. ಒಂದೇ ದಿನದಲ್ಲಿ 1 ಕೆ.ಜಿ ಬೆಳ್ಳಿಯ ದರದಲ್ಲಿ ಬರೋಬ್ಬರಿ 20 ಸಾವಿರ ರೂಪಾಯಿ ಕುಸಿತ ಕಂಡುಬಂದಿದ್ದು 2 ಲಕ್ಷದ 80 ಸಾವಿರ ರೂಪಾಯಿಗೆ ಬಂದು ನಿಂತಿದೆ.
ಕಳೆದ ಮೂರು ದಿನಗಳಿಂದ ಇಳಿಕೆಯ ಹಾದಿಯಲ್ಲಿ ಸಾಗುವ ಮೂಲಕ ಚಿನ್ನಾಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡಿಸಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೊಮ್ಮೆ ಏರಿಕೆ ಕಂಡುಬಂದಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 760 ರೂಪಾಯಿ ಏರಿಕೆ ಕಂಡಿದ್ದು, 1 ಲಕ್ಷದ 50 ಸಾವಿರದ 353 ರೂಪಾಯಿ ಆಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿಯೂ ಏರಿಕೆ ಕಂಡಿದ್ದು 1,41,100 ರೂಪಾಯಿ ಆಗಿದೆ.
ಇದನ್ನೂ ಓದಿ: ಚಿನ್ನಾಭರಣ ಪ್ರಿಯರಿಗೆ ಕೇಂದ್ರದಿಂದ ಗುಡ್ನ್ಯೂಸ್ : ವಿದೇಶಗಳಿಂದ ಚಿನ್ನ ತರುವವರಿಗೆ ಸುವರ್ಣಾವಕಾಶ
ಇತ್ತ ಅಮೆರಿಕ ಹಾಗೂ ಭಾರತದ ನಡುವೆ ನಡೆದ ವ್ಯಾಪಾರ ವ್ಯವಹಾರದ ಒಪ್ಪಂದದ ಬಳಿಕ ಡಾಲರ್ ಎದುರು ರೂಪಾಯಿ ಮೌಲ್ಯ ಕೊಂಚ ಚೇತರಿಕೆ ಕಂಡಿದೆ. ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 117 ಪೈಸೆ ಏರಿಕೆ ಕಂಡಿದ್ದು 90.32ಕ್ಕೆ ಬೆಲೆ ತಲುಪಿದೆ. ಭಾರತದಲ್ಲಿನ ಉತ್ಪನ್ನಗಳು ಅಮೆರಿಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದರೆ ಭಾರತಕ್ಕೆ ಮತ್ತಷ್ಟು ಲಾಭವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.



