ಅಯ್ಯಪ್ಪ ಮಾಲಾಧಾರಿಗಳಿಗೆ ಬಿಗ್ ಶಾಕ್..!! ಕರ್ನಾಟಕದ ಕೋವಿಡ್ ರಿಪೋರ್ಟ್ ಒಪ್ಪದ ಕೇರಳ ಸರಕಾರ

ಬೆಂಗಳೂರು : ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲೀಗ ಮಂಡಲ ಪೂಜಾ ಮಹೋತ್ಸವ. ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಕೇರಳ ಸರಕಾರ ಹಲವು ಷರತ್ತುಗಳ ಜೊತೆಗೆ ಮಾಲಾಧಾರಿಗಳಿಗೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಕೇರಳದ ಸರಕಾರ ಹೊಸ ನಿಯಮ ಅಯ್ಯಪ್ಪ ಭಕ್ತರನ್ನು ಸಂಕಷ್ಟಕ್ಕೆ ನೂಕಿದೆ.

ಈ ಬಾರಿ ಅಯ್ಯಪ್ಪ ಮಾಲಾಧಾರಿಗಳಿಗೆ ಅಯ್ಯಪ್ಪನ ದರ್ಶನ ಭಾಗ್ಯ ಸಿಗೋದೆ ಅನುಮಾನವಾಗಿತ್ತಿ. ಆದರೆ ಕೊರೊನಾ ವೈರಸ್ ಸೋಂಕಿನ ಪ್ರಮಾಣ ತಗ್ಗುತ್ತಿದ್ದಂತೆಯೇ ಕೇರಳ ಸರಕಾರ ಮಾಲಾಧಾರಿಗಳಿಗೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಿತ್ಯವೂ ನಿರ್ಧಿಷ್ಟ ಸಂಖ್ಯೆಯ ಅಯ್ಯಪ್ಪ ಮಾಲಾಧಾರಿಗಳಿಗೆ ಮಾತ್ರವೇ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿದೆ. ಅಲ್ಲದೇ ಕೊರೊನಾ ಟೆಸ್ಟ್ ಮಾಡಿಸಲು ಅವಕಾಶವನ್ನು ಕಲ್ಪಿಸಿದೆ. ಅಲ್ಲದೇ ಕೊರೊನಾ ನೆಗೆಟಿವ್ ವರದಿ ಹೊಂದಿವರಿಗೆ ಮಾತ್ರವೇ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಆದ್ರೆ ಈ ನಡುವಲ್ಲೇ ಕೇರಳ ಸರಕಾರದ ಹೊಸ ನಿಯಮದಿಂದಾಗಿ ಕರ್ನಾಟಕದ ಅಯ್ಯಪ್ಪ ಮಾಲಾಧಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರ್ನಾಟಕದಲ್ಲಿ ಮಾಡಿಸಿರುವ ಕೋವಿಡ್ ಟೆಸ್ಟ್ ರಿಪೋರ್ಟ್ ನ್ನು ಕೇರಳ ಸರಕಾರ ಮಾನ್ಯ ಮಾಡುತ್ತಿಲ್ಲ. ಶಬರಿಮಲೆಯಲ್ಲಿಯೇ ಹಣ ಪಾವತಿಸಿ ಟೆಸ್ಟ್ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತಿದೆ.

ಆನ್ ಲೈನ್ ಮೂಲಕವೇ ಕೊರೊನಾ ಟೆಸ್ಟ್ ವರದಿಯನ್ನು ಸಲ್ಲಿಸಿಯೇ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿರುವ ಭಕ್ತರು ಶಬರಿಗೆಮಲೆಗೆ ತೆರಳಿದಾಗ ಬಾಗಿಲಲ್ಲೇ ತಡೆದು ನಿಲ್ಲಿಸಲಾಗುತ್ತಿದೆ. ಕೊರೊನಾ ತಪಾಸಣೆಗೆ 635 ರೂಪಾಯಿ ಹಣವನ್ನು ಪಡೆದು ಹೊಸದಾಗಿ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಅಯ್ಯಪ್ಪ ಭಕ್ತರು ಆರೋಪಿಸುತ್ತಿದ್ದಾರೆ.

ವೃತಾಚರಣೆ ಮಾಡಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿರುವ ಭಕ್ತರಿಗೆ ಕೇರಳ ಸರಕಾರ ಹೊಸದಾಗಿ ಕೋವಿಡ್ ಪರೀಕ್ಷೆ ಮಾಡುವಂತೆ ಸೂಚಿಸುತ್ತಿರೋದು ಬೇಸರವನ್ನು ಮೂಡಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Comments are closed.