Duniya Vijay- Panipuri Kitty : 4 ವರ್ಷದ ಹಳೆಯ ಕೇಸ್‌ ರೀ ಓಪನ್ : ಮತ್ತೆ ಸುದ್ದಿಯಲ್ಲಿ ದುನಿಯಾ ವಿಜಯ್‌- ಪಾನಿಪುರಿ ಕಿಟ್ಟಿ ಕಿರಿಕ್‌

ನಟ ದುನಿಯಾ ವಿಜಯ್‌ ನಾಲ್ಕು ವರ್ಷಗಳ ಹಿಂದೆ ದೊಡ್ಡ ವಿವಾದಕ್ಕೆ ಸಿಲಿಕಿಕೊಂಡಿದ್ದರು. ಹೈಗ್ರೌಂಡ್ಸ್‌ ಪೊಲೀಸ ಠಾಣೆಯ ಮುಂದೆಯೇ ವಿಜಯ್‌ ಹಾಗೂ ಪಾನಿಪುರಿ ಕಿಟ್ಟಿ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಮಟ್ಟಕ್ಕೆ (Duniya Vijay- Panipuri Kitty) ತಲುಪಿತ್ತು. ಅಂದು ಮೊಬೈಲ್‌ನಲ್ಲಿ ಸೆರೆಯಾಗಿದ್ದ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸುದ್ದಿ ವಾಹಿನಿಗಳಲ್ಲಿ ಸಖತ್‌ ಸದ್ದು ಮಾಡಿದೆ.

2018 ಸೆಪ್ಟೆಂಬರ್‌ 23ರಂದು ಬೆಂಗಳೂರಿನ ವಸಂತನಗರದಲ್ಲಿನ ಅಂಬೇಡ್ಕರ್‌ ಭವನದಲ್ಲಿ ಬಾಡಿ ಬಿಲ್ಡಿಂಗ್‌ ಸ್ಪರ್ಧೆ ನಡೆಯುತ್ತಿತ್ತು. ಆ ಕಾರ್ಯಕ್ರಮಕ್ಕೆ ನಟ ದುನಿಯಾ ವಿಜಯ್‌ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅದರಂತೆ ತಮ್ಮ ಮಗ ಸಾಮ್ರಾಟ್‌ ಜೊತೆ ದುನಿಯಾ ವಿಜಯ್‌ ಕಾರ್ಯಕ್ರಮಕ್ಕೆ ತೆರಳಿ ಮನೆಗೆ ಹಿಂದಿರುವಾಗ ಮಾರುತಿ ಗೌಡ ಎನ್ನುವವ ದುನಿಯಾ ವಿಜಯ್‌ ಅವರನ್ನು ನಿಂದಿಸಿದ್ದಾರೆ. ಇದರಿಂದ ರೊಚ್ಚಿಗೆದ್ದಿದ್ದ ದುನಿಯಾ ವಿಜಯ್‌ ಅಭಿಮಾನಿಗಳು ಮಾರುತಿ ಗೌಡಗೆ ಮುತ್ತಿಗೆ ಹಾಕಿದ್ದರು.

