Kannada Bigg Boss Season 9 : ಕನ್ನಡ ಬಿಗ್‌ಬಾಸ್‌ ಸೀಸನ್‌ 9 ಗ್ಯ್ರಾಂಡ್‌ ಫಿನಾಲೆ : ಯಾರಾಗ್ತಾರೆ ವಿನ್ನರ್‌ ?

ಕನ್ನಡ ಕಿರುತೆರೆಯಲ್ಲೇ ಹೊಸ ಮೈಲುಗಲ್ಲು ಸೃಷ್ಟಿಸಿದ ಕೀರ್ತಿ ಬಿಗ್‌ಬಾಸ್‌ ರಿಯಾಲಿಟಿ ಶೋಗೆ ಸಲ್ಲುತ್ತದೆ. ಈ ವಾರದ ಆರಂಭದಿಂದ ಕನ್ನಡ ಬಿಗ್‌ಬಾಸ್ ಸೀಸನ್‌ 9ರ (Kannada Bigg Boss Season 9)‌ ಗ್ಯ್ರಾಂಡ್‌ ಫಿನಾಲೆ ತಯಾರಿ ಶುರುವಾಗಿದೆ. ಪ್ರತಿವರ್ಷ ಗ್ಯ್ರಾಂಡ್‌ ಫಿನಾಲೆ ಕಾರ್ಯಕ್ರಮ ಶನಿವಾರ ಮತ್ತು ಭಾನುವಾರ ಪ್ರಸಾರ ಆಗುತ್ತಿತ್ತು. ಆದರೆ ಈ ಬಾರಿ ಶುಕ್ರವಾರ ಮತ್ತು ಶನಿವಾರ ಗ್ಯ್ರಾಂಡ್‌ ಫಿನಾಲೆ ಕಳೆಕಟ್ಟಿದೆ. ಈಗಾಗಲೇ ದಿವ್ಯಾ ಉರುಡುಗ, ರಾಕೇಶ್‌ ಅಡಿಗ, ರೂಪೇಶ್‌ ಶೆಟ್ಟಿ, ದೀಪಿಕಾ ದಾಸ್‌ ಹಾಗೂ ರೂಪೇಶ್‌ ರಾಜಣ್ಣ ಫಿನಾಲೆ ಹಂತಕ್ಕೆ ತಲುಪಿದ್ದಾರೆ. ಅದರಲ್ಲಿ ನಿನ್ನೆ ಸಂಚಿಕೆಯಲ್ಲಿ ದಿವ್ಯಾ ಉರುಡುಗ ದೊಡ್ಮನೆ ಪಯಣ ಮುಗಿಸಿ ಹೊರ ನಡೆದಿದ್ದಾರೆ.

ಈ ಬಾರಿಯ ಬಿಗ್‌ಬಾಸ್‌ ವಿಶೇಷ ಅಂದರೆ ಹೊಸಬರ ಜೊತೆಗೆ ಕಳೆದ ಹಲವು ಸೀಸನ್‌ ಸ್ಪರ್ಧಿಗಳು ದೊಡ್ಮನೆಗೆ ಕಾಲಿಟ್ಟಿದ್ದರು. ಕಳೆದ ಸೀಸನ್‌ ಅಂದರೆ ಹಳೆಬರ ಪೈಕಿ ಈ ಬಾರಿ ಬಿಗ್‌ಬಾಸ್ ಮನೆಗೆ ಅಧಿಕೃತವಾಗಿ ಬಂದಿರುವ ಸ್ಪರ್ಧಿಗಳೆಂದರೆ ಅರುಣ್‌ ಸಾಗರ್‌, ದೀಪಿಕಾ ದಾಸ್‌,ದಿವ್ಯಾ ಉರುಡುಗ, ಪ್ರಶಾಂತ್‌ ಸಂಬರ್ಗಿ, ಸಾನ್ಯಾ ಅಯ್ಯರ್‌, ರೂಪೇಶ್‌ ಶೆಟ್ಟಿ, ಆರ್ಯವರ್ಧನ್‌, ರಾಕೇಶ್‌ ಅಡಿಗ, ಹಾಗೂ ಅನುಪಮಾ ಆನಂದ್‌ ಕುಮಾರ್‌ ಆಗಿದ್ದಾರೆ. ಇನ್ನೂ ಹೊಸಬರ ಪೈಕಿ ಮಯೂರಿ ಕ್ಯಾತರಿ,ನವಾಜ್‌, ದರ್ಶ್‌ ಚಂದ್ರಪ್ಪ,ಅಮೂಲ್ಯ ಗೌಡ,ವಿನೋದ್‌ ಗೊಬ್ಬರಗಾಲ, ನೇಹಾ ಗೌಡ, ರೂಪೇಶ್‌ ರಾಜಣ್ಣ,ಐಶ್ವರ್ಯ ಪಿಸೆ, ಕಾವ್ಯಶ್ರೀ ಗೌಡ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಒಟ್ಟು 18 ಸ್ಪರ್ಧಿಗಳು ಈ ಬಾರಿ ಸೀಸನ್‌ನಲ್ಲಿ ಭಾಗವಹಿಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ ೯ರಲ್ಲಿ ರೂಪೇಶ್‌ ಶೆಟ್ಟಿ, ದಿವ್ಯಾ ಉರುಡುಗ, ರಾಕೇಶ್‌ ಅಡಿಗ, ದೀಪಿಕಾ ದಾಸ್‌ ಹಾಗೂ ರೂಪೇಶ್‌ ರಾಜಣ್ಣ ಈ ಬಾರಿ ಫೈನಲಿಸ್ಟ್‌ ಹಂತಕ್ಕೆ ತಲುಪಿದ್ದು, ಆದರೆ ಗ್ಯ್ರಾಂಡ್‌ ಫಿನಾಲೆಯ ಆರಂಭದಲ್ಲೇ ದಿವ್ಯಾ ಉರುಡುಗ ಎಲಿಮಿನೇಟ್‌ ಆಗಿದ್ದಾರೆ. ಕಳೆದ ಬಾರಿ ಹೋಗಿದ್ದ ದಿವ್ಯಾ ಉರುಡುಗ ಅವರಿಗೆ ಈ ಬಾರಿ ಕೂಡ ಅವಕಾಶ ಸಿಕ್ಕಿತ್ತು. ಅದನ್ನು ಆಕೆ ಚೆನ್ನಾಗಿಯೇ ಬಳಸಿಕೊಂಡು ವೀಕ್ಷಕರ ಗಮನ ಸೆಳೆದರು. ಉತ್ತಮವಾಗಿ ಆಟ ಆಡಿ ಪೀನಲ್‌ವರೆಗೂ ಬಂದಿದ್ದರು. ಆದರೆ ಕಡಿಮೆ ವೋಟ್‌ ಸಿಕ್ಕಿದ ಕಾರಣ ದಿವ್ಯಾ ಫಿನಾಲೆಯಿಂದ ಹೊರ ಬಂದ ಮೊದಲ ಸ್ಪರ್ಧಿ ಆಗಿದ್ದಾರೆ.

