Puneeth Raj Kumar Dream : ಪುನೀತ್ ಕನಸು, ಗಾಜನೂರಿನಲ್ಲಿ ನಿರ್ಮಾಣವಾಗಲಿದೆ ಡಾ.ರಾಜ್ ಮ್ಯೂಸಿಯಂ

ಪುನೀತ್ ರಾಜ್‌ಕುಮಾರ್ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಮಾತ್ರವಲ್ಲ, ಡಾ.ರಾಜ್ ಕುಟುಂಬದ ಮುದ್ದಿನ ಕಂದ. ಡಾ.ರಾಜ್ ಕುಟುಂಬದ ಎಲ್ಲರ ಕಣ್ಮಣಿಯಾಗಿದ್ದ ಪುನೀತ್ ರಾಜ್ ಕುಮಾರ್ ಹುಟ್ಟೂರು ನೆಂಟರು, ಸಂಬಂಧಿಗಳ ಮೇಲೂ ವಿಶೇಷ ಕಾಳಜಿ ಇತ್ತು. ಹೀಗಾಗಿ ತಮ್ಮವರಿಗಾಗಿ ಪುನೀತ್ ನೂರೆಂಟು ಕನಸು (Puneeth Raj Kumar Dream) ಕಂಡಿದ್ದರು. ಈ ಕನಸುಗಳನ್ನು (Dr. Raj Museum) ಈಡೇರಿಸಲು ಈಗ ಪುನೀತ್ ಕುಟುಂಬ ( Shiva raj Kumar and Raghavendra Raj kumar ) ಮುಂದಾಗಿದೆ.

ಚಿಕ್ಕಂದಿನಿಂದಲೂ ಡಾ.ರಾಜ್ ಕುಟುಂಬದ ಎಲ್ಲರ ಕಣ್ಮಣಿಯಾಗಿ‌ ಬೆಳೆದ ಪುನೀತ್ ರಾಜ್ ಕುಮಾರ್ ಗೆ ತನ್ನ ತಂದೆಯ ಹುಟ್ಟೂರು ಚಾಮರಾಜನಗರದ ಮೇಲೆ ವಿಪರೀತ ಪ್ರೀತಿ ಇತ್ತು. ತಮ್ಮ ಬಿಡುವಿನ ವೇಳೆಯಲ್ಲಿ ಚಾಮರಾಜನಗರದ ಗಡಿಯ ತಾಳವಾಡಿ ಸಮೀಪದ ಗಾಜನೂರಿಗೆ ( Gajanooru ) ಭೇಟಿ ನೀಡುತ್ತಿದ್ದ ಪುನೀತ್ ಅಲ್ಲಿನ ಸಂಬಂಧಿಗಳು, ಆಪ್ತರ ಜೊತೆ ಕಾಲ ಕಳೆಯುತ್ತಿದ್ದರು. ಅಲ್ಲದೇ ಗಾಜನೂರಿನಲ್ಲಿರುವ ಅಪ್ಪ ಹುಟ್ಟಿದ ಮನೆಗೂ ಸದಾ ಹೋಗಿ ಬರುತ್ತಿದ್ದರು.

ನಿಧನಕ್ಕೂ ಕೆಲ ದಿನಗಳ ಮೊದಲು ಗಾಜನೂರಿಗೆ ಭೇಟಿ ನೀಡಿದ್ದ ಪುನೀತ್ ರಾಜ್ ಕುಮಾರ್ ಕುಸಿಯುವ ಸ್ಥಿತಿಯಲ್ಲಿದ್ದ ತಂದೆ ಹುಟ್ಟಿದ ಮನೆಯನ್ನು ನೋಡಿ ಬೇಸರ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ ಮಳೆಗೆ ಹಾನಿಗೊಂಡಿದ್ದ ಹಳೆ ಮನೆಯನ್ನು ದುರಸ್ಥಿಗೊಳಿಸುವ ಪ್ಲ್ಯಾನ್ ಮಾಡಿದ್ದರಂತೆ. ಕೆಲ ದಿನಗಳಲ್ಲೇ ಬಿಡುವು ಮಾಡಿಕೊಂಡು ಬಂದು ಮನೆಯ ದುರಸ್ಥಿ ಕೆಲಸ ಮಾಡುವುದಾಗಿ ಪುನೀತ್ ಆಪ್ತರ ಬಳಿ ಹೇಳಿಕೊಂಡಿದ್ದರಂತೆ.

