ಡಿಸೆಂಬರ್ 31ರ ವರೆಗೆ ಅಂತಾರಾಷ್ಟ್ರೀಯ ವಿಮಾನ ಸೇವೆ ಬಂದ್ : ಆದ್ರೂ ವಿದೇಶಕ್ಕೆ ತೆರಳೋದಕ್ಕಿಲ್ಲಿದೆ ಅವಕಾಶ…!

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಂತರಾಷ್ಟ್ರೀಯ ವಿಮಾನಯಾನ ಸೇವೆಯ ಮೇಲೆ ಡಿಸೆಂಬರ್ 31ರ ವರೆಗೆ ನಿಷೇಧ ಹೇರಿದೆ. ಆದರೂ ಪ್ರಯಾಣಿಕರು ಕೆಲವೊಂದು ರಾಷ್ಟ್ರಗಳಿಗೆ ಪ್ರಯಾಣಿಸಬಹುದಾಗಿದೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚಾಗುತ್ತಿದ್ದಂತೆಯೇ ಮಾರ್ಚ್ 23ರಿಂದಲೇ ಅಂತರಾಷ್ಟ್ರೀಯ ವಿಮಾನಯಾನ ಸೇವೆಗೆ ನಿರ್ಬಂಧ ವಿಧಿಸಿತ್ತು. ವಿಶೇಷ ಪ್ರಕರಣಗಳಲ್ಲಿ ಮಾತ್ರ ಆಯ್ದ ವಿಮಾನಯಾನ ಸೇವೆಗಳಿಗೆ ಅವಕಾಶ ನೀಡಲಾಗಿದೆ. ಈ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸ್ಪಷ್ಟನೆ ನೀಡಿದೆ. ವಿಶೇಷ ಪ್ರಕರಣಗಳಲ್ಲಿ ಮಾತ್ರ ದೇಶದ ಹೊರಗೆ ಪ್ರಯಾಣಿಸಲು ಡಿಜಿಸಿಎ ಅನುಮತಿ ಪಡೆಯಬೇಕಿದೆ. ಇದೀಗ ಅಂತರಾಷ್ಟ್ರೀಯ ವಿಮಾನಯಾನ ಸೇವೆಯ ಮೇಲಿನ ನಿರ್ಬಂಧ 7ನೇ ತಿಂಗಳು ಕೂಡ ಮುಂದುವರಿದಿದೆ.

ಈ ನಿರ್ಬಂಧಗಳು ಅಂತಾರಾಷ್ಟ್ರೀಯ ಸರಕು ಸಾಗಣೆ ವಿಮಾನಗಳಿಗೆ ಅನ್ವಯವಾಗುವುದಿಲ್ಲ. ಅಷ್ಟೇ ಅಲ್ಲಾ ಡಿಜಿಸಿಎನಿಂದ ವಿಶೇಷವಾಗಿ ಅನುಮತಿ ಪಡೆದ ವಿಮಾನಗಳಿಗೆ ಅನ್ವಯ ಆಗೋದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಹಿಂದೆ ಡಿಜಿಸಿಎ ನವೆಂಬರ್ 30ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ ವಿಧಿಸಿತ್ತು. ಆಗಲೂ ಕೂಡಾ ಆಯ್ದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳು ಲಭ್ಯ ಇದ್ದವು. ಪ್ರತಿಯೊಂದು ವಿಶೇಷ ಪ್ರಕರಣವನ್ನೂಪರಿಶೀಲನೆ ನಡೆಸಿದ ಬಳಿಕವೇ ಡಿಜಿಸಿಎ ಅನುಮತಿ ನೀಡುತ್ತಿದೆ.

ಕೇಂದ್ರ ಸರಕಾರ ವಿದೇಶಿ ವಿಮಾನಗಳಿಗೆ ನಿರ್ಬಂಧವನ್ನು ಹೇರಿದೆ. ಆದರೂ ಕೂಡ ಅಂತರಾಷ್ಟ್ರೀಯ ಪ್ರಯಾಣ ನಡೆಸಬಹುದಾಗಿದೆ. ಭಾರತ ಹಲವು ದೇಶಗಳ ಜೊತೆಗೆ ಏರ್ ಬಬಲ್ ಒಪ್ಪಂದ ಮಾಡಿಕೊಂಡಿದೆ. ಅಫ್ಘಾನಿಸ್ತಾನ, ಬಾಂಗ್ಲಾ ದೇಶ, ಬಹರೇನ್, ಭೂತಾನ್, ಕೆನಡಾ, ಇತಿಯೋಪಿಯಾ, ಫ್ರಾನ್ಸ್, ಜರ್ಮನಿ, ಇರಾಕ್, ಜಪಾನ್, ಕೀನ್ಯಾ, ಮಾಲ್ಡೀವ್ಸ್, ನೆದರ್‌ಲೆಂಡ್, ನೈಜೀರಿಯಾ, ಒಮನ್, ಕತಾರ್, ರವಾಂಡಾ, ತಾಂಜೇನಿಯಾ, ಯುಎಇ, ಬ್ರಿಟನ್, ಉಕ್ರೇನ್ ಹಾಗೂ ಅಮೆರಿಕ ಸೇರಿದಂತೆ 22 ದೇಶಗಳ ಜೊತೆಗೆ ಭಾರತ ಒಪ್ಪಂದ ಮಾಡಿಕೊಂಡಿದೆ.

ಹೀಗಾಗಿ ಈ ದೇಶಗಳಿಗೆ ಪ್ರಯಾಣಿಸಬಹುದಾಗಿದೆ. ಇನ್ನು ಅಂತಾರಾಷ್ಟ್ರೀಯ ವಿಮಾನ ಹಾರಾಟದ ಮೇಲಿನ ನಿರ್ಬಂಧ ಸೆಪ್ಟೆಂಬರ್ 30ತನಕ ವಿಸ್ತರಣೆ ವಂದೇ ಭಾರತ್ ಮಿಷನ್ ಅಡಿಯಲ್ಲೂ ವಿಮಾನಸೇವೆ ಲಭ್ಯ.

Comments are closed.