Kajal Aggarwal : ಕಾಜಲ್ ಅಗರ್ವಾಲ್‌ ಕ್ಯಾರವಾನ್‌ಗೆ ಅನುಮತಿಯಿಲ್ಲದೆ ನುಗ್ಗಿ ಬಟ್ಟೆ ಬಿಚ್ಚಿದ ..!

ತೆಲುಗಿನ ಮಗಧೀರ, ಡಾರ್ಲಿಂಗ್‌, ಬ್ಯಸಿನೆಸ್‌ ಮ್ಯಾನ್‌ ಸೇರಿದಂತೆ ಸಾಲು ಸಾಲು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿರುವ ನಟಿ ಕಾಜಲ್‌ ಅಗರ್ವಾಲ್‌ ತನ್ನ ನಟನೆಯ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾಳೆ.

ನಟಿ ಕಾಜಲ್‌ ಅಗರ್‌ವಾಲ್‌ (Kajal Aggarwal ) ದಕ್ಷಿಣ ಭಾರತೀಯ ಸಿನಿಮಾ ರಂಗದ ಜನಪ್ರಿಯ ನಟಿ. ಸದ್ಯ ನಟಿ ಕಾಜಲ್‌ ಅಗರ್‌ವಾಲ್‌ ಅವರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್‌ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ಸಂದರ್ಶನದಲ್ಲಿ ಒಂದು ಘಟನೆಯನ್ನು ನೆನಪಿಸಿಕೊಂಡು ಆತಂಕ ವ್ಯಕ್ತಪಡಿಸಿದ್ದಾರೆ.

ತೆಲುಗಿನ ಮಗಧೀರ, ಡಾರ್ಲಿಂಗ್‌, ಬ್ಯಸಿನೆಸ್‌ ಮ್ಯಾನ್‌ ಸೇರಿದಂತೆ ಸಾಲು ಸಾಲು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿರುವ ನಟಿ ಕಾಜಲ್‌ ಅಗರ್ವಾಲ್‌ ತನ್ನ ನಟನೆಯ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾಳೆ. ಆದರೆ ಇತ್ತೀಚಿನ ಸಿನಿಮಾ ಶೂಟಿಂಗ್‌ ವೇಳೆಯಲ್ಲಿ ನಡೆದಿರುವ ಘಟನೆಯೊಂದನ್ನು ಕಾಜಲ್‌ ಮೆಲುಕು ಹಾಕಿದ್ದು, ನಟಿ ಕೊಟ್ಟಿರುವ ಹೇಳಿಕೆ ಸದ್ಯ ಬಾರೀ ಚರ್ಚೆಯನ್ನು ಹುಟ್ಟು ಹಾಕಿದೆ.

ನಟಿ ಕಾಜಲ್‌ ಕ್ಯಾರವಾನ್ ಒಳಗೆ ನಡೆದಿದ್ದೇನು ?

ಇತ್ತೀಚಿಗಷ್ಟೇ ಸಿನಿಮಾದ ಶೂಟಿಂಗ್‌ ವೇಳೆಯಲ್ಲಿ ನಡೆದಿರುವ ಘಟನೆಯನ್ನು ನಟಿ ಕಾಜಲ್‌ ಅಗರ್ವಾಲ್‌ ವಿವರಿಸಿದ್ದಾರೆ. ಸಿನಿಮಾದ ಸೆಟ್‌ನಲ್ಲಿ ಶೂಟಿಂಗ್‌ ಮುಗಿದ ಬಳಿಯ ನನ್ನ ಕ್ಯಾರವಾನ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ. ಈ ವೇಳೆಯಲ್ಲಿ ಸಿನಿಮಾದಲ್ಲಿ ಕೆಲಸ ಮಾಡ್ತಿದ್ದ ಸಹಾಯಕ ನಿರ್ದೇಶಕ ಏಕಾಏಕಿ ನನ್ನ ಕ್ಯಾರವಾನ್‌ ಒಳಗೆ ನುಗ್ಗಿದ್ದಾನೆ. ಮುನ್ಸೂಚನೆಯನ್ನೇ ನೀಡದೆ, ಅನುಮತಿಯನ್ನೂ ಪಡೆಯದೇ ನನ್ನ ಖಾಸಗಿ ಜಾಗವನ್ನು ಪ್ರವೇಶಿಸಿದ್ದು, ಅಲ್ಲದೇ ತಮ್ಮ ಶರ್ಟ್‌ ತೆಗೆದಿದ್ದಾನೆ.