ಆದರೆ ದುರದೃಷ್ಟವಶಾತ್ ಅದೇ ಪುನೀತ್ ಗಾಜನೂರಿಗೆ ನೀಡಿದ ಕೊನೆಯ ಭೇಟಿಯಾಯಿತು. ಆದರೆ ಪುನೀತ್ ಎಲ್ಲ ಕನಸುಗಳನ್ನು ಈಡೇರಿಸುವ ಪಣತೊಟ್ಟಿರುವ ಪುನೀತ್ ಸಹೋದರರಾದ ಶಿವಣ್ಣ ಹಾಗೂ ರಾಘಣ್ಣ ಪುನೀತ್ ಕನಸು ಈಡೇರಿಸಲು ಮುಂದಾಗಿದ್ದಾರೆ. ಗಾಜನೂರಿನ ಹಳೆ ಮನೆಯನ್ನು ದುರಸ್ಥಿ ಮಾಡಿಸಲು ಶಿವಣ್ಣ ಹಾಗೂ ರಾಘಣ್ಣ ನಿರ್ಧರಿಸಿದ್ದು, ಕುಟುಂಬಸ್ಥರಿಗೆ ಈ ಕಾಮಗಾರಿಯ ಜವಾಬ್ದಾರಿ ನೀಡಿದ್ದಾರಂತೆ. ದುರಸ್ಥಿಕಾರ್ಯ ಪೂರ್ಣಗೊಂಡ ಬಳಿಕ ಶಿವಣ್ಣ ಹಾಗೂ ರಾಘವೇಂದ್ರ ರಾಜ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಲಿದ್ದಾರಂತೆ.

ಅಲ್ಲದೇ ದುರಸ್ಥಿಗೊಳಿಸುವ ಹಳೆ ಮನೆಯನ್ನು ಮ್ಯೂಸಿಯಂ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆದಿದೆ. ಡಾ.ರಾಜ್ ಕುಮಾರ್ ಹಾಗೂ ಪುನೀತ್ ಗೆ ಸಂಬಂಧಿಸಿದ ಅಮೂಲ್ಯ ದಾಖಲೆಗಳನ್ನು ಇಟ್ಟುಮ್ಯೂಸಿಯಂ ರೀತಿಯಲ್ಲಿ ಅಭಿವೃದ್ಧಿಪಡಿಸಿ ಬಳಿಕ ಅಭಿಮಾನಿಗಳಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಪುನೀತ್ ಗಾಜನೂರು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : Puneet Raj Kumar : ಬೆಳ್ಳಿ ತೆರೆಗೆ ಬಾಲನಟನ‌ ಬದುಕು: ಪುನೀತ್‌ ರಾಜ್‌ ಕುಮಾರ್‌ ಬಯೋಪಿಕ್ ರೂಪದಲ್ಲಿ ಪವರ್ ಚರಿತ್ರೆ

ಇದನ್ನೂ ಓದಿ : Gandhada Gudi Title Teaser : ಪುನೀತ್ ರಾಜ್‌ಕುಮಾರ್ ಕನಸಿನ ಸಾಕ್ಷ್ಯಚಿತ್ರ ಗಂಧದಗುಡಿ ಟೈಟಲ್ ಟೀಸರ್ ಬಿಡುಗಡೆ; ಇಲ್ಲಿ ವೀಕ್ಷಿಸಿ

( Puneeth Raj Kumar Dream : Dr. Raj Museum Built Shiva raj Kumar and Raghavendra Raj kumar in Gajanooru)

Comments are closed.