Priyanka Chopra: ನಟಿ ಪ್ರಿಯಾಂಕ ಚೋಪ್ರಾ ಮಗು ಹೆಸರು ಮಾಲತಿ

ನಟಿ ಪ್ರಿಯಾಂಕ ಚೋಪ್ರಾ, ನಿಕ್ ಜೋನಾಸ್ ದಂಪತಿಗೆ ಹೆಣ್ಣು ಮಗು ಜನಿಸಿರುವುದು ಹಳೇ ಸುದ್ದಿ (Priyanka Chopra). ಸರೋಗಸಿ ಮೂಲಕ ಜನವರಿಯಲ್ಲಿ ಮಗುವನ್ನು ಪಡೆದಿದ್ದರು. ಆದರೆ, ಮಗುವಿನ ಹೆಸರು ಮಾತ್ರ ಈವರೆಗೆ ಬಹಿರಂಗ ಪಡಿಸಿರಲಿಲ್ಲ. ನಟಿ ಪ್ರಿಯಾಂಕ ಅಪ್ಪಟ ಹಿಂದೂ, ನಿಕ್ ಜೋನಾಸ್ ಕ್ರಿಶ್ಚಿಯನ್ ಆಗಿರುವುದರಿಂದ ಮಗುವಿಗೆ ಎಂಥ ಹೆಸರಿಡುತ್ತಾರೆ ಅನ್ನೋದು ಕುತೂಹಲಕಾರಿಯಾದ ವಿಷಯವಾಗಿತ್ತು. ಈ ತನಕ ಮಗುವಿನ ಹೆಸರನ್ನು ಈ ತಾರಾ ದಂಪತಿ ಬಹಿರಂಗ ಪಡಿಸಿರಲಿಲ್ಲ.

ಮೊನ್ನೆ ಹಾಲಿವುಡ್ ನ ಮಾಧ್ಯಮವೊಂದಕ್ಕೆ ಮಗಳ ಹೆಸರನ್ನು ಪ್ರಿಯಾಂಕ ಛೋಪ್ರಾ ಹೇಳಿದ್ದಾರಂತೆ. ಅದರ ಪ್ರಕಾರ, ಪ್ರಿಯಾಂಕ ಮಗಳ ಹೆಸರು ಮಾಲತಿ ಮೇರಿ ಚೋಪ್ರಾ ಜೋನಾಸ್ ಅಂತ. ವಿಶೇಷ ಎಂದರೆ, ಮಾಲತಿ ಎನ್ನುವುದು ಸಂಸ್ಕೃತ ಹೆಸರಾಗಿದ್ದು, ಮೇರಿ ಗಂಡನ ಆಸೆಯಂತೆ ಇಟ್ಟಿರುವ ಪದವಾಗಿದೆ ಚೋಪ್ರಾ ಮತ್ತು ಜೋನಾಸ್ ದಂಪತಿ ತಮ್ಮ ಹೆಸರಿನ ಕಡೆ ನಿಕ್ ನೇಮನ್ನೇ ಮಗುವಿನ ಹೆಸರಲ್ಲಿ ಸೇರಿಸಿದ್ದಾರೆ. ಅಲ್ಲಿಗೆ ಪ್ರಿಯಾಂಕ ತನ್ನ ಹಾಗೂ ಗಂಡನ ಆಸೆಯನ್ನು ಈ ಮೂಲಕ ಈಡೇರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Pan India: ದುನಿಯಾ ಸೂರಿ : ಚರಿತ್ರೆ ತಿಳಿದಿಲ್ಲ ಅಂದರೆ ಪಾನ್ ಇಂಡಿಯಾ ಅನ್ನೋ ಪದ ಹುಟ್ಟುತ್ತದೆ!

ವಿಶೇಷವಾಗಿ, ಮಾಲತಿ ಎನ್ನುವುದು ಪದ ಸಂಸ್ಕೃತದ್ದಾಗಿದೆ. ಇದಕ್ಕೆ ಬೆಳದಿಂಗಳ ಎನ್ನುವ ಅರ್ಥವಿದೆ. ಮೇರಿ ಪದಕ್ಕೆ ಸಮುದ್ರದ ತಾರೆ ಎನ್ನುವ ಅರ್ಥ ಫ್ರೆಂಚ್ ಭಾಷೆಯಲ್ಲಿದೆ ಎಂದು ಮಾಧ್ಯಮವೊಂದು ವಿವರಣೆ ನೀಡಿದೆ. ಪ್ರಿಯಾಂಕ ಚೋಪ್ರಾ ತನ್ನ ಮಗಳ ಬಗ್ಗೆ ಎಲ್ಲೂ ಏನೂ ಮಾತನಾಡದೇ ಇದ್ದವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಆಕೆಯ ಹೇಳಿಕೆ ಹೇಗಿತ್ತು ಎಂದರೆ ಥೇಟ್ ವಿದೇಶ ಸಂಸ್ಕೃತಿಯನ್ನು ಬಿಂಬಿಸುವಂತಿತ್ತು. ಹೇಳಿಕೆ ಏನೆಂದರೆ, ನನ್ನ ಮಗಳನ್ನು ನಾನು ನಿಯಂತ್ರಿಸುವುದಿಲ್ಲ. ನನ್ನ ಕನಸುಗಳನ್ನು ಆಕೆಯ ಮೇಲೆ ಹೇರುವುದಿಲ್ಲ. ಮಗಳು ಸ್ವೇಚ್ಚೆಯಾಗಿ ಬದುಕಬೇಕೆಂಬುದು ನನ್ನ ಆಸೆ ಎಂದಿದ್ದರು.

ಪ್ರಿಯಾಂಕ ಚೋಪ್ರಾ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರಿಂದ, ನಿಕ್ ಜೊತೆ ಹೆಚ್ಚು ಕಾಲಕಳೆಯಲು ಆಗುತ್ತಿರಲಿಲ್ಲ. ಹೀಗಾಗಿ, ಇಬ್ಬರೂ ತೀರ್ಮಾನಿಸಿ ಸರೋಗಸಿ ಮೂಲಕ ಮಗುವನ್ನು ಪಡೆದಿದ್ದರು. ಅಂದರೆ ಪ್ರೀ ಮೆಚ್ಯೂರ್ ಬೇಬಿಯಾಗಿದ್ದರಿಂದ ಒಂದಷ್ಟು ತಿಂಗಳ ಕಾಲ ಕ್ಯಾಲಿಫೋರ್ನಿಯ ಆಸ್ಪತ್ರೆಯ ವೈದ್ಯರ ನಿಗಾವಣೆಯಲ್ಲಿತ್ತು.

ಇದನ್ನೂ ಓದಿ : Nani : ತೆಲುಗು ನಟ ನಾನಿ: ಕನ್ನಡಿಗರ ಮನಸ್ಸಿಗೆ ನೋವು ಮಾಡುವ ಉದ್ದೇಶ ನನಗಿಲ್ಲ: ಅವರ ತೆಲುಗು ಭಾಷಾಭಿಮಾನವನ್ನು ಹೊಗಳುವುದೇ ಆಗಿತ್ತು

(Priyanka Chopra Actress revealed her child s name as Malti)

Comments are closed.