ವಾಟ್ಸಾಪ್ ಪೇಗೆ ಯುಪಿಐ ಲೈಸೆನ್ಸ್ : ಎನ್ ಪಿಐಎ ಸುಪ್ರೀಂ ನೋಟಿಸ್

 ನವದೆಹಲಿ : ಹಣ ವರ್ಗಾವಣೆ ಸೇರಿದಂತೆ ಗ್ರಾಹಕರ ಅನುಕೂಲಕ್ಕಾಗಿ ವಾಟ್ಸಾಪ್ ಇತ್ತೀಚಿಗಷ್ಟೇ ವಾಟ್ಸಾಫ್ ಸೌಲಭ್ಯವನ್ನು ಪರಿಚಯಿಸಿದೆ. ಆದ್ರೀಗ  ವಾಟ್ಸಾಪ್‌ ಆರಂಭಿಸಿರುವ ಪೇಮೆಂಟ್ಸ್‌ ಸೇವೆಯು ಸುರಕ್ಷಿತವೇ ಎಂಬ ವಿವಾದ ಇದೀಗ ಸುಪ್ರೀಂ ಕೋರ್ಟ್‌ ವಿಚಾರಣೆಯ ಹಂತಕ್ಕೆ ತಲುಪಿದೆ.

ವಾಟ್ಸಾಪ್‌ ವಾಣಿಜ್ಯೋದ್ದೇಶಕ್ಕೆ ಪೇಮೆಂಟ್‌ ಸೇವೆಯನ್ನು ಆರಂಭಿಸಲು ಯಾವ ಆಧಾರದಲ್ಲಿ ಲೈಸೆನ್ಸ್‌ ನೀಡಿದ್ದೀರಿ ಎಂದು ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾಗೆ (ಎನ್‌ಪಿಸಿಐ) ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾಯುಪಿಐ ವ್ಯವಸ್ಥೆಯ ಮಾಲೀಕತ್ವ ಎನ್‌ಪಿಸಿಐಗೆ ಸೇರಿದೆ ಎಂದ ನಂತರದಲ್ಲಿ ನೋಟೀಸ್ ನೀಡಿದೆ.

ಎನ್‌ಪಿಸಿಐ 2017ರ ಸೆ.15ರಂದು ಮಲ್ಟಿ ಬ್ಯಾಂಕಿಂಗ್‌ ಮಾದರಿಯನ್ನು ಅಳವಡಿಸಿದ್ದು, ಇದರಲ್ಲಿ ತಂತ್ರಜ್ಞಾನ ಪಾಲುದಾರಿಕೆಯನ್ನು ಥರ್ಡ್‌ ಪಾರ್ಟಿ ಆ್ಯಪ್‌ ಪ್ರೊವೈಡರ್‌ (ಟಿಪಿಎಪಿ) ಎಂದು ಪರಿಗಣಿಸಲಾಗಿದೆ. ದೊಡ್ಡ ಪ್ರಮಾಣದ ಗ್ರಾಹಕರನ್ನು ತಲುಪಲು ಎನ್‌ಪಿಸಿಐನ ಯುಪಿಐ ಸಿಸ್ಟಮ್‌ ಅನ್ನು ಈ ಮಲ್ಟಿಪಲ್‌ ಪೇಮೆಂಟ್‌ ಸರ್ವೀಸ್‌ ಪ್ರೊವೈಡರ್‌ ಬ್ಯಾಂಕ್‌ಗಳು ಬಳಸಲು ಅವಕಾಶ ಇದೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತಾನಾಗಿಯೇ ನೇರವಾಗಿ ಟಿಪಿಎಪಿಗಳಿಗೆ ಅನುಮೋದನೆ ನೀಡುವುದಿಲ್ಲ. ಎನ್‌ಪಿಸಿಐ ಲೈಸೆನ್ಸ್‌ ನೀಡುತ್ತದೆ. ಅಮೆಜಾನ್‌, ಗೂಗಲ್‌, ವಾಟ್ಸಾಪ್ಗೆ ಯುಪಿಐ ಅಡಿಯಲ್ಲಿ ಲೈಸೆನ್ಸ್‌ ಅನ್ನು ಎನ್‌ಪಿಸಿಐ ನೀಡಿದೆ ಎಂದು ಆರ್‌ಬಿಐ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ಮತ್ತು ನ್ಯಾಯಮೂರ್ತಿ ಎ.ಎಸ್‌ ಬೋಪಣ್ಣ, ವಿ. ರಾಮ ಸುಬ್ರಮಣಿಯನ್‌

ಅವರನ್ನು ಒಳಗೊಂಡಿದ್ದ ಪೀಠವು ಎನ್‌ಪಿಸಿಐ ಪರ ವಕೀಲರಾದ ನಿಖಿಲ್‌ ನಾಯರ್‌ ಅವರಿಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿತು.
ವಿಶ್ವಮ್‌ ಪರ ವಾದಿಸಿದ ಹಿರಿಯ ವಕೀಲರಾದ ಕೃಷ್ಣನ್‌ ವೇಣುಗೋಪಾಲ್‌, ವಾಟ್ಸಾಪ್‌ ಡೇಟಾಗಳು ಇಸ್ರೇಲ್‌ ಮೂಲದ ಪೆಗಾಸಸ್‌ ಸೈಬರ್‌ ದಾಳಿಗೆ ಸುಲಭ ಗುರಿಯಾಗುವ ಸಾಧ್ಯತೆಗಳಿವೆ ಎಂದು ದೂರಿದರು. ಆದರೆ ಈ ಆರೋಪವನ್ನು ವಾಟ್ಸಾಪ್‌ ನಿರಾಕರಿಸಿದೆ.

Comments are closed.