Chetan Kumar : ನನ್ನ ಪ್ರಾಣಕ್ಕೆ ಆತಂಕವಿದೆ : ಗನ್ ಮ್ಯಾನ್ ಕೊಡಿ ಸರ್ಕಾರಕ್ಕೆ ನಟ ಚೇತಬ್ ಮನವಿ

ಬೆಂಗಳೂರು : ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿಯಾಗಿ ಬರೆದ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿ ಜೈಲು ಪಾಲಾಗಿದ್ದ ನಟ ಚೇತನ್ ಈಗ ಗನ್ ಮ್ಯಾನ್ ಸೌಲಭ್ಯಕ್ಕಾಗಿ ಸರಕಾರವನ್ನು ಅಂಗಲಾಚುತ್ತಿದ್ದಾರೆ. ಕಮೀಷನರ್ ಗೆ ಮನವಿ ಸಲ್ಲಿಸಿದ್ದ ಚೇತನ್ (Chetan Kumar) ಈಗ ಹೋಂ ಮಿನಿಸ್ಟರ್ ಮೊರೆ ಹೋಗಿದ್ದಾರೆ.

ಪತ್ರಕರ್ತೆ ಹಾಗೂ ಬರಹಗಾರ್ತಿ ಗೌರಿ ಲಂಕೇಶ್ ಹತ್ಯೆ ಬಳಿಕ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಗೆ ಸರ್ಕಾರ ಭದ್ರತೆ ಒದಗಿಸಿತ್ತು. ಅವರಿಗಿರೋ ಬೆದರಿಕೆಯ ಹಿನ್ನೆಲೆ ಯಲ್ಲಿ ಗನ್ ಮ್ಯಾನ್ ಸೌಲಭ್ಯ ಒದಗಿಸಲಾಗಿತ್ತು. ಆದರೆ ಕೆಲ ದಿನಗಳ ಹಿಂದೆ ನಟ ಚೇತನ್ ಹೈಕೋರ್ಟ್ ನ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಬರಹವನ್ನು ಪೋಸ್ಟ್ ಮಾಡೋ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದರು.

ನಟ ಚೇತನ್ ಮೇಲೆ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿದ್ದ ಶೇಷಾದ್ರಿಪುರಂ ಪೊಲೀಸರು ನಟ ಚೇತನ್ ರನ್ನು ಬಂಧಿಸಿ ನ್ಯಾಯಾಧೀಶರ ಮುಂದೇ ಹಾಜರುಪಡಿಸಿದ್ದರು. ಬಳಿಕ ನಟ ಚೇತನ್ ಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ನಟ ಚೇತನ್ ಜೈಲು ಸೇರುತ್ತಿದ್ದಂತೆ ಸರ್ಕಾರ ಅವರಿಗೆ ನೀಡಿದ್ದ ಗನ್ ಮ್ಯಾನ್ ಭದ್ರತೆಯನ್ನು ವಾಪಸ್ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಭಯಗೊಂಡಿರುವ ನಟ ಚೇತನ್ ಜೈಲಿನಿಂದ ಬಂದಾಗಿನಿಂದಲೂ ಗನ್ ಮ್ಯಾನ್ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ದುಂಬಾಲು ಬಿದ್ದಿದ್ದಾರೆ. ಇತ್ತೀಚಿಗೆ ನಗರ ಪೊಲೀಸ್ ಆಯುಕ್ತ ರನ್ನು ಭೇಟಿ ಮಾಡಿದ್ದ ಚೇತನ್ ನನಗೆ ಜೀವಬೆದರಿಕೆ ಇದೆ. ಗನ್ ಮ್ಯಾನ್ ಸೌಲಭ್ಯ ಮರಳಿ ಕೊಡಿ ಎಂದು ಮನವಿ ಮಾಡಿದ್ದರು. ಆದರೆ ಗನ್ ಮ್ಯಾನ್ ಸೌಲಭ್ಯ ನೀಡಿರಲಿಲ್ಲ. ಹೀಗಾಗಿ ಇಂದು ಮತ್ತೆ ಗೃಹ ಸಚಿವರನ್ನು ಭೇಟಿ‌ಮಾಡಿದ ಚೇತನ್ ಗನ್ ಮ್ಯಾನ್ ಸೌಲಭ್ಯ ಹಿಂತಿರುಗಿಸುವಂತೆ ಮನವಿ ಮಾಡಿದ್ದಾರೆ.

ಗೃಹಸಚಿವರ ಭೇಟಿ ಬಳಿಕ ಮಾತನಾಡಿದ ನಟ ಚೇತನ್, ಗೌರಿ ಲಂಕೇಶ್ ಹತ್ಯೆಯಾದ ಬಳಿಕ ನನಗೆ ನಾಲ್ಕು ವರ್ಷದಿಂದ ಗನ್ ಮ್ಯಾನ್ ಕೊಟ್ಟಿದ್ದರು. ಆದರೆ ಮೊನ್ನೆ ಜೈಲಿಗೆ ಹೋದ ಬಳಿಕ ವಾಪಸ್ ಪಡೆದುಕೊಂಡಿದ್ದಾರೆ. ಬೆದರಿಕೆ ಕರೆಗಳು ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಬರ್ತಾನೆ ಇದೆ.ಯಾರೋ ಕೋಮುವಾದ ಮಾತನಾಡುವ ಜನಪ್ರತಿನಿಧಿಗಳಿಗೆ ಗನ್ ಮ್ಯಾನ್ ಪ್ರೊಟೆಕ್ಷನ್ ಕೊಡ್ತಾರೆಆದರೆ ಸತ್ಯ ವಾಸ್ತವ ಹೇಳುವ ನಮಗೆ ಗನ್ ಮ್ಯಾನ್ ಪ್ರೊಟೆಕ್ಷನ್ ಇಲ್ಲ ಎಂದು ಚೇತನ್ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : X ಬಗ್ಗೆ ಬೇಡ Y ಬಗ್ಗೆ ಮಾತಾಡೋಣ : ನಟಿ ರಶ್ಮಿಕಾ ಮಂದಣ್ಣ ಹೊಸ ವರಸೆ

ಇದನ್ನೂ ಓದಿ : ದಿ ಕಾಶ್ಮೀರಿ ಫೈಲ್ಸ್‌ ಮೂರು ದಿನದಲ್ಲೇ ದಾಖಲೆಯ ಗಳಿಕೆ

( Kannada Actor Chetan Kumar Requests to police provide provide Gunman)

Comments are closed.