Directed by Natesh Hegde: “ಕಾಂತಾರ” ಮತ್ತು “ಆರ್‌ಆರ್‌ಆರ್‌” ಸಿನಿಮಾ ಬಗ್ಗೆ ಅಭಿಪ್ರಾಯ ಹಂಚಿಕೊಂಡ ನಿರ್ದೇಶಕ ನಟೇಶ್‌ ಹೆಗ್ಡೆ

(Directed by Natesh Hegde) ಸಿನಿಮಾರಂಗದಲ್ಲಿ ಬಿಡುಗಡೆಗೊಂಡ ಸಿನಿಮಾ ಬಗ್ಗೆ ಸಾಕಷ್ಟು ಜನ ಬೇರೆ ಬೇರೆ ಹೇಳಿಕೆಯನ್ನು ನೀಡುತ್ತಾರೆ. ಅದರಂತೆ ಇತ್ತೀಚೆಗೆ ಬಿಡುಗಡಗೊಂಡು ಸಾಕಷ್ಟು ಜನಮನ್ನಣೆಗೊಂಡ “ಕಾಂತಾರ” ಸಿನಿಮಾದ ಬಗ್ಗೆ ಹೊಗಳಿಕೆ ಹಾಗೂ ತೆಗಳಿಕೆಗೂ ಗುರಿಯಾಗಿದೆ. “ಕಾಂತಾರ” ಹಾಗೂ “ಆರ್‌ಆರ್‌ಆರ್‌” ಸೇರಿದಂತೆ ಹಲವು ಸಿನಿಮಾಗಳನ್ನು ತಪ್ಪು ಕಾರಣಕ್ಕೆ ಹೊಗಳುವುದು ಮತ್ತು ತೆಗಳುವುದು ಮಾಡುತ್ತಿದ್ದಾರೆ ಎಂದು ಉದಯೋನ್ಮುಖ ನಿರ್ದೇಶಕ ನಟೇಶ್‌ ಹೆಗ್ಡೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಲಿಟ್‌ರೇಚರ್‌ ಫೆಸ್ಟ್‌ನಲ್ಲಿ “ಬಾಲಿ-ಮಾಲಿ-ಕಾಲಿ-ಟಾಲಿ-ಸ್ಯಾಂಡಲ್‌ವುಡ್”‌ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ನಟೇಶ್‌ ಹೆಗ್ಡೆ (Directed by Natesh Hegde) ಭಾಗವಿಸಿದರು. ಈ ಕಾರ್ಯಕ್ರಮದಲ್ಲಿ ನಟೇಶ್‌ ಸಿನಿಪ್ರೇಕ್ಷಕರ ಮನಸ್ಥಿತಿ ಹಾಗೂ ಅದು ಬದಲಾಗಬೇಕಿರುವ ರೀತಿಯ ಬಗ್ಗೆ ಮಾತಾನಾಡಿದ್ದಾರೆ. ” ಕಾಂತಾರ ಸಿನಿಮಾದಲ್ಲಿ ದಲಿತನೊಬ್ಬ ಮೇಲು ಜಾತಿಯ ಮನೆಗೆ ಹೋಗಿ ಆತನ ಊಟದ ಟೇಬಲ್‌ ಮೇಲೆ ಸಮಾನಾಂತರವಾಗಿ ಕೂತು ಊಟ ಮಾಡುವ ದೃಶ್ಯವಿದೆ. ಆ ದೃಶ್ಯದ ಬಗ್ಗೆ ಚರ್ಚೆ ಆಗಬೇಕು. ಆ ಬಗ್ಗೆ ಮಾತನಾಡುವವರನ್ನು ಹುಡುಕಬೇಕು. ಆದರೆ ಪ್ರೇಕ್ಷಕ ನಾಯಕನ ಪಾತ್ರಧಾರಿ ಕಿರುಚುವುದನ್ನು ಕಂಡು ರೋಮಾಂಚಿತರಾಗುತ್ತಿದ್ದಾರೆ” ಎಂದು ನಟೇಶ್‌ ಹೆಗ್ಡೆ ಹೇಳಿದ್ದಾರೆ.

ತೆಲುಗಿನ ಸೂಪರ್‌ ಹಿಟ್‌ ಸಿನಿಮಾ “ಆರ್‌ಆರ್‌ಆರ್”‌ ಬಗ್ಗೆಯೂ ಮಾತನಾಡಿರುವ ನಟೇಶ್‌ ಹೆಗ್ಡೆ “ಆರ್‌ಆರ್‌ಆರ್”‌ ಸಿನಿಮಾದಲ್ಲಿ ಸಹ ನಾಯಕ ಕಾಡು ಪ್ರಾಣಿಗಳ ಜೊತೆಯಲಿ ಜಂಪ್‌ ಮಾಡುವುದು ಸೇರಿದಂತೆ ಹಲವು ಬಾಲಿಷ ದೃಶ್ಯಗಳನ್ನು ಜನರು ರೋಮಾಂಚಿತಗೊಳ್ಳುತ್ತಿದ್ದಾರೆ. ಈ ಮನಸ್ಥಿತಿಯಿಂದ ಪ್ರೇಕ್ಷಕ ಹೊರಗೆ ಬರಬೇಕು” ಎಂದು ಹೇಳಿದರು. ಆದರೆ ನಟೇಶ್‌ ಹೆಗ್ಡೆ ನಿರ್ದೇಶಿಸಿರುವ ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಇನ್ನಾರೂ ಅಲ್ಲ “ಕಾಂತಾರ”ದ ನಟ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ. ನಟೇಶ್‌ ಹೆಗ್ಡೆ ನಿರ್ದೇಶಿಸಿದ್ದ ಕಿರುಚಿತ್ರ ಹಲವು ಕಿರುಚಿತ್ರ ಸ್ಪರ್ಧೆಗಳಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಅದೇ ಕಾರಣಕ್ಕೆ ರಾಜ್‌ ಬಿ ಶೆಟ್ಟಿ, ನಟೇಶ್‌ ಅವರನ್ನು ಗುರುತಿಸಿ ಅವಕಾಶ ದೊರೆಯುವಂತೆ ಮಾಡಿದರು. ನಟೇಶ್‌ ನಿರ್ದೇಶಿಸಿರುವ “ಪೆದ್ರೊ” ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಬಂಡವಾಳ ಹೂಡಿದರು. ಆ ಸಿನಿಮಾದಲ್ಲಿ ನಟ ರಾಜ್‌ ಬಿ ಶೆಟ್ಟಿ ಸಹ ನಟಿಸಿದ್ದಾರೆ.

ಇದನ್ನೂ ಓದಿ : Mandeep Roy: ಕನ್ನಡದ ಹಿರಿಯ ನಟ ಮನ್ ದೀಪ್ ರಾಯ್ ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

(Directed by Natesh Hegde) Many people give different statements about the movie released in the cinema industry. Accordingly, the movie “Kantara” which was released recently and received a lot of recognition, has been praised and ridiculed. Budding director Natesh Hegde shares his opinion that many movies including “Kantara” and “RRR” are being praised and criticized for wrong reasons.

Comments are closed.