puri jagannadh : ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಕುಟುಂಬದಲ್ಲಿ ಶೋಕ

ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್‌ ಅವರ ಪುತ್ರಿ ಪವಿತ್ರಾ ಅವರು ಅತ್ಯಂತ ಭಾವನಾತ್ಮಕವಾಗಿರುವ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಖ್ಯಾತ‌ ಟಾಲಿವುಡ್ ನಿರ್ದೇಶಕರಾಗಿರುವ ಪುರಿ ಜಗನ್ನಾಥ್ ಅವರ ಕುಟುಂಬದಲ್ಲಿ ತೀವ್ರ ಶೋಕ ಆವರಿಸಿದೆ. ಅವರ ತಾಯಿ ನಿಧನರಾಗಿದ್ದು, ಪುರಿ ಜಗನ್ನಾಥ್‌ ಅವರ ಪುತ್ರಿ ಪವಿತ್ರಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಸದ್ಯ ವೈರಲ್‌ ಆಗಿದೆ.

ಪುರಿ ಜಗನ್ನಾಥ್‌ ಪುತ್ರಿ ಪವಿತ್ರಾ ಬಾವುಕ ಪೋಸ್ಟ್‌ನಲ್ಲಿ ಏನಿದೆ ?

ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್‌ ಅವರ ಪುತ್ರಿ ಪವಿತ್ರಾ ಅವರು ಅತ್ಯಂತ ಭಾವನಾತ್ಮಕವಾಗಿರುವ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇನ್ಮುಂದೆ ನನ್ನನ್ನು ಚಿನ್ನತಲ್ಲಿ ಎಂದು ಯಾರು ಕರೆಯುತ್ತಾರೆ ? ಪ್ರೀತಿಯಿಂದ ಯಾರು ಮುತ್ತಿಡುತ್ತಾರೆ ? ನಿಮ್ಮೊಡನೆ ಇನ್ನೊಂದು ದಿನ ಕಳೆಯುವ ಅವಕಾಶ ಸಿಕ್ಕಿದ್ರೆ ಎಷ್ಟು ಚೆನ್ನಾಗಿ ಇರ್ತಾ ಇತ್ತು. ನಿಮ್ಮ 96ನೇ ವರ್ಷದ ಹುಟ್ಟುಹಬ್ಬದ ದಿನಂದು ಸಿಕ್ಕಿದಂತೆ ಮತ್ತೊಮ್ಮೆ ನೀವು ಸಿಕ್ಕಿದ್ರೆ ಆಲಂಗಿಸುತ್ತಿದೆ. ಐ ಮಿಸ್‌ ಯೂ ಅಜ್ಜಿ ಎನ್ನುವ ಮೂಲಕ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.

ಪವಿತ್ರಾ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಈ ಪೋಸ್ಟ್‌ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಮಾತ್ರವಲ್ಲ ನೆಟ್ಟಿಗರು, ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ. ಸಿನಿಮಾ ರಂಗದ ದಿಗ್ಗಜರು,, ಪುರಿ ಜಗನ್ನಾಥ್‌ ಅವರ ಆತ್ಯಾಪ್ತರು ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಟಾಲಿವುಡ್‌ನ ಖ್ಯಾತ ಸಿನಿಮಾ ನಿರ್ದೇಶಕರಾಗಿರುವ ಪುರಿ ಜಗನ್ನಾಥ್‌ ಅವರು ತಮಿಳಿನ ಖ್ಯಾತ ನಟ ವಿಜಯ್‌ ಸೇತುಪತಿ ನಾಯಕರಾಗಿರುವ ಸಿನಿಮಾ ನಿರ್ಮಾಣದ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಖ್ಯಾತ ನಟಿ ಟಬು, ಬ್ರಹ್ಮಾಜಿ ಸೇರಿದಂತೆ ಖ್ಯಾತ ನಾಮ ಕಲಾವಿದರು ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ. ಸದ್ಯ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದ್ದು, ಬಿಡುವಿಲ್ಲದ ಸಮಯದಲ್ಲಿ ತಾಯಿಯ ನಿಧನ ತುಂಬಲಾರದ ನಷ್ಟವಾಗಿದೆ.

puri jagannadh Mother Passed away Daughter Pavitra Post in Instagram

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »