Film Chamber Meeting | ಫಿಲ್ಮ್‌ ಚೇಂಬರ್‌ ಕೈಯಲ್ಲಿ ಅನಿರುದ್ಧ ಕಿರುತೆರೆ ಭವಿಷ್ಯ : ಸಭೆಯಲ್ಲಿ “ಬ್ಯಾನ್”‌ ವಿಚಾರ ಏನಾಯ್ತು

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ಹೊರ ಹಾಕಲಾಯಿತು. (Film Chamber Meeting) ಧಾರಾವಾಹಿಯ ನಿರ್ಮಾಪಕ ಹಾಗೂ ನಿರ್ಮಾಪಕ ಸಂಘದ ಸದಸ್ಯರು ಜಂಟಿಯಾಗಿ ಪತ್ರಿಕಾಗೋಷ್ಠಿ ಮಾಡಿ ಅನಿರುದ್ಧ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಗೈದಿದ್ದಾರೆ. ಅದೇ ವೇಳೆ ಎಲ್ಲಾ ನಿರ್ಮಾಪಕರು ಸಹಮತದಿಂದ ಮುಂದಿನ ಎರಡು ವರ್ಷಗಳವರೆಗೂ ಅನಿರುದ್ಧ್ ಅವರನ್ನು ಯಾವುದೇ ಧಾರಾವಾಹಿಗೆ ಹಾಕಿಕೊಳ್ಳಬಾರದು ಎಂದು ನಿರ್ಧರಿಸಿದ್ದರು. ಆದರೆ, ಕೆಲವು ದಿನಗಳ ಹಿಂದೆ ಎಸ್‌ ನಾರಾಯಣ್ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ಅನಿರುದ್ಧ್ ನಟಿಸುತ್ತಿರೋ ವಿಷಯ ಹೊರ ಬಿದ್ದಿದೆ. ಈ ಕುರಿತು ಕಿರುತೆರೆ ನಿರ್ಮಾಪಕರು ಎಸ್‌ ನಾರಾಯಣ್ ಅವರನ್ನು ಭೇಟಿ ಮಾಡಿ ಅವಕಾಶ ನೀಡದಂತೆ ಮನವಿ ಮಾಡಿಕೊಂಡಿದ್ದರು.

ಇದರ ಬೆಳವಣಿಗೆಯ ಭಾಗವಾಗಿ ಅನಿರುದ್ಧ್ ಹಾಗೂ ಕಿರುತೆರೆ ನಿರ್ಮಾಪಕರ ಪ್ರಕರಣ ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಬಳಿಕ ಫಿಲ್ಮ್ ಚೇಂಬರ್ ಸಭೆ ಮಾಡಿ ಈ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿದೆ. ಅದರಂತೆ ಸಭೆಗೆ ಅನಿರುದ್ಧ್ ಅವರನ್ನು ಕರೆದು ಮಾತಾಡಿಸಲಾಗಿದೆ. ಈ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬಂದಿಲ್ಲವಾದರೂ, ಇಂದು (ಡಿಸೆಂಬರ್ 10) ಕಿರುತೆರೆ ನಿರ್ಮಾಪಕರೊಂದಿಗೆ ಚರ್ಚಿಸಿ ತಮ್ಮ ನಿರ್ಧಾರವನ್ನು ಪ್ರಕಟಿಸಲಿದೆ. ಸದ್ಯಕ್ಕೆ ನಿನ್ನೆ (ಡಿಸೆಂಬರ್ 9) ನಡೆದ ಸಭೆಯಲ್ಲಿ ಚರ್ಚಿಸಿದ ವಿಚಾರ ಇಲ್ಲಿದೆ.

