Vicky Kaushal : ಬಾಲಿವುಡ್​​ ನಟ ವಿಕ್ಕಿ ಕೌಶಲ್​ ವಿರುದ್ಧ ದಾಖಲಾಯ್ತು ಪೊಲೀಸ್​ ಕಂಪ್ಲೇಂಟ್​..!

Vicky Kaushal :ಬಾಲಿವುಡ್​ ನಟ ವಿಕ್ಕಿ ಕೌಶಲ್​ ಹಾಗೂ ನಟಿ ಕತ್ರಿನಾ ಕೈಫ್​​ ಕೆಲ ದಿನಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಆದರೆ ಈ ಬಾರಿ ಮಾತ್ರ ವಿಕ್ಕಿ ಕೌಶಲ್​ ಒಂದು ವಿಚಿತ್ರ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಹೌದು..! ಈ ಬಾರಿ ವಿಕ್ಕಿ ಕೌಶಲ್​ ಸುದ್ದಿಯಾಗೋಕೆ ಕಾರಣ ನಂಬರ್​ ಪ್ಲೇಟ್​..!


ಅರ್ರೆ..! ನಂಬರ್​ ಪ್ಲೇಟ್​ಗೂ ವಿಕ್ಕಿ ಕೌಶಲ್​ಗೂ ಏನ್​ ಲಿಂಕ್​ ಅಂತಾ ತಲೆಕೆರೆದುಕೊಳ್ತಿದ್ದೀರಾ..? ವಿಕ್ಕಿ ಕೌಶಲ್​ ವಿರುದ್ಧ ನಂಬರ್​ ಪ್ಲೇಟ್​ ಕಾರಣಕ್ಕೆ ಇಂದೋರ್​ನಲ್ಲಿ ದೂರು ದಾಖಲಾಗಿದೆಯಂತೆ..! ನನ್ನ ವಾಹನದ ನಂಬರ್​ ಪ್ಲೇಟ್​​ನ್ನು ನಟ ವಿಕ್ಕಿ ಕೌಶಲ್​ ತಮ್ಮ ಗಾಡಿಯ ನಂಬರ್​ ಪ್ಲೇಟ್​ ಆಗಿ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಇಂದೋರ್​ನ ನಿವಾಸಿಯೊಬ್ಬರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.


ತಮ್ಮ ಮುಂಬರುವ ಸಿನಿಮಾ ಶೂಟಿಂಗ್​ ವೇಳೆಯಲ್ಲಿ ಸಾರಾ ಅಲಿ ಖಾನ್​ ಜೊತೆಯಲ್ಲಿ ನಟ ವಿಕ್ಕಿ ಕೌಶಲ್​ ತಮ್ಮದೇ ಗಾಡಿಯ ನಂಬರ್​ ಪ್ಲೇಟ್​​ನ್ನು ಬಳಕೆ ಮಾಡಿದ್ದಾರೆ ಎಂದು ಜೈ ಸಿಂಗ್​ ಯಾದವ್​ ದೂರು ನೀಡಿದ್ದಾರೆ. ನನ್ನ ಅನುಮತಿಯಿಲ್ಲದೇ ನಟ ವಿಕ್ಕಿ ಕೌಶಲ್​ ನನ್ನ ಗಾಡಿಯ ನಂಬರ್ ಪ್ಲೇಟ್​ ಹೇಗೆ ಬಳಕೆ ಮಾಡಿದ್ದಾರೆ ಎಂಬುದು ಜೈ ಸಿಂಗ್​ ಯಾದವ್​ ಪ್ರಶ್ನೆಯಾಗಿದೆ.


ಇನ್ನು ಈ ವಿಚಾರವಾಗಿ ಮಾತನಾಡಿದ ಜೈ ಸಿಂಗ್​ ಯಾದವ್​, ಸಿನಿಮಾದ ದೃಶ್ಯವಳಿಯಲ್ಲಿ ನನ್ನ ವಾಹನದ ನಂಬರ್​ ಪ್ಲೇಟ್​ನ್ನೇ ವಿಕ್ಕಿ ಕೌಶಲ್​ ವಾಹನದ ನಂಬರ್​ ಪ್ಲೇಟ್ ಆಗಿ ಬಳಕೆ ಮಾಡಲಾಗಿದೆ. ಇಲ್ಲಿ ನನ್ನ ಅನುಮತಿಯನ್ನು ಯಾರೂ ಕೇಳಿಲ್ಲ. ಹೀಗಾಗಿ ನಾನು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಶೀಘ್ರದಲ್ಲೇ ಪೊಲೀಸರು ಕಾನೂನು ಕ್ರಮ ಜರುಗಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ದೂರಿನ ವಿಚಾರವಾಗಿ ಮಾತನಾಡಿದ ಇಂದೋರ್​ ಬಂಗಂಗಾ ಏರಿಯಾದ ಎಸ್​ಐ ರಾಜೇಂದ್ರ ಸೋನಿ, ನಾವು ದೂರನ್ನು ಸ್ವೀಕರಿಸಿದ್ದೇವೆ. ನಂಬರ್​ ಪ್ಲೇಟ್​ನ್ನು ಅಕ್ರಮವಾಗಿ ಬಳಕೆ ಮಾಡಲಾಗಿದೆಯೇ ಎಂದು ಪರಿಶೀಲಿಸುತ್ತಿದ್ದೇವೆ. ಮೋಟಾರ್​ ವಾಹನ ಕಾಯ್ದೆಯ ಅಡಿಯಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Indore resident files complaint against Vicky Kaushal for using his vehicle number in film sequence

ಇದನ್ನು ಓದಿ : Kajal Aggarwal : ಹೊಸವರ್ಷದಂದು ಶುಭಸುದ್ದಿ ಹಂಚಿಕೊಂಡ ಕಾಜಲ್​ ಅಗರ್ವಾಲ್​ ದಂಪತಿ

ಇದನ್ನೂ ಓದಿ : Liger :ಲೈಗರ್ ಅವತಾರದಲ್ಲಿ ಗೀತಗೋವಿಂದಂ ಹೀರೋ : ಟೀಸರ್ ನಲ್ಲಿ ಮಿಂಚಿದ ವಿಜಯ್ ದೇವರಕೊಂಡ

Comments are closed.