ಗಿಲ್ಲಿ-ಕಾವ್ಯ ಸ್ನೇಹಕ್ಕೆ ಸವಾಲು ! ಯಾರು ತಗೋತಾರೆ ಮನೆಯಿಂದ ಬಂದ ಪತ್ರವನ್ನು?
Gilli Nata Kavya Bigg boss : ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್‍ನಲ್ಲಿ ಸದ್ಯ ಟ್ರೆಂಡಿಂಗ್ ಜೋಡಿ ಅಂದ್ರೆ ಅದು ಗಿಲ್ಲಿ ನಟ ಮತ್ತು ಕಾವ್ಯ. ಅದರಲ್ಲೂ ಗಿಲ್ಲಿ ನಟ ಸಖತ್ ಕಾಮಿಡಿ ಮೂಲಕ ಪ್ರೇಕ್ಷಕರಿಗೆ ತುಂಬಾ ಇಷ್ಟ ಆಗಿದ್ದಾರೆ. ಗಿಲ್ಲಿಗಾಗಿ ಎಷ್ಟೊಂದು ಜನ ಬಿಗ್ ಬಾಸ್ ನೋಡ್ತಾರೆ ಅಂದ್ರೆ ತಪ್ಪಾಗಲಾರದು.
ಗಿಲ್ಲಿ ಕಾಮಿಡಿ ಜೊತೆ ಮನೆಯಲ್ಲಿ ಯಾವುದೇ ಜಗಳ ಆದ್ರೂ ಬಿಡಿಸೋಕೆ ಹೋಗ್ತಾರೆ. ಅದರಲ್ಲೂ ಕಾವ್ಯ ಅಂದ್ರೆ ಗಿಲ್ಲಿಗೆ ತುಂಬಾ ಇಷ್ಟ. ಯಾವಾಗಲೂ ಕಾವು ಎಂದು ಹಿಂದೆ ಹಿಂದೆ ಓಡಾಡ್ತಾನೆ. ಅಲ್ಲದೇ ಕಾವ್ಯಾಗೆ ನೀನು ಇಷ್ಟ ಎಂದು ಎಷ್ಟೋ ಸಲ ಹೇಳಿದ್ದಾನೆ. ಆದ್ರೆ ಕಾವ್ಯ ಅದನ್ನು ಕಾಮಿಡಿಯಾಗಿ ತೆಗೆದುಕೊಂಡಿದ್ದಾರೆ. ಈಗ ಇಬ್ಬರ ಸ್ನೇಹಕ್ಕೆ ಒಂದು ಸವಾಲು ಎದುರಾಗಿದೆ. ಯಾರು ಸ್ನೇಹಕ್ಕಾಗಿ ತಮ್ಮ ಮನೆಯವರ ಪತ್ರ ಬಿಟ್ಟು ಕೊಡ್ತಾರೆ ನೋಡಬೇಕು.
ಜಂಟಿಯಾಗಿ ಎಂಟ್ರಿ ಕೊಟ್ಟಿದ್ದ ಗಿಲ್ಲಿ-ಕಾವ್ಯ
ಈ ಬಾರಿ ಬಿಗ್ ಬಾಸ್ ಮನೆಗೆ ಜಂಟಿ-ಒಂಟಿ ಎಂದ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಆಗ ಕಾವ್ಯ ಮತ್ತು ಗಿಲ್ಲಿ ಜಂಟಿಯಾಗಿ ಮನೆಗೆ ಎಂಟ್ರಿ ಕೊಟ್ಟಿದ್ದರು. ಅಂದಿನಿಂದ ಇಬ್ಬರ ಸ್ನೇಹ ಶುರುವಾಗಿ, ಅದೇ ರೀತಿ ಮುಂದುವರೆದಿದೆ. ಮನೆಯ ಸ್ಪರ್ಧಿಗಳು ಎಷ್ಟೇ ಟಾಂಟ್ ಮಾಡಿದ್ರೂ ಇಬ್ಬರಲ್ಲೂ ಅದೇ ಗೌರವ ಇದೆ.
Gilli Nata Kavya Bigg boss : ಮನೆವರ ಪತ್ರಗಳು
ಈ ಬಾರಿ ಮನೆಯಲ್ಲಿ ಯಾವುದೇ ಟಾಸ್ಕ್ ಗಳು ಇಲ್ಲ. ತಮ್ಮ ವ್ಯಕ್ತಿತ್ವದ ಮೂಲಕವೇ ತಾವು ಏನೆಂದು ತೋರಿಸಬೇಕು. ಅಲ್ಲದೇ ಮನೆಯಿಂದ ಪತ್ರಗಳು ಬಂದಿವೆ. ಆದ್ರೆ ಒಬ್ಬರ ಪತ್ರ ಬೇಕು ಅಂದ್ರೆ ಇನ್ನೊಬ್ಬರು ಪತ್ರ ಕಳೆದುಕೊಳ್ಳಬೇಕು. ಪತ್ರ ಪಡೆದವರು ಮನೆಯವರ ಭಾವನೆಗಳ ಜೊತೆ ಈ ವಾರ ಸೇಫ್ ಕೂಡ ಆಗ್ತಾರೆ.
ಕಾವ್ಯ-ಗಿಲ್ಲಿ.. ಯಾರು ತಗೋತಾರೆ ಪತ್ರ
ಇನ್ನು ಕಾವ್ಯ ಮತ್ತು ಗಿಲ್ಲಿಗೆ ಈಗ ಸವಾಲು ಎದುರಾಗಿದೆ. ಇಬ್ಬರ ಮುಂದೆ ಪತ್ರಗಳು ಇವೆ. ಗಿಲ್ಲಿ ಮುಂದೆ ಕಾವ್ಯ ಮನೆ ಪತ್ರ. ಕಾವ್ಯ ಮುಂದೆ ಗಿಲ್ಲಿ ಮನೆ ಪತ್ರ ಇದೆ. ಹಾಗಾದ್ರೆ ಅವರು ಆ ಪತ್ರವನ್ನು ತೆಗೆದುಕೊಂಡು ಹೋಗ್ತಾರಾ ಅಥವಾ ಅಲ್ಲಿ ಬಿಟ್ಟು ಹೋಗ್ತಾರಾ ಅಂತ ಇವತ್ತಿನ ಸಂಚಿಕೆಯಲ್ಲಿ ನೋಡಬೇಕು.
ಗಿಲ್ಲಿ ಮಾತನ್ನು ನೋಡಿದ್ರೆ ಕಾವ್ಯಾಗೆ ಪತ್ರವನ್ನು ಬಿಡಬಹುದು ಎನ್ನಿಸುತ್ತೆ. ಆದ್ರೆ ಅದಕ್ಕಾಗಿ ಇವತ್ತಿನ ಸಂಚಿಕೆ ನೋಡಬೇಕು. ಇಬ್ಬರ ಸ್ನೇಹ ಅದೇ ರೀತಿ ಮುಂದುವರೆಯಲಿ.. ಯಾರ ದೃಷ್ಟಿಯೂ ಬೀಳದಿರಲಿ.
ಈ ವಿಡಿಯೋ ಕ್ಲಿಕ್ ಮಾಡಿ:



