ದರ್ಶನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಡ್ತಾರಂತೆ ತರುಣ್ ಸುಧೀರ್ !

0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ ಇನ್ನೇನು ಬಂದೇ ಬಿಟ್ಟಿದೆ. ದಾಸನ ಹುಟ್ಟು ಹಬ್ಬವನ್ನು ಸಂಭ್ರಮಿಸೋದಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಅದ್ರಲ್ಲೂ ಈ ಬಾರಿ ದರ್ಶನ್ ಗೆಳೆಯ ನಿರ್ದೇಶಕ ತರುಣ್ ಸುಧೀರ್ ಸ್ಪೆಷಲ್ ಗಿಫ್ಟ್ ವೊಂದನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ.

ದರ್ಶನ್ ಹಾಗೂ ತರುಣ್ ಸುಧೀರ್ ಆತ್ಮೀಯ ಸ್ನೇಹಿತರು. ಸಿನಿಮಾ ರಂಗದಲ್ಲಿ ತರುಣ್ ಸುಧೀರ್ ನೆಲೆಯೂರುವಲ್ಲಿಯೂ ಸಾಕಷ್ಟು ಸಹಕಾರವನ್ನು ಕೊಟ್ಟಿದ್ದಾರೆ. ಇದೀಗ ಇಬ್ಬರ ಕಾಂಬಿನೇಷನ್ ನಲ್ಲಿ ರಾಬರ್ಟ್ ಸಿನಿಮಾ ರೆಡಿಯಾಗಿದೆ.

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾವೂ ಹೌದು. ಸೂಪರ್ ಹಿಟ್ ಸಿನಿಮಾ ಚೌಕ ನಂತರ ತರುಣ್ ಸುಧೀರ್ ರಾಬರ್ಟ್ ಸಿನಿಮಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ರಾಬರ್ಟ್ ಮೂಲಕ ದರ್ಶನ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.ಈಗಾಗಲೇ ಶೂಟಿಂಗ್ ಮುಗಿಸಿರೋ ರಾಬರ್ಟ್ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ರೆ, ವಿನೋದ್ ಪ್ರಭಾಕರ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದಾರೆ. ಈಗಾಗಲೇ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು ಸಿನಿಮಾರಸಿಕರಲ್ಲಿ ಕೂತೂಹಲವನ್ನು ಹುಟ್ಟುಹಾಕಿದೆ. ಹೀಗಾಗಿ ಸಿನಿಮಾದ ಟೀಸರ್, ಟ್ರೈಲರ್ ಹೇಗಿರುತ್ತೇ ಅಂತಾ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದೀಗ ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ದರ್ಶನ್ ಹುಟ್ಟು ಹಬ್ಬಕ್ಕೆ ರಾಬರ್ಟ್ ಸಿನಿಮಾದ ಟೀಸರ್ ಅನ್ನೇ ಗಿಫ್ಟ್ ನೀಡುವುದಾಗಿ ಹೇಳಿದ್ದಾರೆ. ರಾಬರ್ಟ್ ಚಿತ್ರದ ಟೀಸರ್ ದರ್ಶನ್ ಹುಟ್ಟು ಹಬ್ಬದ ದಿನದಂದು ಮಧ್ಯರಾತ್ರಿ 12 ಗಂಟೆಗೆ ಬಿಡುಗಡೆ ಮಾಡಲಿದ್ದೇನೆ.

ಬನ್ನಿ ದರ್ಶನ್ ಬರ್ತಡೇನಾ ರಾಬರ್ಟ್ ಟೀಸರ್ ನೊಂದಿಗೆ ಸಂಭ್ರಮಿಸಿ. ನಿಮ್ಮೆಲ್ಲರ ಪ್ರೀತಿ ಹಾರೈಕೆ ಹೀಗೆಯೇ ಇರಲಿ ಅಂತಾ ತರುಣ್ ಸುಧೀರ್ ತನ್ನ ಟ್ವಿಟರ್ ಪೇಜ್ ನಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ. ತರುಣ್ ಸುಧೀರ್ ಮಾಡಿರೋ ಪೋಸ್ಟ್ ಅಭಿಮಾನಿಗಳ ಕಾತರವನ್ನು ಇನ್ನಷ್ಟು ಹೆಚ್ಚಿಸಿದೆ.

ಒಟ್ಟಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತಡೆ ಅಭಿಮಾನಿಗಳಿಗೆ ಈ ಬಾರಿ ಸ್ಪೆಷಲ್ ಆಗಿರಲಿದೆ.

ಯೂಟ್ಯೂಬ್ ನಲ್ಲಿ ಹವಾ ಎಬ್ಬಿಸಿರುವ ದರ್ಶನ್ ಅಭಿನಯದ ಸಿನಿಮಾದ ಮೋಷನ್ ಪೋಸ್ಟರ್ ಹೇಗಿದೆ ನೋಡಿ.

Leave A Reply

Your email address will not be published.