Janhvi Kapoor: ಲವೆಂಡರ್ ಕಾಂಜೀವರಂ ಸೀರೆಯಲ್ಲಿ ಜಾನ್ವಿ ಕಪೂರ್ ಜಾದೂ! ಮೆಹೆಂದಿಯಲ್ಲಿತ್ತು ಬಾಯ್‌ಫ್ರೆಂಡ್ ಹೆಸರು!

ಇತ್ತೀಚೆಗೆ ನಡೆದ ಅಂಶುಲಾ ಕಪೂರ್ ಮತ್ತು ರೋಹನ್ ಠಕ್ಕರ್ ಅವರ ಮದುವೆ ಆರತಕ್ಷತೆ (Wedding Reception) ಕಾರ್ಯಕ್ರಮದಲ್ಲಿ ಜಾನ್ವಿ ಸಾಂಪ್ರದಾಯಿಕ ಲುಕ್‌ನಲ್ಲಿ ಬಂದು ಎಲ್ಲರ ಕಣ್ಣು ಕೋರೈಸಿದ್ದಾರೆ. ಅವರು ಉಟ್ಟಿದ್ದ ಲವೆಂಡರ್ ಬಣ್ಣದ ಕಾಂಜೀವರಂ ಸೀರೆ ಹಾಗೂ ಅವರ ಕೈಲಿದ್ದ ವಿಶೇಷ ಮೆಹೆಂದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಮುಂಬೈ: ಬಾಲಿವುಡ್‌ನ ಗ್ಲಾಮರಸ್ ಬ್ಯೂಟಿ ಜಾನ್ವಿ ಕಪೂರ್ (Janhvi Kapoor) ತಮ್ಮ ಫ್ಯಾಷನ್ ಸೆನ್ಸ್ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನಡೆದ ಅಂಶುಲಾ ಕಪೂರ್ ಮತ್ತು ರೋಹನ್ ಠಕ್ಕರ್ ಅವರ ಮದುವೆ ಆರತಕ್ಷತೆ (Wedding Reception) ಕಾರ್ಯಕ್ರಮದಲ್ಲಿ ಜಾನ್ವಿ ಸಾಂಪ್ರದಾಯಿಕ ಲುಕ್‌ನಲ್ಲಿ ಬಂದು ಎಲ್ಲರ ಕಣ್ಣು ಕೋರೈಸಿದ್ದಾರೆ. ಅವರು ಉಟ್ಟಿದ್ದ ಲವೆಂಡರ್ ಬಣ್ಣದ ಕಾಂಜೀವರಂ ಸೀರೆ ಹಾಗೂ ಅವರ ಕೈಲಿದ್ದ ವಿಶೇಷ ಮೆಹೆಂದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಅಂಶುಲಾ ಕಪೂರ್ ರಿಸೆಪ್ಷನ್‌ನಲ್ಲಿ ಜಾನ್ವಿ ಧರಿಸಿದ್ದು ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಲವೆಂಡರ್ ಮತ್ತು ಗೋಲ್ಡ್ ಬಣ್ಣದ ಕಾಂಜೀವರಂ ರೇಷ್ಮೆ ಸೀರೆ. ಅಗಲವಾದ ಕಸೂತಿ ಬಾರ್ಡರ್ ಹೊಂದಿದ್ದ ಈ ಸೀರೆ ಜಾನ್ವಿಗೆ ಕಂಪ್ಲೀಟ್ ರಾಯಲ್ ಹಾಗೂ ದಕ್ಷಿಣ ಭಾರತದ ನಾರಿಯ ಕಳೆಯನ್ನು ತಂದುಕೊಟ್ಟಿತ್ತು. ರೇಷ್ಮೆ ಸೀರೆಗಳನ್ನು ಅಪಾರವಾಗಿ ಇಷ್ಟಪಡುತ್ತಿದ್ದ ತಮ್ಮ ತಾಯಿ, ದಿವಂಗತ ನಟಿ ಶ್ರೀದೇವಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿಯೇ ಜಾನ್ವಿ ಈ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ.

JanhviKapoor

ಈ ಸಮಾರಂಭದಲ್ಲಿ ಜಾನ್ವಿ ಅವರ ಸೌಂದರ್ಯ, ಸ್ಟೈಲಿಂಗ್ ಹಾಗೂ ಜ್ಯುವೆಲ್ಲರಿ ಎಷ್ಟು ಹೈಲೈಟ್ ಆಯಿತೋ, ಅಷ್ಟೇ ಅವರ ಕೈಯಲ್ಲಿದ್ದ ಮೆಹೆಂದಿ ಕೂಡ ನೆಟ್ಟಿಗರ ಗಮನ ಸೆಳೆಯಿತು. ಹೌದು, ಜಾನ್ವಿ ಕಪೂರ್ ತಮ್ಮ ಕೈಯಲ್ಲಿ ಬಿಡಿಸಿಕೊಂಡಿದ್ದ ಮೆಹೆಂದಿಯಲ್ಲಿ ಅವರ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಅವರ ಹೆಸರಿನ ಅಕ್ಷರಗಳು ಅಡಗಿದ್ದವು ಎನ್ನಲಾಗಿದ್ದು, ಬಿ-ಟೌನ್‌ನಲ್ಲಿ ಈ ಬಗ್ಗೆ ಸಖತ್ ಚರ್ಚೆಗಳು ನಡೆಯುತ್ತಿವೆ.

ಆಧುನಿಕತೆ ಮತ್ತು ಸಂಪ್ರದಾಯದ ಅದ್ಭುತ ಮಿಶ್ರಣದಂತಿದ್ದ ಜಾನ್ವಿ ಕಪೂರ್ ಅವರ ಈ ಕಾಂಜೀವರಂ ಸೀರೆ ಲುಕ್ ಫ್ಯಾಷನ್ ಪ್ರೇಮಿಗಳ ಮನಗೆದ್ದಿದ್ದು, ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.