Uttar Pradesh : ತೆಂಗಿನಕಾಯಿ ಒಡೆಯುತ್ತಲೇ ಬಿರುಕುಬಿಟ್ಟ ಹೊಸ ರಸ್ತೆ..! ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರಕ್ಕೆ ಮುಖಭಂಗ

ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಕಟ್ಟಡ, ವಾಹನ ಅಥವಾ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸುವಾಗ ತೆಂಗಿನ ಕಾಯಿಯನ್ನು ಒಡೆಯೋದು ಶುಭಸೂಚಕ ಎಂದು ಪರಿಗಣಿಸಲಾಗುತ್ತೆ. ಆದರೆ ಉತ್ತರ ಪ್ರದೇಶದಲ್ಲಿ(Uttar Pradesh) ಮಾತ್ರ ಈ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮವು ಯೋಗಿ ಆದಿತ್ಯನಾಥ್​ ಸರ್ಕಾರಕ್ಕೆ ಬಹುದೊಡ್ಡ ಮುಖಭಂಗ ಉಂಟು ಮಾಡಿದೆ.

ಹೌದು..! ಉತ್ತರ ಪ್ರದೇಶದ ಬಿಜ್ನೋರ್​ ಎಂಬಲ್ಲಿ ಬರೋಬ್ಬರಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ 7 ಕಿಲೋಮೀಟರ್​ ಉದ್ದದ ರಸ್ತೆಯನ್ನು ಮರು ನಿರ್ಮಾಣ ಮಾಡಲಾಗಿತ್ತು. ಈ ರಸ್ತೆಯ ಉದ್ಘಾಟನೆ ಕಾರ್ಯಕ್ರಮಕ್ಕೆ ಸ್ವತಃ ಬಿಜ್ನೋರ್​ ಕ್ಷೇತ್ರ ಶಾಸಕಿ ಸುಚಿ ಮೌಸಮ್​ ಚೌಧರಿ ಕೂಡ ಆಗಮಿಸಿದ್ದರು. ಉದ್ಘಾಟನೆ ಅಂಗವಾಗಿ ರಸ್ತೆಗೆ ಕಾಯಿ ಒಡೆಯುತ್ತಿದ್ದಂತೆಯೇ ರಸ್ತೆ ಬಿರುಕುಬಿಟ್ಟಿದೆ..! ಇದನ್ನು ನೋಡಿ ಶಾಸಕಿ ಸುಚಿ ಕೆಂಡಾಮಂಡಲರಾಗಿದ್ದಾರೆ.

ಮೂರು ಗಂಟೆಗಳ ಕಾಲ ಉದ್ಘಾಟನಾ ಕಾರ್ಯಕ್ರಮದಲ್ಲೇ ನಿಂತ ಶಾಸಕಿ ಸುಚಿ ಮೌಸಮ್​ ಚೌದರಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೂ ಕಾದಿದ್ದಾರೆ. ಅಧಿಕಾರಿಗಳು ಆಗಮಿಸುತ್ತಿದ್ದಂತೆಯೇ ಡಾಂಬರ್​ ಮಾದರಿಯನ್ನು ತನಿಖೆಗೆ ಕಳುಹಿಸಿಕೊಡಲಾಗಿದೆ. ಕಳಪೆ ಕಾಮಗಾರಿ ಬಗ್ಗೆ ಆಕ್ರೋಶ ಹೊರಹಾಕಿದ ಶಾಸಕಿ ಸುಚಿ, ಬರೋಬ್ಬರಿ 1.16 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.

ಆದರೆ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಈ ಕಳಪೆ ಕಾಮಗಾರಿ ಬೆಳಕಿಗೆ ಬಂದಿದೆ. ಶೀಘ್ರದಲ್ಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕಳಪೆ ಕಾಮಗಾರಿ ಆರೋಪವನ್ನು ತಳ್ಳಿ ಹಾಕಿದ ಬಿಜ್ನೋರ್​​ ಎಕ್ಸಿಕ್ಯೂಟಿವ್​ ಎಂಜಿನಿಯರ್​, ಇದು ಸತ್ಯಕ್ಕೆ ದೂರವಾದ ಆರೋಪವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ನಿಜಾಂಶ ಹೊರತರಬೇಕಿದೆ ಎಂದು ಹೇಳಿದ್ರು.

ಇದನ್ನು ಓದಿ : Dog Viral Video : ವಿಭಿನ್ನ ಹವ್ಯಾಸದಿಂದ ಬಹು ಜನಪ್ರಿಯವಾದ ಲಾಯ್ಡ್ ನಾಯಿ ಮರಿ

ಇದನ್ನು ಓದಿ : Viral Video : ಸಖತ್ ವೈರಲ್ ಆದ ಬೆಕ್ಕು ಹಾಗೂ ಮಗುವಿನ ಆಟದ ವಿಡಿಯೋ

Instead Of Coconut, Brand-New UP Road Cracked Open in Uttar Pradesh

Comments are closed.