Mangaluru bomb Blast case: ಕರಾವಳಿಯಲ್ಲಿ ಎನ್‍ಐಎ ಕೇಂದ್ರ: ಸಂಸದ ತೇಜಸ್ವಿ ಸೂರ್ಯ

ಮಂಗಳೂರು: (Mangaluru bomb Blast case) ಮಂಗಳೂರು ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಳು ಇನ್ನಷ್ಟು ತೀವ್ರಗೊಳ್ಳುತ್ತಿದ್ದು, ಕ್ಷಣ ಕ್ಷಣಕ್ಕೂ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಈ ಪ್ರಕರಣದ ಕುರಿತಾಗಿ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಬಾಂಬ್‌ ಬ್ಲಾಸ್ಟ್‌ ಹಿಂದಿರುವವರನ್ನು ಕಾನೂನಾತ್ಮಕವಾಗಿ ಸಂಹಾರ ಮಾಡುತ್ತೇವೆ. ಇದಕ್ಕಾಗಿ ಕರಾವಳಿಗೆ ಒಂದು ಎನ್‍ಐಎ ಆಫೀಸ್ ಬೇಕಾಗಿದೆ ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ (Mangaluru bomb Blast case) ಮಾಡಬೇಕು ಎಂಬುದು ಕೆಲವರ ಉದ್ದೇಶವಿದ್ದಂತೆ ಕಾಣುತ್ತಿದೆ. ಆರ್ಥಿಕ ಶಕ್ತಿಕೇಂದ್ರದಲ್ಲಿ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆದಿದೆ. ಕರ್ನಾಟಕದಲ್ಲಿ ಸರಣಿ ಕೊಲೆಗಳು ನಡೆದಿದ್ದವು, ಈಗ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುವ ಕೆಲಸ ನಡೆಯುತ್ತಿದೆ. ಪಿಎಫ್‍ಐ ಬ್ಯಾನ್ ಮಾಡಿದಂತೆ ಭಯೋತ್ಪಾದಕರ ಬೇರು ಸಮೇತ ಕಿತ್ತು ಹಾಕುತ್ತೇವೆ” ಎಂದು ತೇಜಸ್ವಿ ಸೂರ್ಯ ಹೆಳಿದ್ದಾರೆ.

“ಭಯೋತ್ಪಾದನೆ ಸದೆಬಡಿಯುವ ತನಕ ನಾವು ವಿಶ್ರಮಿಸಲ್ಲ. ನಮ್ಮ ಸರ್ಕಾರಗಳು ವಿಶ್ರಮಿಸುವುದಿಲ್ಲ. ಈವರೆಗೆ ರಾಜ್ಯದಲ್ಲಿ ದೊಡ್ಡಮಟ್ಟದ ಚಟುವಟಿಕೆ ನಡೆದಿಲ್ಲ. ಈ ಒಂದು ಘಟನೆ ರಾಜ್ಯವನ್ನು ಎಚ್ಚರಿಸಲಿದೆ. ಕರಾವಳಿಯಲ್ಲೇ ಒಂದು ಎನ್‍ಐಎ ಆಫೀಸ್ ಬೇಕಾಗಿದೆ. ಕರ್ನಾಟಕ ಕರಾವಳಿ ವಿಚ್ಛಿದ್ರ ಶಕ್ತಿಗಳ ಕೇಂದ್ರವಾಗುತ್ತಿದೆ. ಕರಾವಳಿಯಲ್ಲಿ ಎನ್‍ಐಎ ಕ್ಯಾಂಪ್ ಆಫೀಸ್ ಸ್ಥಾಪನೆ ಮಾಡಬೇಕು” ಎಂದು ಮಾಧ್ಯಮದವರೊಂದಿಗೆ ಮಾತನಾಡುವ ಸಮಯದಲ್ಲಿ ತಿಳಿಸಿದ್ದಾರೆ.

“ಕೆಜೆಹಳ್ಳಿ ಡಿಜೆಹಳ್ಳಿ ಪ್ರಕರಣವಾದಾಗಲೇ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಿದ್ದೆ. ಈಗ ಮತ್ತೆ ಕೇಂದ್ರ ಸರ್ಕಾರ ಜೊತೆ ಮಾತನಾಡುತ್ತೇನೆ. ಪೊಲೀಸ್ ಇಂಟೆಲಿಜನ್ಸ್ ಎನ್‍ಐಎ ಜೊತೆಯಾಗಿ ಕೆಲಸ ಮಾಡಿದರೆ ಇಂತಹ ಘಟನೆ ತಡೆಗಟ್ಟಬಹುದು. ರಾಜ್ಯದ ಜನರ ಜೀವ ಮತ್ತು ವಸ್ತುಗಳ ಸಂರಕ್ಷಣೆ ನಮ್ಮ ಕರ್ತವ್ಯ. ನಾವು ಓಟ್ ಬ್ಯಾಂಕ್‍ಗೆ ಮುಲಾಜು ಬಿದ್ದು ರಾಜಕೀಯ ಮಾಡಲ್ಲ. ರಾಷ್ಟ್ರೀಯ ರಾಜ್ಯದ ಸುರಕ್ಷತೆಗೆ ನಮ್ಮ ಆದ್ಯತೆಯಿದೆ. ದೇಶದ ಸುರಕ್ಷತೆ ವಿಚಾರದಲ್ಲಿ ಕಾಂಪ್ರಮೈಸ್ ಮಾಡಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ : Shraddha Walkar murder case : ನ್ಯಾಯಾಲಯಕ್ಕೆ ಅಫ್ತಾಬ್‌ನ ವಿಭಿನ್ನ ಹೇಳಿಕೆ : 4 ದಿನ ಪೊಲೀಸ್‌ ಕಸ್ಟಡಿ ವಿಸ್ತರಣೆ

ಇದನ್ನೂ ಓದಿ : Plane crash in Columbia: ಕೊಲಂಬಿಯಾ ವಿಮಾನ ಪತನ: 8 ಮಂದಿ ಸಾವು

ಶನಿವಾರ ಚಲಿಸುತ್ತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಬೆಂಕಿ ಮತ್ತು ದಟ್ಟವಾದ ಹೊಗೆ ಉಂಟಾಗಿದ್ದು, ಚಾಲಕ ಮತ್ತು ಪ್ರಯಾಣಿಕ ಇಬ್ಬರಿಗೂ ಸುಟ್ಟ ಗಾಯಗಳಾಗಿವೆ. ಆಟೋ ಚಾಲಕನ ಹೇಳಿಕೆಯ ಪ್ರಕಾರ, ಪ್ರಯಾಣಿಕನ ಬ್ಯಾಗ್‌ನಲ್ಲಿ ಏನೋ ಬೆಂಕಿ ಕಾಣಿಸಿಕೊಂಡು ನಂತರ ವಾಹನಕ್ಕೆ ವ್ಯಾಪಿಸಿದೆ. ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಬಳಿ ನಿಂತಿದ್ದ ಆಟೋರಿಕ್ಷಾ ಸ್ಫೋಟಗೊಂಡಿದ್ದು, ಈ ದೃಶ್ಯಾವಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ.

(Mangaluru bomb blast case) Investigations regarding the Mangaluru bomb blast case are intensifying and explosive information is being revealed moment by moment. BJP Yuva Morcha National President Tejaswi Surya said that those behind the bomb blast will be killed legally. He said that one NIA office is needed for the coast.

Comments are closed.