Boycott Bollywood movie :ಬಾಲಿವುಡ್ ನಲ್ಲಿ ಬಾಯ್ಕಾಟ್ ಮೂವಿ ಟ್ರೆಂಡ್: ಸಂಕಷ್ಟಕ್ಕೆ ಸಿಲುಕಿದ ಅಮೀರ್,ಅಕ್ಷಯ್, ರಶ್ಮಿಕಾ

ಕರೋನಾದಿಂದ ತಣ್ಣಗಾಗಿದ್ದ ದೇಶದ ಚಿತ್ರೋದ್ಯಮ ಹೊಸ ಲವಲವಿಕೆಯಿಂದ ಕಣಕ್ಕಳಿದಿದೆ. ಪರವಾಗಿ ಬಿಗ್ ಸ್ಟಾರ್ ಗಳ, ಬಿಗ್ ಬಜೆಟ್ ಗಳ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಅದರೆ ಶ್ರಾವಣದ ಹೊತ್ತಿನಲ್ಲಿ ತೆರೆಗೆ ಬರ್ತಿರೋ ಸಿನಿಮಾಗಳಿಗೆ ಸಂಕಷ್ಟ ಎದುರಾಗಿದ್ದು, ಸಿನಿಮಾ ಬಾಯ್ಕಾಟ್ (Boycott Bollywood movie) ಬಾಲಿವುಡ್ ಹಾಗೂ ಕಾಲಿವುಡ್, ಟಾಲಿವುಡ್ ನಲ್ಲಿ ಸದ್ದು ಮಾಡಲಾರಂಭಿಸಿದೆ.

ಬಿಟೌನ್ ನಲ್ಲಿ ಸದ್ಯ ಮಿಸ್ಟರ್ ಫರ್ಪೆಕ್ಟ್ ಖ್ಯಾತಿಯ ಅಮೀರ್ ಖಾನ್ ಹಾಗೂ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ನಟನೆಯ ಎರಡು ಬಿಗ್ ಬಜೆಟ್ ಬಹುನೀರಿಕ್ಷಿತ ಸಿನಿಮಾಗಳು ತೆರೆ ಕಾಣಲು ಸಿದ್ಧವಾಗಿದೆ. ಈ ಪೈಕಿ ಅಮೀರ್ ಖಾನ್ ಹಾಗೂ ಕರೀನಾ ಕಪೂರ್ ನಟನೆಯ ಲಾಲ್ ಸಿಂಗ್ ಚಡ್ಡಾ ಮುಂದಿನ ವಾರ ತೆರೆಗೆ ಬರಲಿದೆ. ಇದರ ಜೊತೆ ಜೊತೆ ಅಕ್ಷಯ್ ಕುಮಾರ್ ನಟನೆಯ ರಕ್ಷಾಬಂಧನ್ ಕೂಡ ತೆರೆಗೆ ಬರಲಿದೆ. ಈ ಎರಡೂ ಸಿನಿಮಾಗಳಿಗೂ ಬಾಯ್ಕಾಟ್ ಅಭಿಯಾನ ಆರಂಭವಾಗಿದೆ. ಎರಡು ಮೂರು ವರ್ಷದ ಹಿಂದೆ ನಟ ಅಮೀರ್ ಖಾನ್ ಈ ದೇಶದಲ್ಲಿ ಅಸಹಿಷ್ಣುತೆ ಇದೆ. ಇಲ್ಲಿ ಇರಲು ಭಯವಾಗುತ್ತದೆ. ಬೇರೆ ದೇಶಕ್ಕೆ ಹೋಗಲು ಪತ್ನಿ ಬಯಸುತ್ತಿದ್ದಾರೆ ಎಂದಿದ್ದರು.

