Shilpa Shetty : ಮುಗಿಯುತ್ತಲೇ ಇಲ್ಲ ಸಂಕಷ್ಟಗಳ ಸರಣಿ: ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ಮೇಲೆ ಮತ್ತೊಂದು ವಂಚನೆ ಪ್ರಕರಣ

ದೆಹಲಿ: ಈಗಾಗಲೇ ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಮಾರಾಟದ ಆರೋಪದಡಿ  ಜೈಲು ಸೇರಿರುವ ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.  ದೆಹಲಿ ಮೂಲದ ಉದ್ಯಮಿಯೊಬ್ಬರು ರಾಜ್ ಕುಂದ್ರಾ ಹಾಗೂ ಶಿಲ್ಪಾ ವಿರುದ್ಧ ವಂಚನೆ ಪ್ರಕರಣ ದಾಖಲಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ದಂಪತಿ ತನಗೆ 41 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ ದೆಹಲಿಯ ಉದ್ಯಮಿಯೊಬ್ಬರು ಆರೋಪಿಸಿದ್ದು, ಕುಂದ್ರಾ ದಂಪತಿ ವಿರುದ್ಧ ಎಫ್.ಆಯ್.ಆರ್ ದಾಖಲಿಸಲು ಸೂಚಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ರಾಜ್ ಕುಂದ್ರಾ ಆಪ್ತ ಉಮೇಶ್ ಗೋಯಂಕಾ ತಮ್ಮನ್ನು ರಾಜ್ ಸ್ಥಾನ ರಾಯಲ್ಸ್ ತಂಡದ ಐಪಿಎಲ್ ಪಂದ್ಯ ನೋಡಲು ಆಹ್ವಾನಿಸಿದ್ದು, ಈ ವೇಳೆ ರಾಜ್ ಕುಂದ್ರಾ ಬ್ಯುಸಿನೆಸ್ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ಕುಂದ್ರಾ ಒಡೆತನದ ವಿಯಾನ್ ಸಂಸ್ಥೆಯ ಸೌಂದರ್ಯವರ್ಧಕ, ಗೇಮಿಂಗ್ ಆಪ್ ಸೇರಿದಂತೆ ಹಲವು ಪ್ರೊಡೆಕ್ಟ್ ಗಳ ಮಾಹಿತಿ ನೀಡಿ, ಸಂಸ್ಥೆಯಲ್ಲಿ ಹೂಡಿಕೆ ಮಾಡುವಂತೆ ಒತ್ತಾಯಿಸಿದರು.

2018 ರಲ್ಲಿ ರಾಜ್ ಕುಂದ್ರಾ ರನ್ನು ನಾನು ಖಾಸಗಿ ಹೊಟೇಲ್ ನಲ್ಲಿ ಭೇಟಿ ಮಾಡಿ ಹಣ ಹೂಡಿಕೆ ಮಾಡಿದ್ದು, ಆದರೆ ನನಗೆ ಇದುವರೆಗೂ ಯಾವುದೇ ಲಾಭಾಂಶವೂ ದೊರೆತಿಲ್ಲ. ವಿಯಾನ್ ಕಂಪನಿಯ ಶೇರುಗಳು ಕೂಡ ಕುಸಿದಿದೆ. ನನ್ನ ಹಣವನ್ನು ರಾಜ್ ಕುಂದ್ರಾ ಕೆಟ್ಟ ಕೆಲಸಗಳಿಗೆ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಉದ್ಯಮಿ ಆರೋಪಿಸಿದ್ದಾರೆ.

ಮಾತ್ರವಲ್ಲ ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ, ದರ್ಶಿತ್ ಶಾ, ಎಂ.ಕೆ.ವಡ್ವಾ,ನಂದನ್ ಮಿಶ್ರಾ, ಸತ್ಯೇಂದ್ರ ಸರುಪ್ರಿಯಾ ,ಉಮೇಶ್ ಗೋಯಂಕಾ, ವಿಯಾನ್ ಇಂಡಸ್ಟ್ರಿ ವಿರುದ್ಧ ಕ್ರಮಕ್ಕೆ ಅನುಮತಿನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಈ ಪ್ರಕರಣ ರಾಜ್ ಕುಂದ್ರಾಗೆ ಮತ್ತಷ್ಟು ಸಂಕಷ್ಟ ತರಲಿದ್ದು, ಈಗಾಗಲೇ ಅಶ್ಲೀಲ ಚಿತ್ರ ತಯಾರಿಕಾ ಪ್ರಕರಣದಡಿ ಜುಲೈ 19 ರಂದು ರಾಜ್ ಕುಂದ್ರಾ ಬಂಧಿಸಿರುವ ಮುಂಬೈ ಪೊಲೀಸರು ಕುಂದ್ರಾರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Another cheating complaint against raj kundra and shilpa shetty.

Comments are closed.