ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ‘ಟಾಕ್ಸಿಕ್’ ಅಫಿಶಿಯಲ್ ರಿಲೀಸ್ ಡೇಟ್ ಫಿಕ್ಸ್!
ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವಾಗ ಬರುತ್ತೆ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಒಂದು ಬಿಗ್ ಅಪ್ಡೇಟ್ ಸಿಕ್ಕಿದೆ! ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಆಫಿಶಿಯಲ್ ರಿಲೀಸ್ ಡೇಟ್ ಅನ್ನು ಕೊನೆಗೂ ಅನೌನ್ಸ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಯಾವಾಗ ಬರುತ್ತೆ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಒಂದು ಬಿಗ್ ಅಪ್ಡೇಟ್ ಸಿಕ್ಕಿದೆ! ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಆಫಿಶಿಯಲ್ ರಿಲೀಸ್ ಡೇಟ್ ಅನ್ನು ಕೊನೆಗೂ ಅನೌನ್ಸ್ ಮಾಡಿದ್ದಾರೆ. ಕೆಜಿಎಫ್-2 ಸೂಪರ್ ಸಕ್ಸಸ್ ನಂತರ ಯಶ್ ಅವರ ಮುಂದಿನ ಹೆಜ್ಜೆ ಏನಾಗಿರಬಹುದು ಅನ್ನೋ ಕುತೂಹಲ ಇಡೀ ಇಂಡಿಯನ್ ಸಿನೆಮಾ ಇಂಡಸ್ಟ್ರಿಯಲ್ಲಿತ್ತು. ಈಗ ಆ ಕುತೂಹಲಕ್ಕೆ ಅಫಿಶಿಯಲ್ ಆಗಿ ತೆರೆ ಬಿದ್ದಿದೆ.
ಅನೇಕ ದಿನಗಳ ಚರ್ಚೆ ಮತ್ತು ಕಾಯುವಿಕೆಯ ನಂತರ, ರಾಕಿಂಗ್ ಸ್ಟಾರ್ ಯಶ್ ಜೂನ್ 21 ರಂದೇ ತಮ್ಮ ಬಹುನಿರೀಕ್ಷಿತ ಸಿನಿಮಾದ ರಿಲೀಸ್ ಡೇಟ್ ಅನ್ನು ಕನ್ಫರ್ಮ್ ಮಾಡಿದ್ದಾರೆ. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ʼಟಾಕ್ಸಿಕ್ʼ ಸಿನಿಮಾ ಇದೇ ಬರುವ ಆಗಸ್ಟ್ 26, 2026 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ತೆರೆಗೆ ಅಪ್ಪಳಿಸಲಿದೆ.
ಇದನ್ನೂ ಓದಿ : ನಟಿ ರುಕ್ಮಿಣಿ ವಸಂತ ಡೀಪ್‌ಫೇಕ್ ಕೇಸ್: ಬೆಂಗಳೂರಿನಲ್ಲಿ ಮೂವರು ಆರೋಪಿಗಳ ಬಂಧನ
ಈ ಚಿತ್ರದಲ್ಲಿ ಯಶ್ ಜೊತೆ ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ, ಬಾಲಿವುಡ್ ಕ್ಯೂಟಿ ಕಿಯಾರಾ ಅಡ್ವಾಣಿ ಮತ್ತು ನಮ್ಮ ಹೆಮ್ಮೆಯ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದು ಕೇವಲ ಪ್ಯಾನ್-ಇಂಡಿಯಾ ಅಷ್ಟೇ ಅಲ್ಲ, ಭಾರತೀಯ ಭಾಷೆಗಳ ಜೊತೆಗೆ ಇಂಗ್ಲಿಷ್ ಸೇರಿದಂತೆ ಇಂಟರ್ನ್ಯಾಷನಲ್ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿರೋದು ಈ ಸಿನಿಮಾದ ಮತ್ತೊಂದು ಹೈಲೈಟ್.
ಬರೀ ಟಾಕ್ಸಿಕ್ ಅಷ್ಟೇ ಅಲ್ಲ, 2026 ರಲ್ಲಿ ಯಶ್ ಅಭಿಮಾನಿಗಳಿಗೆ ಡಬಲ್ ಟ್ರೀಟ್ ಸಿಗಲಿದೆ. ನಿತೇಶ್ ತಿವಾರಿ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’ದಲ್ಲಿ ಯಶ್ ಲಂಕೇಶ್ವರ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಕೂಡ 2026 ರ ದೀಪಾವಳಿ ಹಬ್ಬದ ವಿಶೇಷವಾಗಿ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ರಿಲೀಸ್ ಆಗಲು ದಿನಾಂಕ ನಿಗದಿ ಮಾಡಿಕೊಳ್ಳುತ್ತಿದೆ.
ಒಟ್ಟಿನಲ್ಲಿ ಕೆಜಿಎಫ್-2 ನಂತರ ಲಾಂಗ್ ಗ್ಯಾಪ್ ತಗೊಂಡಿದ್ದ ರಾಕಿಂಗ್ ಸ್ಟಾರ್, ಈಗ 2026 ರಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್ ಧೂಳೀಪಟ ಮಾಡೋಕೆ ಕಂಪ್ಲೀಟ್ ಆಗಿ ರೆಡಿಯಾಗಿದ್ದಾರೆ.