ಒಬ್ಬ ಕಲಾವಿದನನ್ನು ಬ್ಯಾನ್ ಮಾಡುವ ಅಧಿಕಾರ ಯಾರಿಗೂ ಇಲ್ಲ. ಅನಿರುದ್ಧ್ ಜೊತೆ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್ ಸೇರಿದಂತೆ ಪದಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಅನಿರುದ್ಧ್‌ ಅವರಿಂದ ನಡೆದ ಘಟನೆಗಳ ವಿವರವನ್ನು ಪಡೆದುಕೊಂಡು ಪತ್ರಿಕಾ ಗೋಷ್ಠಿಯನ್ನು ಮಾಡಿದ್ದಾರೆ. ‘ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫಿಲ್ಮ್ ಚೇಂಬರ್ ಪದಾಧಿಕಾರಿಗಳು, ನಟ ಅ‌ನಿರುದ್ಧ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಜೊತೆ ಜೊತೆಯಲಿ ಧಾರವಾಹಿಯಲ್ಲಿ ಅನಿರುದ್ಧ್ ಬ್ಯಾನ್ ಮಾಡೋ ವಿಚಾರವಾಗಿ ನಟ ಜೊತೆ ಮಾತನಾಡಿದ್ದೇವೆ. ನಿರ್ಮಾಪಕ ಸಂಘದ ಪದಾಧಿಕಾರಿಗಳ ಜೊತೆ ಕಾನ್ಫರೆನ್ಸ್‌ನಲ್ಲಿ ಮಾತುಕತೆ ಮಾಡಿದ್ದೇವೆ. ನಾಳೆ ಬೆಳಗ್ಗೆ ಫಿಲ್ಮ್ ಚೇಂಬರ್‌ಗೆ ಬರ್ತೇವೆ ಎಂದಿದ್ದಾರೆ. ಅವರ ಜೊತೆಗೂ ಮಾತುಕತೆ ಮಾಡಿ ಸಮಸ್ಯೆ ಬಗೆ ಹರಿಸುತ್ತೇವೆ. ಬ್ಯಾನ್ ಮಾಡೋದಕ್ಕೆ ಯಾರಿಗೂ ಅಧಿಕಾರ ಇಲ್ಲ’ ಎಂದು ಫಿಲ್ಮ್ ಚೇಂಬರ ಅಧ್ಯಕ್ಷ ಭಾ ಮಾ ಹರೀಶ್ ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ ಕಡೆಯಿಂದ ಇನ್ನೂ ಇತ್ಯರ್ಥ ಆಗಿಲ್ಲ. ಸದ್ಯ ಫಿಲ್ಮ್ ಚೇಂಬರ್ ಕಿರುತೆರೆ ನಿರ್ಮಾಪಕರ ಜೊತೆ ಮಾತುಕತೆ ನಡೆಸಿ ಸಂಧಾನ ಮಾಡಿಸಲು ಮುಂದಾಗಿದೆ. ‘ಯಾರೂ ಬ್ಯಾನ್ ಮಾಡೋಕೆ ಆಗಲ್ಲ. ಕಿರುತೆರೆ ಸಿನಿಮಾ ಬಂದ ನಂತರ ಬಂದಿದ್ದು. ಇಲ್ಲಿ ಸಣ್ಣ‌ಪುಟ್ಟ ಸಮಸ್ಯೆಗಳು ಬರೋದು ಸಹಜ. ಕಿರುತೆರೆ ನಿರ್ಮಾಪಕರು ಒಕ್ಕೊರಲಿನಿಂದ ಅನಿರುದ್ಧ್‌ ಅವರನ್ನು ಬ್ಯಾನ್ ಮಾಡೋಕೆ ‌ನಿರ್ಧಾರ ಮಾಡಿದ್ದು ಸರಿ ಅಲ್ಲ. ಅಲ್ಲದೆ ಅನಿರುದ್ಧ್‌ ಅವರು ಕಿರುತೆರೆ ನಿರ್ಮಾಪಕರು ಏನೂ ಕೇಳಲಿಲ್ಲ ಅಂತ ಹೇಳಿದ್ದಾರೆ. ಕಿರುತೆರೆ ಕೂಡ ಒಂದು ಸಂಸ್ಥೆ ಆಗಿದ್ದರಿಂದ ಬ್ಯಾನ್ ನಿರ್ಧಾರ ತೆಗೆದುಕೊಳ್ಳಬಾರದು’ ಎಂದು ಸುಂದರ್‌ ರಾಜ್ ಸಲಹೆ ನೀಡಿದ್ದಾರೆ.

