Yoga For Anti-aging : ವಯಸ್ಸಿನ ಕಳೆ ಮರೆಮಾಚಲು ಈ ಐದು ಯೋಗಾಸನಗಳನ್ನು ತಪ್ಪದೇ ಮಾಡಿ.

ಆರೋಗ್ಯಕರ ಜೀವನ ಶೈಲಿಗೆ ಯೋಗ (Yoga) ಅತ್ಯಂತ ಪ್ರಮುಖವಾದದ್ದು. ಪುರಾತನ ಕಾಲದಿಂದಲೂ ದೈಹಿಕ ಆರೋಗ್ಯ ಕಾಪಾಡಲು ಯೋಗಾಭ್ಯಾಸ ಅತಿ ಮುಖ್ಯ ಎಂದು ಹೇಳಲಾಗಿದೆ. ನಮ್ಮ ಚರ್ಮದ ವಿನ್ಯಾಸಕ್ಕೆ ಮತ್ತು ಸುಕ್ಕುಗಳನ್ನು ನಿವಾರಿಸಲು ಯೋಗ ಬಹಳ ಪ್ರಯೋಜನಕಾರಿ (Yoga For Anti-aging). ಇದು ಅವಧಿ ಪೂರ್ವ ವಯಸ್ಸಿನ ಕಳೆಯನ್ನು ಹೋಗಲಾಡಿಸುತ್ತದೆ. ಅದಕ್ಕಾಗಿ ಹಲವಾರು ಯೋಗ ಆಸನಗಳಿವೆ. ಈ ಅಭ್ಯಾಸದಿಂದ ವಯಸ್ಸಾಗುವ ಪ್ರಕ್ರಿಯೆ ನಿಧಾನವಾಗುತ್ತದೆ. ಹೇಗೆಂದರೆ ರಕ್ತ ಪರಿಚಲನೆ, ಶಕ್ತಿ ಮತ್ತು ಚರ್ಮದ ಹೊಳಪನ್ನು ಸುಧಾರಿಸುವ ಮೂಲಕ ಸದೃಢವಾಗಿ ಕಾಣುವಂತೆ ಮಾಡುತ್ತದೆ.

ನಿಮ್ಮ ಚರ್ಮದ ಆರೋಗ್ಯವನ್ನು ಹೆಚ್ಚಿಸುವ ಐದು ಅತ್ಯುತ್ತಮ ಯೋಗ ಆಸನಗಳು (Yoga For Anti-aging) ಇಲ್ಲಿವೆ. ಇವುಗಳನ್ನು ತಪ್ಪದೇ ಮಾಡಿ ಅವಧಿಪೂರ್ವ ವಯಸ್ಸಿನ ಕಳೆಯನ್ನು ಹೋಗಲಾಡಿಸಿಕೊಳ್ಳಿ.

ವೀರಭದ್ರಾಸನ :
ವೀರಭದ್ರಾಸನವು ನಿಮ್ಮ ಯೌವನವನ್ನು ಕಾಪಾಡಿಕೊಳ್ಳಲು ಉತ್ತಮವಾಗಿದೆ. ಇದು ದೇಹವನ್ನು ಶಕ್ತಿಯುತಗೊಳಿಸಲು ಮತ್ತು ಸ್ನಾಯುಗಳನ್ನು ಬಲಪಡಿಸಲು ಉತ್ತಮ ವ್ಯಾಯಾಮವಾಗಿದೆ. ಈ ಸ್ಟ್ರೆಚಿಂಗ್ ಭಂಗಿಯು ಸಮತೋಲನವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ವೃಕ್ಷಾಸನ :
ವೃಕ್ಷಾಸನವು ದೇಹದ ಸಮತೋಲನವನ್ನು ಸುಧಾರಿಸುತ್ತದೆ. ಪಾದಗಳು, ಎಬಿಎಸ್ ಮತ್ತು ಗ್ಲುಟ್ಸ್‌ಗಳನ್ನು ಬಲಪಡಿಸುತ್ತದೆ. ಇದು ಏಕಾಗ್ರತೆ ಸಾಧಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ ಇದು ಆತ್ಮಸ್ಥೈರ್ಯವನ್ನೂ ನಿಮ್ಮಲ್ಲಿ ತುಂಬುತ್ತದೆ.

ಸಿಂಹಾಸನ :
ಸಿಂಹಾಸನವು ಮುಖದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಿ, ಸುಕ್ಕುಗಳನ್ನು ನಿವಾರಿಸಲು ಮತ್ತು ಆಪ್ಟಿಕಲ್ ನರಗಳನ್ನು ಉತ್ತೇಜಿಸುತ್ತದೆ ಬಹಳ ಪ್ರಯೋಜನಕರಿಯಾದ ಆಸನವಾಗಿದೆ. “ಹಾ” ಶಬ್ದ ಮಾಡುವಾಗ ನಿಮ್ಮ ಉಸಿರಾಟವನ್ನೂ ಸುಧಾರಿಸುತ್ತದೆ.

ಧನುರಾಸನ :
ಧನುರಾಸನವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹದಿಂದ ಹಾನಿಕಾರಕ ವಿಷವನ್ನು ತೆಗೆದುಹಾಕುತ್ತದೆ. ಇದು ಬೆನ್ನುನೋವಿನ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.

ಭಾರದ್ವಾಜಾಸನ :
ಈ ಆಸನವು ಫ್ಲೆಕ್ಸಿಬಿಲಿಟಿಯನ್ನು ಹೆಚ್ಚಿಸುತ್ತದೆ. ನಿಮ್ಮ ಎಬಿಎಸ್ ಅನ್ನು ಟೋನ್ ಮಾಡುತ್ತದೆ ಮತ್ತು ಡಬಲ್ ಚಿನ್ ಅನ್ನು ಕಡಿಮೆ ಮಾಡುತ್ತದೆ. ಇದು ಕುತ್ತಿಗೆ, ಭುಜಗಳು ಮತ್ತು ಕೆಳ ಬೆನ್ನಿನಲ್ಲಿ ನೋವು ಮತ್ತು ಬಿಗಿತವನ್ನು ನಿವಾರಿಸುತ್ತದೆ.

ಇದನ್ನೂ ಓದಿ : OnePlus 10T 5G : ಭಾರತಕ್ಕೆ ಕಾಲಿಟ್ಟ OnePlus 10T 5G ಸ್ಮಾರ್ಟ್‌ಫೋನ್‌ ! ಆಗಸ್ಟ್‌6 ರಿಂದ ಮಾರಾಟ ಪ್ರಾರಂಭ

ಇದನ್ನೂ ಓದಿ : A Trip to the Village : ನಗರಗಳಿಗೆ ಭೇಟಿ ನೀಡಿ ಬೇಜಾರಾಗಿದೆಯೇ ? ಹಾಗಾದರೆ, ಮುಂದಿನ ಸಲ ಈ ಹಳ್ಳಿಗಳಿಗೆ ಟ್ರಿಪ್‌ ಹೋಗಿ…

(Yoga For Anti-aging 5 yoga asanas for healthy and firm skin)

Comments are closed.