ಮತ್ತೆ ಶುರುವಾಯ್ತು ಧ್ರುವಾ ಪೊಗರು ಹವಾ : ದುಬಾರಿ ವೆಚ್ಚದ ಸೆಟ್​ನಲ್ಲಿ ಇಂಟ್ರೋ ಸಾಂಗ್

0

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಿಧನದಿಂದಾಗಿ ಧ್ರುವ ಸರ್ಜಾ ಆಘಾತಕ್ಕೆ ಒಳಗಾಗಿದ್ರು. ಕಳೆದಾರು ತಿಂಗಳಿನಿಂದಲೂ ಧ್ರುವ ಸಿನಿಮಾಗಳಿಂದ ದೂರ ಉಳಿದಿದ್ರು. ಆದ್ರೀಗ ನಟ ಧ್ರುವ ಸರ್ಜಾ ಮತ್ತೆ ಸೆಟ್​ಗೆ ಮರಳುತ್ತಿದ್ದಾರೆ.

‘ಪೊಗರು’ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ‘ಪೊಗರು’ತಂಡ, ಈಗ ಇಂಟ್ರೊಡಕ್ಷನ್ ಹಾಡಿನ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದೆ.

ಪೊಗರು ಚಿತ್ರದ ಖರಾಬು ಹಾಡು ಕನ್ನಡದ ಜತೆಗೆ ತೆಲುಗಿನಲ್ಲೂ ಮೋಡಿ ಮಾಡಿದೆ. ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಹಾಡು ಈಗಾಗಲೇ ಮಿಲಿಯನ್​ಗಟ್ಟಲೆ ಜನರಿಂದ ವೀಕ್ಷಣೆ ಪಡೆದಿದೆ. ರಶ್ಮಿಕಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಧನಂಜಯ್, ಮಯೂರಿ, ರವಿಶಂಕರ್, ಚಿಕ್ಕಣ್ಣ ಸೇರಿ ಹಲವು ಸ್ಟಾರ್ ಕಲಾವಿದರ ದಂಡೇ ಇದೆ. ಬಿ.ಕೆ ಗಂಗಾಧರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಪೊಗರು. ಸಿನಿಮಾದ ಬಹುತೇಕ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಹಾಡುಗಳ ಚಿತ್ರೀಕರಣ ಬಾಕಿ ಉಳಿದಿದೆ. ಇದೀಗ ಚಿತ್ರದ ಇಂಟ್ರೋ ಸಾಂಗ್ ಶೂಟಿಂಗ್ ಗಾಗಿ ಚಿತ್ರತಂಡ ಸಿದ್ದತೆ ಮಾಡಿಕೊಂಡಿದೆ.

ಎಚ್​ಎಂಟಿ ಫ್ಯಾಕ್ಟರಿಯಲ್ಲಿ ಅದ್ಧೂರಿ ವೆಚ್ಚದ ಸೆಟ್ ನಿರ್ಮಾಣ ಕೆಲಸ ಈಗಾಗಲೇ ಶುರುವಾಗಿದೆ. ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಭರ್ಜರಿ ಸೆಟ್ ಹಾಕಿರುವ ಚಿತ್ರ ತಂಡ ‘ಪೊಗರು ಅಣ್ಣನಿಗೆ ಪೊಗರು’ ಎಂಬ ಸಾಹಿತ್ಯವಿರುವ ಹಾಡಿಗೆ ಸ್ಟೆಪ್ ಹಾಕೋದಕ್ಕೆ ಧ್ರುವಾ ಸರ್ಜಾ ಸಜ್ಜಾಗಿದ್ದಾರೆ. ಮುರಳಿ ಮಾಸ್ಟರ್ ಸ್ಟೆಪ್ ಹೇಳಿಕೊಡಲಿದ್ದು, ಸೆ. 25ರಿಂದ ಐದು ದಿನಗಳಲ್ಲಿ ಹಾಡಿನ ಚಿತ್ರೀಕರಣ ಮುಗಿಸಲಿದೆ ಚಿತ್ರತಂಡ.

ಇಂಟ್ರೋ ಹಾಡಿನ ಜೊತೆಗೆ ಸಿನಿಮಾದ ಉಳಿದ ದೃಶ್ಯಗಳ ಚಿತ್ರೀಕರಣ ಮುಗಿದ್ರೆ ಪೊಗರು ಚಿತ್ರದ ಶೂಟಿಂಗ್ ಸಂಪೂರ್ಣವಾಗಿ ಮುಗಿದಂತೆ. ಐದು ದಿನಗಳ ಕಾಲ ಚಿತ್ರದ ಸಾಂಗ್ ಶೂಟಿಂಗ್ ನಡೆಯಲಿದ್ರೆ, ಮುಂದಿನ ಮೂರು ದಿನಗಳ ಕಾಲ ಸಿನಿಮಾದ ಕೆಲವು ದೃಶ್ಯಗಳ ಚಿತ್ರೀಕರಣ ನಡೆಸಲು ಸಿದ್ದತೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ನಿರ್ದೇಶಕ ನಂದಕಿಶೋರ್.

ಅಣ್ಣನ ಅಗಲಿಕೆಯ ನೋವಿನಲ್ಲಿರುವ ಧ್ರುವ ಸರ್ಜಾ ಇದೀಗ ಪೊಗರು ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಖತ್ ಖುಷಿಯನ್ನು ಕೊಟ್ಟಿದೆ.

Leave A Reply

Your email address will not be published.