ಈ ಸಂದರ್ಭದಲ್ಲಿ ಮಾರುತಿ ಗೌಡ ಅವರನ್ನು ದುನಿಯಾ ವಿಜಯ ಕರೆತಂದು ಕಾರಿನಲ್ಲಿ ಕೂರಿಸಿದ್ದರು. ಇತ್ತ ಮಾರುತಿ ಗೌಡ ಸಂಬಂಧಿ ಪಾನಿಪುರಿ ಕಿಟ್ಟಿ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ತೆರಳಿ ದುನಿಯಾ ವಿಜಯ್‌ ಮಾರುತಿ ಗೌಡ ಅವರನ್ನು ಅಪಹರಿಸಿದ್ದಾರೆ ಹಾಗೂ ಘಟನೆ ನಡೆದ ಸ್ಥಳದಲ್ಲಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದರು. ಇದರ ಮೇರೆಗೆ ದುನಿಯಾ ವಿಜಯ್‌ ಅವರನ್ನು ಸಂಪರ್ಕಿಸಿದ್ದ ಪೊಲೀಸರು ಮಾರುತಿ ಗೌಡ ಅವರನ್ನು ಠಾಣೆಗೆ ಕರೆತರುವಂತೆ ಸೂಚಿಸಿದ್ದರು. ಹೀಗೆ ಠಾಣೆಗೆ ಬಂದ ದುನಿಯಾ ವಿಜಯ್‌ ಹಾಗೂ ದೂರು ನೀಡಿದ ಠಾಣೆಯ ಬಳಿಯೇ ಇದ್ದ ಪಾನಿಪುರಿ ಕಿಟ್ಟಿ ಹಾಗೂ ಸಹಚರರೊಂದಿಗೆ ಮಾತಿನ ಚಕಮಕಿ ನಡೆದಿದೆ.

ಅಂದಿನ ದಿನ ಠಾಣೆಗೆ ಬಂದಾಗ ದುನಿಯಾ ವಿಜಯ್‌ ತಮ್ಮ ಮೇಲೆ ಪಾನಿಪುರಿ ಕಿಟ್ಟಿ ಹಾಗೂ ಅವರ ಸಂಗಡಿಗರು ತನ್ನ ಮೇಲೆ ಹಲ್ಲೆ ಯತ್ನ ನಡೆಸಿದ್ದಾರೆ ಹಾಗೂ ತನ್ನ ಕಾರಿಗೆ ಹಾನಿ ಮಾಡಿದ್ದಾರೆ ಎಂದು ಪ್ರತಿ ದೂರನ್ನು ನೀಡಿದ್ದರು. ಆದರೆ ಈ ಕೇಸ್‌ನ್ನು ಕ್ಲೋಸ್‌ ಮಾಡಲಾಗಿತ್ತು. ಆದರೆ ಪಾನಿಪುರಿ ಕಿಟ್ಟಿ ನೀಡಿದ ದೂರು ಮಾತ್ರ ಇನ್ನೂ ಕೂಡ ನಡೆಯುತ್ತಲೇ ಇದೆ. ಕರ್ನಾಟಕದ ಉಚ್ಛ ನ್ಯಾಯಲಯ 2022 ಅಕ್ಟೋಬರ್‌ 22ರಂದು ಆದೇಶವನ್ನು ನೀಡಿದ ಅನ್ವಯ ದುನಿಯಾ ವಿಜಯ್‌ ಪಾನಿಪುರಿ ಕಿಟ್ಟು ಮೇಲೆ ನೀಡಿದ ದೂರು ರೀ ಓಪನ್‌ ಆಗಿದೆ. ಈ ಆದೇಸದ ಮೇರೆಗೆ 2022 ಡಿಸೆಂಬರ್ 8ರಂದು ಪಾನಿಪುರಿ ಕಿಟ್ಟಿ ಹಾಗೂ ಮಾರುತಿ ಗೌಡ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಆರ್‌ಐ ದಾಖಲಾಗಿದೆ. ಈ ಮೂಲಕ ಪಾನಿಪುರಿ ಕಿಟ್ಟಿಗೆ ಸಂಕಷ್ಟ ಶುರುವಾಗಿದೆ.

