karnataka ratna award to puneeth : ನವೆಂಬರ್​ 1ರಂದು ಪುನೀತ್​ಗೆ ಮರಣೋತ್ತರ ಕರ್ನಾಟಕ ರತ್ನ ಪ್ರದಾನ

ಬೆಂಗಳೂರು : karnataka ratna award to puneeth : ಚಂದನವನದ ಹೆಸರಾಂತ ನಟ ಪುನೀತ್​ ರಾಜ್​ಕುಮಾರ್​ ನಮ್ಮನಗಲಿ ವರ್ಷ ಉರುಳುತ್ತಾ ಬಂದಿದೆ. ಆದರೂ ಸಹ ಅಪ್ಪುವಿನ ನೆನಪು ಮಾತ್ರ ಅಜರಾಮರವಾಗಿದೆ. ಪುನೀತ್​ ರಾಜ್​ಕುಮಾರ್​ ಮರಣದ ಬಳಿಕ ರಾಜ್ಯ ಸರ್ಕಾರವು ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಯಾವ ದಿನದಂದು ಪುನೀತ್​ ಕುಟುಂಬಕ್ಕೆ ಈ ಪ್ರಶಸ್ತಿಯನ್ನು ಹಸ್ತಾಂತರ ಮಾಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.


ಕರ್ನಾಟಕದಲ್ಲಿ ಸಾಧಕರಿಗೆ ನೀಡಲಾಗುವ ರಾಜ್ಯ ಮಟ್ಟದ ಅತ್ಯುನ್ನತ ಪ್ರಶಸ್ತಿ ಇದಾಗಿದೆ. ಈಗಾಗಲೇ ರಾಜ್ಯದಲ್ಲಿ 9 ಮಂದಿ ಸಾಧಕರು ಕರ್ನಾಟಕ ರತ್ನ ಗೌರವಕ್ಕೆ ಪಾತ್ರರಾಗಿದ್ದಾರೆ. ಪುನೀತ್​ ರಾಜ್​ಕುಮಾರ್​ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾದ 10ನೇ ವ್ಯಕ್ತಿಯಾಗಿದ್ದಾರೆ. ಇಂದು ತೋಟಗಾರಿಕಾ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ವತಿಯಿಂದ ಲಾಲ್​ಬಾಗ್​ನ ಗಾಜಿನ ಮನೆಯಲ್ಲಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಕರ್ನಾಟಕ ರಾಜ್ಯೋತ್ಸವದಂದು ಪುನೀತ್​​ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.


ಈ ಪ್ರಶಸ್ತಿ ಪ್ರದಾನಕ್ಕೂ ಮುನ್ನ ಸಿದ್ಧತೆಗೆಂದು ರಚಿಸಲಾಗುವ ಸಮಿತಿಯಲ್ಲಿ ಪುನೀತ್​ ಕುಟುಂಬದ ಸದಸ್ಯರಿಗೂ ಸ್ಥಾನ ನೀಡಲಾಗುತ್ತದೆ. ಪುನೀತ್​ ರಾಜ್​ಕುಮಾರ್​ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ನಮಗೂ ಹೆಮ್ಮೆಯಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.


ಇಂದು ಲಾಲ್​ಬಾಗ್​ನಲ್ಲಿ ಆರಂಭಗೊಂಡಿರುವ ಫಲಪುಷ್ಪ ಪ್ರದರ್ಶನದಲ್ಲಿಯೂ ಡಾ.ರಾಜ್​ ಕುಮಾರ್​ ಹಾಗೂ ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವವನ್ನು ಸಲ್ಲಿಸಲಾಗಿದೆ. ಇಂದು ನಡೆದ ಫಲಪುಷ್ಪ ಉದ್ಘಾಟನಾ ಸಮಾರಂಬದಲ್ಲಿ ಶಿವಣ್ಣ ಸೇರಿದಂತೆ ಶಕ್ತಿಧಾಮದ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ನಟ ಶಿವಣ್ಣ, ಅಪ್ಪ – ಅಮ್ಮ ಹಾಗೂ ಅಪ್ಪು ಸದಾ ಜೊತೆಯಲ್ಲಿಯೇ ಇರುತ್ತಾರೆ. ಪುನೀತ್​ ಸಾಧನೆ ಹಾಗೂ ಆತನ ಜೀವನ ಹೇಳಿಕೆಗೂ ಮೀರಿದ್ದಾಗಿದೆ. ಪುಷ್ಪಗಳಂತೆಯೇ ಅಪ್ಪು ಎಂದಿಗೂ ಫ್ರೆಶ್​ ಆಗಿ ಇರುತ್ತಾರೆ ಎಂದು ಹೇಳಿದರು .

ಇದನ್ನು ಓದಿ : 108 tender Scam : ಐಎಎಸ್ ಅಧಿಕಾರಿ ಪಂಕಜ್ ಪಾಂಡೆ ವಿರುದ್ಧ ತನಿಖೆಗೆ ಹೈಕೋರ್ಟ್ ಸೂಚನೆ

ಇದನ್ನೂ ಓದಿ : Paytm Down : ಪೇಟಿಯಂ ಆ್ಯಪ್, ವೆಬ್‌ಸೈಟ್‌ ಡೌನ್‌ : ಗ್ರಾಹಕರ ಪರದಾಟ

cm basavaraj bommai reveals posthumous karnataka ratna award to puneeth rajkumar on november 1

Comments are closed.