ಇದನ್ನೂ ಓದಿ : Yash upcoming Film: ಜ.8ರಂದು ಸಿಹಿಸುದ್ದಿ ಕೊಡ್ತಾರಂತೆ ನಟ ಯಶ್; ಅಭಿಮಾನಿಗಳಿಗೆ ಸಿಗಲಿದ್ಯಾ ಮುಂದಿನ ಸಿನಿಮಾದ ಸುಳಿವು..?

ಇದನ್ನೂ ಓದಿ : Shah Rukh Khan Pathaan Movie : ಶಾರುಖ್‌ ಕೈಯಲ್ಲಿ ಬಾಲಿವುಡ್‌ ಭವಿಷ್ಯ : ಪಠಾಣ್‌ಗೆ ಜರ್ಮನಿಯಲ್ಲಿ ಸಖತ್‌ ರೆಸ್ಪಾನ್ಸ್

ಇದನ್ನೂ ಓದಿ : Sandalwood New Heroines : 2022ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಗೆಲುವು ಸಾಧಿಸಿದ ಹೊಸ ನಟಿ ಮಣಿಯರು

ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್‌ ಎರಡು ಬಾರಿ ದೊಡ್ಮನೆ ಪ್ರವೇಶಿಸಿ ದಾಖಲೆ ಬರೆದರೆ, ರಾಕೇಶ್‌ ಅಡಿಗ ಹಾಗೂ ರೂಪೇಶ್‌ ಶೆಟ್ಟಿ ಓಟಿಟಿಯಿಂದ ದೊಡ್ಮನೆ ಕಾಲಿಟ್ಟು 140 ದಿನಗಳು ಬಿಗ್‌ ಬಾಸ್‌ ಮನೆಯಲ್ಲಿ ಕಾಲ ಕಳೆದು ಎಲ್ಲರ ಗಮನ ಸೆಳೆದಿದ್ದಾರೆ. ಹೌದು ಓಟಿಟಿ ಸೀಸನ್‌ನಲ್ಲಿ ರೂಪೇಶ್‌ ಶೆಟ್ಟಿ ದೊಡ್ಮನೆಗೆ ಹೋಗುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ನೇರವಾಗಿ ಬಿಗ್‌ಬಾಸ್‌ ಸೀಸನ್‌ 9ಕ್ಕೆ ಎಂಟ್ರಿ ಕೊಟ್ಟರು. ನೂರು ದಿನಗಳ ಕಾಲ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಹಾಗಾಗಿ ಒಟ್ಟು 140 ದಿನ ದೊಡ್ಮನೆಯಲ್ಲಿ ಕಳೆದಂತಾಗಿದೆ. ಇನ್ನೂ ಬಿಗ್‌ಬಾಸ್‌ ಮನೆಯಲ್ಲಿ ಸದ್ಯ ಉಳಿದವರಲ್ಲಿ ಈ ವರ್ಷದ ಬಿಗ್‌ಬಾಸ್‌ ಸೀಸನ್‌ 9ರ ವಿನ್ನರ್‌ ಆಗುತ್ತಾರೆ ಎನ್ನುವ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇದೆ. ಆದರೆ ಕರಾವಳಿ ಹುಡುಗ ರೂಪೇಶ್‌ ಶೆಟ್ಟಿಯ ಹೆಸರು ಎಲ್ಲೆಡೆ ಕೇಳಿ ಬರುತ್ತಿರುವುದರಿಂದ, ಇವರು ವಿನ್ನರ್‌ ಆಗುವ ಎಲ್ಲಾ ಸಾಧ್ಯತೆಗಳು ಇವೆ.

Kannada Bigg Boss Season 9 Grand Finale: Who is the Winner?

Comments are closed.