‘ಜೊತೆಜೊತೆಯಲಿ’ ವಿವಾದದ ಬಳಿಕ ಅನಿರುದ್ಧ್‌ ಫಿಲ್ಮ್ ಚೇಂಬರ್‌ನಲ್ಲಿ ಮತ್ತೆ ಅದೇ ಘಟನೆಯ ಬಗ್ಗೆ ಮಾತಾಡಿದ್ದಾರೆ. ‘ನಾನು ಸಾಕಷ್ಟು ಲೇಖನ ಬರಿತೀನಿ ಅದು ನಿಮಗೆಲ್ಲಾ ಗೊತ್ತಿದೆ. ಹಲವು ಲೇಖನದಲ್ಲಿ ವಸುದೈವ ಕುಟುಂಬ ಅನ್ನೋ ಪದ ಬಳಸಿದ್ದೇನೆ. ಹಾಗೆ ಅಂದರೆ ನನ್ನ ಕುಟುಂಬ ಅಂತ ಅರ್ಥ. ‘ಜೊತೆ ಜೊತೆಯಲಿ’ ಧಾರಾವಾಹಿ ಕೂಡ ನನ್ನ ಕುಟುಂಬವಿದ್ದಂತೆ. ಒಂದು ಕುಟುಂಬ ಅಂದ ಮೇಲೆ ಸಮಸ್ಯೆ ಬರೋದು ಸಹಜ. ಅದನ್ನು ಕುಟುಂಬದ ಸದಸ್ಯರು ಕೂತು‌ ಬಗೆಹರಿಸಿಕೊಳ್ಳೊದು ಒಳ್ಳೆಯದು. ಆದರೆ ಅವರು ನನ್ನನ್ನು ಕರೆದಿಲ್ಲ. ನಾನೇ ಹೋಗಿ ಮಾತಾಡೋಕೆ ಪ್ರಯತ್ನ ಪಟ್ಟೆ ಫೋನ್ ಕಾಲ್ ಮಾಡಿದೆ. ಆದರೆ ಅದಕ್ಕೂ ಅವರು ರೆಸ್ಪಾನ್ಸ್ ಮಾಡಿಲ್ಲ. ‘ಜೊತೆ ಜೊತೆಯಲಿ’ ನಿರ್ದೇಶಕ ಆರೂರು ಜಗದೀಶ್‌ಗೆ ಕರೆ ಮಾಡಿದ್ದೇನೆ. ಆದರೆ ಅವರು ಯಾವುದೇ ಉತ್ತರ ಕೊಟ್ಟಿಲ್ಲ ಎಂದಿದ್ದಾರೆ.

ಇದನ್ನೂ ಓದಿ : Internet Movie Database : 2022ನೇ ಸಾಲಿನ ಟಾಪ್ 10 ಭಾರತೀಯರ ನಟ-ನಟಿಯರ ಪಟ್ಟಿ ಬಿಡುಗಡೆ : ಧನುಷ್‌ ನಂ 1, ಯಶ್ ಎಷ್ಟನೇ ಸ್ಥಾನ?

ಇದನ್ನೂ ಓದಿ : Vasuki Vaibhav – Chandana : ಹಸೆಮಣೆ ಏರಲು ಸಜ್ಜಾದ ಬಿಗ್‌ಬಾಸ್‌ ಖ್ಯಾತಿಯ ವಾಸುಕಿ ವೈಭವ್‌ – ಚಂದನಾ

ಇದನ್ನೂ ಓದಿ : Rashmika Mandanna Ban‌ : ನನ್ನ ಯಾರು ಬ್ಯಾನ್‌ ಮಾಡಿಲ್ಲ : ಕನ್ನಡ ಸಿನಿಮಾ ಬಗ್ಗೆ ಪ್ರೀತಿ ಇದೆ : ರಶ್ಮಿಕಾ ಮಂದಣ್ಣ

ಧಾರಾವಾಹಿ ತಂಡದಿಂದ ಇದೂವರೆಗೂ ಯಾವುದೇ ಅನಿರುದ್ಧ್ ಉತ್ತರ ಸಿಕ್ಕಿಲ್ಲ. ‘ಜೊತೆ ಜೊತೆಯಲಿ’ ನಿರ್ದೇಶಕ ಆರೂರು ಜಗದೀಶ್ ವಾಯ್ಸ್ ಮೆಸೇಜ್ ಕಳಿಸಿದ್ದರು. ಆ ಮೆಸೇಜ್‌ನಲ್ಲಿ ಏನಿದೆ ಎಂದು ಅನಿರುದ್ಧ್ ವಿವರಿಸಿದ್ದಾರೆ. ‘ ಕೊನೆಗೆ ಮೆಸೇಜ್ ಮಾಡಿ ನನಗೆ ಒತ್ತಡ ಇದೆ ಸರ್ ಅಂತ ವಾಯ್ಸ್ ಮೆಸೇಜ್ ಕಳಿಸಿದ್ದಾರೆ. ಯಾರ ಒತ್ತಡ ಅಂತ ಕೇಳಿದ್ರೆ ಹೇಳಿಲ್ಲ. ಅದಕ್ಕೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಮೂರು ವರ್ಷ ಎರಡು‌ ತಿಂಗಳು ಅವರ ಜೊತೆ ಕೆಲಸ ಮಾಡಿದ್ದೇನೆ.’ ಎಂದು ಅನಿರುದ್ಧ್ ಹೇಳಿದ್ದಾರೆ.

Film Chamber Meeting | Future of AnirudhTelevision in the hands of Film Chamber: What happened to the “ban” issue in the meeting

Comments are closed.