ಮತ್ತೆ ಒಂದಾಗ್ತಿದ್ದಾರೆ ಕಿಚ್ಚ – ಜೋಗಿ ಪ್ರೇಮ್ : ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುದೀಪ್

0

ದಿ ವಿಲನ್ ಸಿನಿಮಾದ ನಂತರ ನಿರ್ದೇಶಕ ಪ್ರೇಮ್ ಮತ್ತು ಕಿಚ್ಚ ಸುದೀಪ್ ಮತ್ತೊಂದು ಸ್ಯಾಂಡಲ್ ವುಡ್ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ.

ಪ್ರೀತಿಯಿಂದ ಕಿಚ್ಚ ಸುದೀಪ್ ರನ್ನು ಡಾರ್ಲಿಂಗ್ ಎಂದು ಕರೆಯುವ ಪ್ರೇಮ್, ಅವರೊಂದಿಗೆ ಮತ್ತೊಂದು ಚಿತ್ರ ಮಾಡುತ್ತಿದ್ದೇನೆ. ಇದರಲ್ಲಿ ನೀವು ಕಿಚ್ಚ ಸುದೀಪ್ ಅವರನ್ನು ಈ ಹಿಂದೆ ಎಂದೂ ನೋಡದ ಅವತಾರದಲ್ಲಿ ಕಾಣಲಿದ್ದೀರಿ ಎಂದಿದ್ದಾರೆ.

ಕಿಚ್ಚ ಸುದೀಪ್ ಜೊತೆ ಹೊಸ ಸಿನಿಮಾದ ಬಗ್ಗೆ ಸುಳಿವು ಕೊಟ್ಟಿರುವ ನಿರ್ದೇಶಕ ಜೋಗಿ ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಳೆದೆರಡು ವರ್ಷಗಳ ಹಿಂದೆ ಕಿಚ್ಚ ಸುದೀಪ್ ಮತ್ತು ಪ್ರೇಮ್ ಕಾಂಬಿನೇಷನ್ ನಲ್ಲಿ ದಿ ವಿಲನ್ ಸಿನಿಮಾ ತೆರೆಕಂಡಿತ್ತು.

ಜೋಗಿ ಪ್ರೇಮ್ ಈಗಾಗಲೇ ಎಕ್ ಲವ್ ಯಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದೀಗ ಮತ್ತೆ ಜೋಗಿ ಪ್ರೇಮ್ ಸುದೀಪ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಆದರೆ ಚಿತ್ರದ ಹೆಸರು ಯಾವುದು ಅಂತಾ ಪ್ರೇಮ್ ರಿವೀಲ್ ಮಾಡಿಲ್ಲ.

ಅಲ್ಲದೇ ಸಿನಿಮಾ ಯಾವಾಗ ಶುರುವಾಗುತ್ತೆ ಅಂತಾ ಹೇಳಿಲ್ಲ. ಅದ್ರೆ ಕಿಚ್ಚನನ್ನು ವಿಭಿನ್ನವಾಗಿ ತೋರಿಸುತ್ತೇನೆ ಎಂದಷ್ಟೇ ಹೇಳಿದ್ದಾರೆ ಪ್ರೇಮ್.

Leave A Reply

Your email address will not be published.