ಈ ಮಾತನ್ನೇ ಆಧಾರವಾಗಿಟ್ಟುಕೊಂಡಿರೋ ಸೋಷಿಯಲ್ ಮೀಡಿಯಾ ಮಂದಿ, ದೇಶದ ಬಗ್ಗೆ ಗೌರವವಿಲ್ಲದವರ ಸಿನಿಮಾ ನೋಡಬೇಡಿ ಎಂದು ಟ್ರೋಲ್ ಆರಂಭಿಸಿದ್ದಲ್ಲದೇ ಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಎಲ್ಲೆಡೆಯಿಂದ ಬೆಂಬಲವೂ ವ್ಯಕ್ತ ವಾಗಿದ್ದು, ನಟಿ ಕಂಗನಾ ರನಾವುತ್ ಕೂಡ ಧ್ವನಿಗೂಡಿಸಿದ್ದಾರೆ. ಆದರೆ ಅಮೀರ್ ಖಾನ್ ಮಾತ್ರ ನಾನು ಭಾರತವನ್ನು ಪ್ರೀತಿಸುತ್ತೇನೆ. ನನ್ನ ಸಿನಿಮಾವನ್ನು ಬಹಿಷ್ಕರಿಸಬೇಡಿ ಎಂದು ಮನವಿ ಮಾಡ್ತಿದ್ದಾರೆ.

ಇನ್ನು ಅಕ್ಷಯ್ ಕುಮಾರ್ ಸಿನಿಮಾದ ಚಿತ್ರಕಥೆ ಬರೆದಿರೋರು ಕೂಡ ಹಿಂದೂ ಧರ್ಮವನ್ನು ಹೀಗೆಳೆಯುವಂತಹ ಹೇಳಿಕೆ ಕೊಟ್ಟಿದ್ದರು ಎನ್ನುವ ಕಾರಣಕ್ಕೆ ಅವರ ಸಿನಿಮಾವನ್ನು ಬಹಿಷ್ಕರಿಸುವಂತೆ ಆಗ್ರಹ ವ್ಯಕ್ತವಾಗ್ತಿದೆ. ಇದು ಕೇವಲ ಬಾಲಿವುಡ್ ಕತೆ ಮಾತ್ರವಲ್ಲ, ಮಾಲಿವುಡ್ ಸಿನಿಮಾಕ್ಕೂ ಬಾಯ್ಕಾಟ್ ಭಯ ಎದುರಾಗಿದೆ. ರಶ್ಮಿಕಾ ಮಂದಣ್ಣ ಮಾಲಿವುಡ್ ನ ಚೊಚ್ಚಲ ಸಿನಿಮಾ ಸೀತಾ ರಾಮಂನಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮುಸ್ಲಿಂ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ ಈ ಸಿನಿಮಾದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಅಂಶಗಳಿವೆ ಎಂಬ ಕಾರಣಕ್ಕೆ ಅರಬ್ ರಾಷ್ಟ್ರಗಳಲ್ಲಿ ಸಲ್ಮಾನ್ ದುಲ್ಕರ್ ನಾಯಕರಾಗಿರೋ ಈ ಸಿನಿಮಾ ವನ್ನು ಬ್ಯಾನ್ ಮಾಡಲಾಗಿದೆ. ಒಟ್ಟಿನಲ್ಲಿ ಮುಂದಿನ ವಾರದ ಸಿನಿಮಾಗಳಿಗೆ ಬ್ಯಾನ್ ಸಂಕಷ್ಟ ಎದುರಾಗಿದ್ದು ಬಾಕ್ಸಾಫೀಸ್ ನಲ್ಲಿ ನಿರ್ಮಾಪಕರ ಭವಿಷ್ಯ ಅಡಗಿರೋದಂತು ಸತ್ಯ.

ಇದನ್ನೂ ಓದಿ : Actress Samyuktha Hegde : ಡ್ಯೂಪ್ ಇಲ್ಲದೇ ಫೈಟಿಂಗ್ ತಂದ ಆಪತ್ತು: ಕಿರಿಕ್ ಬೆಡಗಿ ಸಂಯುಕ್ತ ಹೆಗ್ಡೆಗೆ ಮೇಜರ್ ಸರ್ಜರಿ

ಇದನ್ನೂ ಓದಿ : weekend with ramesh : ಮತ್ತೆ ಬರ್ತಿದೆ ವೀಕೆಂಡ್​ ವಿತ್​ ರಮೇಶ್​ : ಸಾಧಕರ ಆಯ್ಕೆಗೆ ವೀಕ್ಷಕರಿಗೆ ಅವಕಾಶ

Boycott Bollywood movie in trend, Aamir Khan, Akshay Kapoor, Rashmika Mandanna in trouble

Comments are closed.