ಸಿಹಿಸುದ್ದಿ ಕೊಟ್ಟ ಧ್ರುವಸರ್ಜಾ ಸಿನಿತಂಡ…! ಭಾರಿ ಮೊತ್ತಕ್ಕೆ ಪೊಗರು ಸಿನಿರೈಟ್ಸ್ ಸೇಲ್…!!

  • ಪೂರ್ಣಿಮಾ ಹೆಗಡೆ

ಎಲ್ಲಾ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ಅಕ್ಷ್ಯನ್ಸ್ ಪ್ರಿನ್ಸ್ ಧ್ರುವ್ ಸರ್ಜಾ ಅಭಿನಯದ ಪೊಗರು ಸಿನಿಮಾ ಥಿಯೇಟರ್ ನಲ್ಲಿ ಇರಬೇಕಿತ್ತು. ಆದರೇ ಸಿನಿಮಾ ರಿಲೀಸ್ ಆಗದಿದ್ದರೂ ಚಿತ್ರತಂಡ ಒಂದು ಸಿಹಿಸುದ್ದಿ ನೀಡಿದೆ.

ನಂದಕಿಶೋರ್ ನಿರ್ಮಾಣದ ಪೊಗರು ಧ್ರುವ ಸರ್ಜಾ ಅಭಿಯನದ ಬಹುನೀರಿಕ್ಷಿತ ಚಿತ್ರ. ಇಷ್ಟರಲ್ಲಾಗಲೇ ಥಿಯೇಟರ್ ನಲ್ಲಿರಬೇಕಿದ್ದ ಚಿತ್ರಕ್ಕೆ ಕೊರೋನಾ ಅಡ್ಡಿಯಾಗಿದೆ. ಹೀಗಾಗಿ ಇನ್ನು ಚಿತ್ರ ಬಿಡುಗಡೆಯ ದಿನಾಂಕ ನಿಗದಿಯಾಗಿಲ್ಲ.

ಆದರೇ ಈ ಬೇಸರದ ನಡುವೆಯೂ ಚಿತ್ರತಂಡ ಒಂದು ಸಿಹಿ ಸುದ್ದಿನೀಡಿದೆ. ಚಿತ್ರದ ಹಿಂದಿ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಹಿಂದಿ ಚಿತ್ರ ನಿರ್ಮಾಪಕ ಆರ್.ಕೆ.ದಗ್ಗಲ್ ಈಚಿತ್ರದ ರೈಟ್ಸ್ ನ್ನು ಬರೋಬ್ಬರಿ 7.2 ಕೋಟಿ ಕೊಟ್ಟು ಖರೀದಿಸಿದ್ದಾರಂತೆ.

ಇಂತಹದೊಂದು ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರೆ ಇದನ್ನು ಚಿತ್ರತಂಡ ಇನ್ನು ಖಚಿತಪಡಿಸಿಲ್ಲ. ಧ್ರುವ್ ಸರ್ಜಾ ಸಖತ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ಚಿತ್ರದಲ್ಲಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.

ಪೊಗರು ಚಿತ್ರವನ್ನು ಕೊರೋನಾ ಪರಿಸ್ಥಿತಿ ನೋಡಿಕೊಂಡು ಜನರು ಥಿಯೇಟರ್ ಗಳಿಗೆ ಬರಲಾರಂಭಿಸಿದ ಮೇಲೆ ಬಿಡುಗಡೆ ಮಾಡುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ.

ಮೂಲಗಳ ಪ್ರಕಾರ ಇದೇ ಡಿಸೆಂಬರ್ ನಲ್ಲಿ ಬರೋ ಕ್ರಿಸ್ಮಸ್ ಅಥವಾ ಮುಂದಿನ ಸಂಕ್ರಮಣದ ಹೊತ್ತಿಗೆ ರಿಲೀಸ್ ಮಾಡೋ ಪ್ಲ್ಯಾನ್ ಚಿತ್ರತಂಡಕ್ಕಿದೆಯಂತೆ.

ಸಧ್ಯ ಪೊಗರು ಮುಗಿಸಿ ಗೆಟ್ ಅಪ್ ಚೆಂಜ್ ಮಾಡಿರೋ ಧ್ರುವ್ ಸರ್ಜಾ ಹೊಸ ಲುಕ್ ನಲ್ಲಿ ದುಬಾರಿಗೆ ಬಣ್ಣಹಚ್ಚಿದ್ದಾರೆ

Comments are closed.