ನನಗೆ ವಿರಾಟ್ ಮೇಲೆ ಹುಚ್ಚು ಪ್ರೀತಿ ಇತ್ತು ಎಂದ‌‌ ನಟಿ !  ಅಷ್ಟಕ್ಕೂ ಯಾರೀಕೆ ಗೊತ್ತಾ ?

ಮುಂಬೈ : ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಂದ್ರೇ ಹುಡುಗೀರ ಪಾಲಿನ ಡ್ರೀಮ್‌ ಬಾಯ್. ಅದರಲ್ಲೂ ವಿರಾಟ್‌ ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಕೋಟ್ಯಂತರ ಮಂದಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಕೊಯ್ಲಿ‌ ಫ್ಯಾಷನ್, ಲುಕ್​ ಇಷ್ಟವಾಗುತ್ತೆ. ಆದ್ರೀಗ ನಟಿಯೋರ್ವಳ ಕೊಯ್ಲಿ ಮನಗೆದ್ದಿದ್ದು, ವಿರಾಟ್ ಮೇಲಿನ ಪ್ರೀತಿಯನ್ನು ನಟಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

ಹಿಂದಿ ಹಾಗೂ ಮರಾಠಿ ಸಿನಿಮಾಗಳಲ್ಲಿ ಗುರುತಿಸಿ ಕೊಂಡಿರುವ ಮೃಣಾಲ್​ ಠಾಕೂರ್​ ಅಚ್ಚರಿಯ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತನಗೆ ರಾಟ್​ ಕೊಹ್ಲಿ ಮೇಲಿದ್ದ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಅಚ್ಚರಿ ಮೂಡಿಸಿದೆ.

ಇದನ್ನೂ ಓದಿ: ನಿಮ್ಮ ಮಗುವಿನ ತಂದೆ ಯಾರು? ನಟಿ ಹಾಗೂ ಸಂಸದೆ ನುಸ್ರತ್‌ ಜಹಾನ್ ಗೆ ಎದುರಾಯ್ತು ಮುಜುಗರ ತರುವ ಪ್ರಶ್ನೆ

ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಮೃಣಾಲ್ ಅವರಿಗೆ ಕ್ರಿಕೆಟ್​ ಎಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಕೊಹ್ಲಿ ಕಂಡರೆ ಅವರಿಗೆ ಅಚ್ಚುಮೆಚ್ಚು. ನನಗೆ ವಿರಾಟ್ ಮೇಲೆ ಹುಚ್ಚು ಪ್ರೀತಿ ಇತ್ತು. ನನ್ನ ಸಹೋದರನ ಜತೆ ಕ್ರಿಕೆಟ್​ ನೋಡೋಕೆ ಸ್ಟೇಡಿಯಮ್​ಗೆ ಹೋಗುತ್ತಿದ್ದೆ’ ಎಂದಿದ್ದಾರೆ.

ಇದನ್ನೂ ಓದಿ: ರಜನಿಕಾಂತ್ ಅಭಿಮಾನಿಗಳಿಗೆ ಧಮಾಕಾ: ಗೌರಿ-ಗಣೇಶ್ ಹಬ್ಬಕ್ಕೆ ಬರಲಿದೆ ಅಣ್ಣಾತ್ತೆ ಫರ್ಸ್ಟ್ ಲುಕ್

ತೆಲುಗಿನ ‘ಜೆರ್ಸಿ’ ಸಿನಿಮಾ ಹಿಂದಿಗೆ ರಿಮೇಕ್​ ಆಗುತ್ತಿದೆ. ಶಾಹಿದ್​ ಕಪೂರ್​ ಸಿನಿಮಾದ ಹೀರೋ. ಈ ಚಿತ್ರಕ್ಕೆ ಮೃಣಾಲ್​ ನಾಯಕಿ. ಈ ಬಗ್ಗೆಯೂ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ಸ್ಟೇಡಿಯಮ್​ನಲ್ಲಿ ನಿಂತು ಕ್ರಿಕೆಟ್​ ನೋಡೋದು ಖುಷಿಯ ವಿಚಾರವಾಗಿತ್ತು. ಕ್ರಿಕೆಟ್​ ಎಂದರೆ ಎಲ್ಲಿಲ್ಲದ ಪ್ರೀತಿ ಆಗಿತ್ತು. ಈಗ ಕ್ರಿಕೆಟ್​ನ ಕಥೆ ಹೊಂದಿರುವ ಸಿನಿಮಾದ ಭಾಗವಾಗುತ್ತಿರುವುದಕ್ಕೆ ಖುಷಿ ಇದೆ’ ಎಂದಿದ್ದಾರೆ ಮೃಣಾಲ್.

(Actress says I have a mad love for Virat! )

Comments are closed.