Amyra Dastur: ಮತ್ತೇರಿಸುತ್ತಿದೆ ಬಹುಭಾಷಾ ಬೆಡಗಿ ಅಮೈರಾ ದಸ್ತರ್ ಹಾಟ್ ಪೋಟೋಸ್

ತನ್ನ 16 ನೇ ವಯಸ್ಸಿಗೆ ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಬಹುಭಾಷಾ ನಟಿ ಅಮೈರಾ ದಸ್ತರ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪೋಟೋಸ್ ಮೂಲಕವೇ ಕಿಚ್ಚು ಹಚ್ಚಿದ್ದಾರೆ.

ಸಖತ್ ಹಾಟ್ ಪೋಟೋಸ್ ನಲ್ಲಿ ಹಾಲಿನ ಬಣ್ಣದ ಮೈಮಾಟ ಚೆಲ್ಲಿ ಮತ್ತೆರಿಸುವಂತೆ ನೀಡಿದ ಪೋಸ್ ಗೆ ಪಡ್ಡೆ ಹೈಕಳು ಮೈಮರೆತಿದ್ದು, ಇನ್ ಸ್ಟಾಗ್ರಾಂ ಪೋಸ್ಟ್ ಗೆ ಲಕ್ಷಾಂತರ ಲೈಕ್ಸ್ ಬಿದ್ದಿವೆ.

ಬಾಲಿವುಡ್ ನ ಇಶ್ಕ್ ಸಿನಿಮಾದಲ್ಲಿ ಭರವಸೆ ಮೂಡಿಸಿದ್ದ ನಟಿ ಅಮೈರಾ ದಸ್ತರ್ ತಮಿಳು,ತೆಲುಗು ಚಿತ್ರದಲ್ಲಿಯೂ ನಟಿಸಿದ್ದಾರೆ. ತಮಿಳಿನಲ್ಲಿ ಅಮೈರಾ ನಟಿಸಿದ ಕೆ.ವಿ.ಆನಂದ್  ರ ಸಿನಿಮಾ ಬಾಕ್ಸಾಫೀಸ್ ನಲ್ಲಿ ಗೆದ್ದಿದೆ.

ಕುಂಗ್ ಪೂ ಯೋಗಾ ಎಂಬ ಅಂತರಾಷ್ಟ್ರೀಯ ಸಿನಿಮಾದಲ್ಲೂ ಅಮೈರಾ ಮಿಂಚಿದ್ದು, ಜಾಕಿ ಚಾನ್ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ.

ಸದ್ಯ ಸೈಫ್ ಅಲಿಖಾನ್ ಸಿನಿಮಾದಲ್ಲಿ ನಟಿಸುತ್ತಿರುವ ಅಮೈರಾ ಬಿಡುವಿನ ವೇಳೆಯಲ್ಲಿ ಪ್ರಕೃತಿಮಧ್ಯೆ ಕಾಲ ಕಳೆಯುತ್ತ ಗೆಳತಿಯರ ಜೊತೆ ಪ್ರವಾಸವನ್ನು ಎಂಜಾಯ್ ಮಾಡುತ್ತಾರಂತೆ.

ತೆಲುಗಿನಲ್ಲಿ ಮಹೇಶ್ ಬಾಬು ಸಹೋದರಿ ನಿರ್ದೇಶನದ ಸಿನಿಮಾದಲ್ಲೂ ನಟಿಸಿರುವ ಅಮೈರಾ  ತಮ್ಮ ಇನ್ ಸ್ಟಾಗ್ರಾಂನಲ್ಲಿ ಸದಾ ಹಾಟ್ ಹಾಟ್ ಪೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ.2.7 ಮಿಲಿಯನ್ ಫಾಲೋವರ್ಸ್ ಹೊಂದಿರುವ ಅಮೈರಾ ಲೇಟೆಸ್ಟ್ ಪೋಟೋಶೂಟ್ ಸಖತ್ ವೈರಲ್ ಆಗಿದೆ.  

Comments are closed.