ಸಹಾಯಕ ನಿರ್ದೇಶಕನ ಎದೆಯ ಮೇಲೆ ನನ್ನ ಹೆಸರಿನ ಟ್ಯಾಟೂವನ್ನು ತೋರಿಸಿದ್ದಾನೆ. ಆತನ ಎದೆಯ ಮೇಲೆ ನನ್ನ ಟ್ಯಾಟೂ ಇದ್ದರೂ ಕೂಡ ಕ್ಯಾರವಾನ್‌ನಲ್ಲಿ ಒಬ್ಬಂಟಿಯಾಗಿದ್ದ ನನಗೆ ಈ ಘಟನೆ ಬಾರೀ ಆಘಾತವನ್ನು ಉಂಟು ಮಾಡಿದ್ದು, ಕೈ ಕಾಲುಗಳು ನಡುಗಲು ಶುರುವಾಗಿತ್ತು ಎಂದು ಹೇಳಿಕೊಂಡಿದ್ದಾರೆ.

ಅಭಿಮಾನಕ್ಕೂ ಇರಬೇಕು ಗಡಿ ಎಂದ ನಟಿ

ಸಿನಿಮಾ ಶೂಟಿಂಗ್‌ನಲ್ಲಿ ನಡೆದಿದ್ದ ಅಹಿತಕರ ಘಟನೆಯ ಕುರಿತು ಕಟ್ಟುನಿಟ್ಟಿನ ಪ್ರತಿಕ್ರೀಯೆ ನೀಡಿದ್ದಾಗಿಯೂ ನಟಿ ಹೇಳಿಕೊಂಡಿದ್ದಾರೆ. ಅಭಿಮಾನಿಗಳು ನನ್ನ ಮೇಲಿಟ್ಟಿರುವ ಪ್ರೀತಿಗೆ ಗೌರವವಿದೆ. ಆದರೆ, ಒಬ್ಬ ಮಹಿಳೆ ತನ್ನ ಖಾಸಗಿ ಜಾಗದಲ್ಲಿ ಒಬ್ಬಂಟಿಯಾಗಿರುವಾಗ ಅನುಮತಿಯಿಲ್ಲದೆ ಪ್ರವೇಶಿಸುವುದು, ಈ ರೀತಿಯಾಗಿ ವರ್ತನೆ ಮಾಡುವುದು ಸರಿಯಲ್ಲ. ಇದು ಗಂಭೀರವಾಗಿರುವ ಪ್ರಕರಣವಾಗಿದ್ದು, ಕ್ರಿಮಿನಲ್‌ ನಡವಳಿಕೆಗೆ ಸಮಾನವಾಗಿದೆ ಎಂದು ಅವರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಸಿನಿಮಾ ಶೂಟಿಂಗ್‌ ವೇಳೆಯಲ್ಲಿ ನಟ- ನಟಿಯರ ಖಾಸಗಿತನಕ್ಕೆ ಹೆಚ್ಚಿನ ಭದ್ರತೆ ಒದಗಿಸುವ ಕುರಿತು ಚರ್ಚೆಗಳು ಶುರುವಾಗಿದೆ. ನಟಿ ಕಾಜಲ್‌ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ವೈರಲ್‌ ಆಗ್ತಾ ಇದ್ದು, ನಟಿಯ ಬೆಂಬಲಕ್ಕೆ ಅಪಾರ ಮಂದಿ ನಿಂತಿದ್ದಾರೆ.

Kajal Aggarwal Recalls incidents in Shooting Caravan

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »