ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಭಾರೀ ಇಳಿಕೆಯಾಯ್ತು ಚಿನ್ನ, ಬೆಳ್ಳಿ

0

ಬೆಂಗಳೂರು : ಪದೇ ಪದೇ ಏರುತ್ತಲೇ ಸಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಇಳಿಕೆಯನ್ನು ಕಾಣುತ್ತಿದೆ. ಅದ್ರಲ್ಲೂ 10 ಗ್ರಾಂ ಚಿನ್ನಕ್ಕೆ ಒಂದೇ ದಿನ ಬರೋಬ್ಬರಿ 550 ರೂಪಾಯಿ ಇಳಿಕೆ ಕಂಡಿರುವುದು ಆಭರಣ ಪ್ರಿಯರಿಗೆ ಸಖತ್ ಖುಷಿಕೊಟ್ಟಿದೆ.

ಬುಧವಾರ ಆಭರಣ ಚಿನ್ನ 10 ಗ್ರಾಂಗೆ 550 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಬೆಲೆ 47,500 ರೂಪಾಯಿ ಆಗಿದೆ. ಇನ್ನು 24 ಕ್ಯಾರೆಟ್​ನ ಚಿನ್ನದ ದರ 610 ರೂಪಾಯಿ ಇಳಿಕೆ ಕಾಣುವ ಮೂಲಕ 51,810 ರೂಪಾಯಿ ಆಗಿದೆ.

ಇತ್ತೀಚೆಗೆ ಚಿನ್ನದ ದರದಲ್ಲಿ ಇಳಿಕೆ ಕಂಡಿತ್ತು. ನಂತರ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಾಣಲು ಆರಂಭವಾಗಿತ್ತು. ಈಗ ಚಿನ್ನದ ದರ ಮತ್ತೆ ಕುಸಿತ ಕಾಣುತ್ತಿರುವುದು ಗ್ರಾಹಕರಿಗೆ ಸಂತಸ ಮೂಡಿಸಿದೆ.

ಕೆಲ ದಿನಗಳ ಕಾಲ ಬೆಳ್ಳಿ ದರ ಇಳಿಕೆ ಕಂಡಿತ್ತು. ನಂತರ ಮತ್ತೆ ಬೆಳ್ಳಿ ದರದಲ್ಲಿ ಏರಿಕೆ ಕಂಡಿತ್ತು. ಈ ಮೂಲಕ ಕೆಜಿ ಬೆಳ್ಳಿಗೆ 70 ಸಾವಿರದ ಗಡಿ ದಾಟಿತ್ತು. ಬುಧವಾರ ದಾಖಲೆಯ ಮೊತ್ತದಲ್ಲಿ ಬೆಳ್ಳಿ ಬೆಲೆ ಇಳಿಕೆ ಕಂಡಿದೆ. ಬೆಳ್ಳಿ ದರ ಒಂದು ಕೆಜಿಗೆ 1600 ರೂಪಾಯಿ ಇಳಿಕೆ ಕಂಡಿದ್ದು, 59,000 ರೂಪಾಯಿ ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ.

ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.

ವಿಶ್ವದ ಆರ್ಥಿಕತೆ ತಲೆಕೆಳೆಗಾಗಿದೆ. ಹೀಗಾಗಿ ಯಾವ ಮಾರುಕಟ್ಟೆಯ ಮೇಲೂ ಖಚಿತವಾಗಿ ಏನನ್ನೂ ಹೇಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

Leave A Reply

Your email address will not be published.