ಅಣ್ಣ ಚಿರುವಿನ ಹಾಗೆ ನಗುತ್ತಿರು : ಕಷ್ಟದಲ್ಲಿ ನನ್ನ ಜೊತೆ ನಿಂತಂತೆ ನಾನೆಂದು ನಿನ್ನ ಪಕ್ಕದಲ್ಲೇ ನಿಲ್ಲುವೆ : ಮೇಘನಾ

0

ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹುಟ್ಟುಹಬ್ಬ. ಈ ಬಾರಿ ಧ್ರುವ ಅಣ್ಣನಿಲ್ಲದೆ 32ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಧ್ರುವ ಹುಟ್ಟುಹಬ್ಬಕ್ಕೆ ಅತ್ತಿಗೆ ಮೇಘನಾ ರಾಜ್ ಸರ್ಜಾ ವಿಭಿನ್ನವಾಗಿ ವಿಶ್ ಮಾಡಿದ್ದಾರೆ.

ಕಳೆದ ಮೂರು ದಿನಗಳ ಹಿಂದೆಯಷ್ಟೇ ಅತ್ತಿಗೆ ಮೇಘನಾ ರಾಜ್ ಸೀಮಂತ ಶಾಸ್ತ್ರವನ್ನು ಧ್ರುವ ಸರ್ಜಾ ನೆರವೇರಿಸಿದ್ದಾರೆ. ಆದರೆ ಅತ್ತಿಗೆ ಮೇಘನಾಗೆ ಅಣ್ಣನ ನೆನಪು ಕಾಡದಿರಲಿ ಅನ್ನೋ ಕಾರಣಕ್ಕೆ ಅಣ್ಣ ಚಿರುವಿನ ದೊಡ್ಡ ಪೋಟೋವನ್ನು ಮೇಘನಾ ರಾಜ್ ಅವರ ಪಕ್ಕದಲ್ಲಿಯೇ ಇಟ್ಟು ಸೀಮಂತ ಶಾಸ್ತ್ರ ನೆರವೇರಿಸಿದ್ದರು.

ಮೇಘನಾ ರಾಜ್ ಸರ್ಜಾ ಅವರು ಧ್ರುವ ಸರ್ಜಾ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ನನ್ನ ಕಷ್ಟದ ಸಮಯದಲ್ಲಿ ನೀನು ಹೇಗೆ ನನ್ನ ಜೊತೆಯಲ್ಲಿ ಗಟ್ಟಿಯಾಗಿ ನಿಂತಿದ್ದೆ ಹಾಗೆಯೇ ನಾನು ಕೂಡ ಶಾಶ್ವತವಾಗಿ ನಿನ್ನ ಪಕ್ಕ ನಿಲ್ಲುತ್ತೇನೆ.

ತಪ್ಪದೇ ಓದಿ : ಮೇಘನಾಗೆ ಚಿರು ಸ್ನೇಹಿತರು ಕೊಟ್ರು ಮರೆಯಲಾದ ಗಿಫ್ಟ್ !

ಪ್ರಾಮಿಸ್ ಬರ್ತ್‍ಡೇ ಬಾಯ್. ಸದಾ ನೀನು ಖುಷಿಯಾಗಿರು ಎಂದು ಆಶೀಸುತ್ತೇನೆ. ನಮ್ಮ ಚಿರು ನಕ್ಕಂತೆ ನೀನು ನಗುತ್ತಿರು. ಹ್ಯಾಪಿಸ್ಟ್ ಬರ್ತ್‍ಡೇ ಬಿಲ್ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿರುವ ಧ್ರುವ ಸರ್ಜಾ ತನ್ನ ಅಣ್ಣ ಚಿರುವನ್ನು ಬಹುವಾಗಿ ಪ್ರೀತಿಸುತ್ತಿದ್ದರು. ಮಾತ್ರವಲ್ಲ ಅಪಾರವಾದ ಗೌರವವನ್ನು ಹೊಂದಿದ್ದಾರೆ. ಅರೆಕ್ಷಣವೂ ಅಣ್ಣನನ್ನು ಬಿಟ್ಟಿರದ ಧ್ರುವ ಸರ್ಜಾಗೆ ಇದೀಗ ಅಣ್ಣಾ ಇಲ್ಲಾ ಅನ್ನೋ ನೋವನ್ನು ಅರಗಿಸಿಕೊಳ್ಳುವುದುಕ್ಕೆ ಸಾಧ್ಯವಾಗುತ್ತಿಲ್ಲ.

ಮೊನ್ನೆ ಅತ್ತಿಗೆಯ ಸೀಮಂತ ಕಾರ್ಯದಲ್ಲಿಯೂ ಅಣ್ಣ ಪೋಟೋವನ್ನು ಕಂಡು ಕಣ್ಣೀರು ಸುರಿಸುತ್ತಿರೋದು ನೋಡುಗರ ಕರಳು ಕಿತ್ತುಬರು ವಂತಿತ್ತು. ಬಹುವಾಗಿ ಪ್ರೀತಿಸುತ್ತಿರುವ ಅಣ್ಣ ಜೊತೆಯಿಲ್ಲಾ ಅನ್ನೊ ಕಾರಣಕ್ಕೆ ಧ್ರುವ ಸರ್ಜಾ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಕೊಂಡಿಲ್ಲ.

ಇದೀಗ ಅತ್ತಿಗೆ ಮೇಘನಾ ರಾಜ್ ಸರ್ಜಾ ಅವರು ಧ್ರುವ ಹುಟ್ಟು ಹಬ್ಬಕ್ಕೆ ಮಾಡಿರುವ ಟ್ವೀಟ್ ಮನಮುಟ್ಟುವಂತಿದೆ. ಪ್ರೀತಿಯ ಅಣ್ಣನಿಲ್ಲಾ ಅನ್ನೋ ಕೊರಗು ಅತ್ತಿಗೆಯನ್ನು ಕಾಡಬಾರದು ಅನ್ನೋ ಕಾರಣಕ್ಕೆ ಧ್ರುವ ಅತ್ತಿಗೆಯನ್ನು ಆರೈಕೆ ಮಾಡುತ್ತಿದ್ದಾರೆ.

ತಪ್ಪದೇ ಓದಿ : ಮೇಘನಾ ಸರ್ಜಾ ನೋವಿಗೆ ಪೋಟೋ ಎಡಿಟ್ ಮೂಲಕ ಸಾಂತ್ವನ ಹೇಳಿದ ಕಲಾವಿದ

https://youtu.be/srCI_nWVDu4
https://www.instagram.com/p/CGAJEahHR59/
Leave A Reply

Your email address will not be published.