ಕೇಸ್‌ ರೀ ಓಪನ್‌ ಆಗಿದ್ದು ಹೇಗೆ ?
ಇನ್ನು ದುನಿಯಾ ವಿಜಯ್‌ ನೀಡಿದ ಪ್ರತಿದೂರಿನಲ್ಲಿ 2018ಸೆಪ್ಟೆಂಬರ್ 23ರಂದು ಮಾರುತಿ ಗೌಡ ದುನಿಯಾ ವಿಜಯ ಹಾಗೂ ಅವರ ಮಗ ಸಾಮ್ರಾಟ್‌ ಮೇಲೆ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯನ್ನು ಹಾಕುತ್ತಾರೆ. ಆಗ ದುನಿಯಾ ವಿಜಯ್‌ ಅಭಿಮಾನಿಗಳು ಮಾರುತಿ ಗೌಡನನ್ನು ಮುತ್ತಿಗೆ ಹಾಕುತ್ತಾರೆ. ನಂತರ ದುನಿಯಾ ವಿಜಯ್‌ ಮಾರುತಿ ಗೌಡ ಅವರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಬಂದು ಕುರಿಸುತ್ತಾರೆ. ಇದೇ ಸಂದರ್ಭದಲ್ಲಿ ಮಾರುತಿ ಗೌಡನಿಗೆ ಪಾನಿಪುರಿ ಕಿಟ್ಟಿ ಕರೆಮಾಡಿ ದುನಿಯಾ ವಿಜಯ್‌ ಬಳಿ ಮಾತನಾಡಿ ಮತ್ತೆ ಅಂಬೇಡ್ಕರ್‌ ಭವನಕ್ಕೆ ಬಾ ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ : The Kashmiri Files selected: ಸ್ವಿಟ್ಜರ್ಲೆಂಡ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ: ದಿ ಕಾಶ್ಮೀರಿ ಫೈಲ್ಸ್‌ ಆಯ್ಕೆ

ಇದನ್ನೂ ಓದಿ : Rashmika Instagram: ಇನ್ ಸ್ಟಾಗ್ರಾಂ ಖಾತೆಯಲ್ಲಿ ರಶ್ಮಿಕಾ ಮಂದಣ್ಣ ಹೆಸರೇ ಉಲ್ಟಾ ಆಗೋಯ್ತು; ಏನಿದರ ಸೀಕ್ರೆಟ್?

ಅಷ್ಟರಲ್ಲಿ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಿಂದ ಕರೆ ಬಂದಿದ್ದು, ಮಾರುತಿ ಗೌಡನನ್ನು ಮನೆಗೆ ತಲುಪಿಸುವ ಬಂದಲು ಕಾನೂನಿಗೆ ಬೆಲೆ ಕೊಟ್ಟು ಆತನನ್ನು ಠಾಣೆಗೆ ಕರೆದು ಕೊಂಡು ಬಂದೆ ಎಂದಿದ್ದಾರೆ. ಆಗ ಅಲ್ಲಿಯೇ ಇದ್ದ ಪಾನಿಪುರಿ ಕಿಟ್ಟಿ ಹಾಗೂ ಸಂಗಡಿಗರು ನಿನ್ನ ಹಾಗೂ ನಿನ್ನ ಮಗನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದು, ಆತನ ಸಹಚರನೊಬ್ಬ ಚಾಕುವಿನಿಂದ ತಿವಿಯಲು ಬಂದ, ಆಗ ತಪ್ಪಿಸಿಕೊಂಡು ಠಾಣೆ ಗೆ ಹೋಗಿದ್ದೇವೆ. ಈ ಸಂದರ್ಭದಲ್ಲಿ ನನ್ನ ರೇಂಜ್‌ ರೋವರ್‌ ಕಾರಿನ ಮೇಲೆ ಕೂಡ ಪಾನಿಪುರಿ ಕಿಟ್ಟಿ ಹಾಗೂ ಆತನ ಸಂಗಡಿಗರು ಹಾನಿ ಮಾಡಿದ್ದಾರೆ. ಹಾಗಾಗಿ ಪಾನಿಪುರಿ ಕಿಟ್ಟಿ, ಮಾರುತಿ ಗೌಡ ಹಾಗೂ ಅವರ ಸಹಚರರ ಮೇಲೆ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ದೂರನ್ನು ನೀಡಿದ್ದು ಈ ಕೇಸ್‌ ರೀ ಓಪನ್‌ ಆಗಿದೆ.

4 year old case reopened : Duniya Vijay- Panipuri Kitty Kirik is again in news.

Comments are closed.