Aadhaar And Ration Card link : ಗುಡ್‌ ನ್ಯೂಸ್‌ ! ರೇಷನ್‌ ಕಾರ್ಡ್‌ ಜೊತೆಗೆ ಆಧಾರ್‌ ಲಿಂಕ್‌ ಮಾಡಲು ಜೂನ್‌ 30ರವರೆಗೆ ಕಾಲಾವಕಾಶ

ಭಾರತ ಸರ್ಕಾರ ತನ್ನ ಪ್ರಜೆಗಳಿಗೆ ನೀಡಿದ ಒನ್‌ ನೇಷನ್‌ ಒನ್‌ ರೇಷನ್‌ ಕಾರ್ಡ್‌ ಯೋಜನೆಯಲ್ಲಿ ಪ್ರತಿ ರೇಷನ್‌ ಕಾರ್ಡ್‌ ಅನ್ನು ಆಧಾರ್‌ ಜೊತೆಗೆ (Aadhaar And Ration Card link )ಲಿಂಕ್‌ ಮಾಡುವುದು ಕಡ್ಡಾಯಗೊಳಿಸಿದೆ. ಹಾಗೆ ಲಿಂಕ್‌ ಮಾಡುವ ಕಾಲಾವಕಾಶವನ್ನು ಜೂನ್‌ 30ರವರೆಗೆ ಮುಂದುವರಿಸಿದೆ. ಆಧಾರ್‌ ಕಾರ್ಡ್‌ಅನ್ನು ರೇಷನ್‌ ಕಾರ್ಡ್‌ ಜೊತೆಗೆ ಲಿಂಕ್‌ ಮಾಡುವುದರಿಂದ ಯಾವುದೇ ಫಲಾನುಭವಿಗಳಿಗೆ ಅವನ/ಅವಳ ಪಾಲಿನ ಆಹಾರ ಧಾನ್ಯಗಳು ಇಲ್ಲದಂತಾಗುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ಆಧಾರ ಕಾರ್ಡ್‌ ಜೊತೆಗೆ ರೇಷನ್‌ ಕಾರ್ಡ್‌ ಲಿಂಕ್‌ ಮಾಡುವುದರಿಂದ ಹಲವು ಪ್ರಯೋಜನಗಳಿವೆ. ಇದರ ಪೂರ್ತಿ ಪ್ರಯೋಜನ ವಲಸಿಗರು ಪಡೆದುಕೊಳ್ಳ ಬಹುದಾಗಿದೆ. ಹೇಗೆಂದರೆ, ಕೆಲಸದ ನಿಮಿತ್ತ ತೆರಳಿದ ತಾತ್ಕಾಲಿಕ ಸ್ಥಳದಲ್ಲೇ ಆಹಾರ ಧಾನ್ಯಗಳನ್ನು ಪಡೆಯುವುದರ ಮೂಲಕ ವಲಸಿಗರು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿಯಲ್ಲಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಆಗಸ್ಟ್‌ 2019 ನಲ್ಲಿ ಜಾರಿಗೆ ಬಂದ ಒನ್‌ ನೇಷನ್‌ ಒನ್‌ ರೇಷನ್‌ ಕಾರ್ಡ್‌(ONORC) ಅನ್ನು ದಿನಗೂಲಿ ನೌಕರರಿಗೆ, ಹಂಗಾಮಿ ಕೆಲಸಗಾರರಿಗೆ, ವಲಸಿಗರಿಗೆ ಆಹಾರ ಧಾನ್ಯಗಳ ಪ್ರಯೋಜನ ಪಡೆದುಕೊಳ್ಳಲು ತಮ್ಮ ಸಮೀಪದ ಪಡಿತರ ಕೇಂದ್ರದಿಂದ ಸಬ್ಸಿಡಿ ಆಹಾರ ಧಾನ್ಯಗಳನ್ನು ಒದಗಿಸುವ ದೃಷ್ಟಿಯಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. 80ಕೋಟಿ ಫಲಾನುಭವಿಗಳು ಈ ಯೋಜನೆಯ ಪ್ರಯೋಜನಪಡೆದಿದ್ದಾರೆ. ಫೆಬ್ರವರಿಯ ಮಧ್ಯದಲ್ಲೇ 96 ಪ್ರತಿಶತ ಜನರು ಈ ಪ್ರಯೋಜನ ಪಡೆಯಲು ONORC ಯೋಜನೆಯಲ್ಲಿ ನೊಂದಾಯಿಸಿದ್ದಾರೆ. ಕೆಲವು ರಾಜ್ಯಗಳಲ್ಲಿ 100 ಪ್ರತಿಶತ ನೋಂದಣಿಯಾಗಿದೆ. ಇನ್ನೂ ಹಲವು ರಾಜ್ಯಗಳಲ್ಲಿ ಸಂಪೂರ್ಣ ಗುರಿ ಸಾಧಿಸಬೇಕಾಗಿದ್ದರಿಂದ ಇನ್ನೂ ಮೂರು ತಿಂಗಳುಗಳ ಕಾಲಾವಕಾಶ ನೀಡಿದೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆಧಾರ ಜೊತೆಗೆ ರೇಷನ್‌ ಕಾರ್ಡ್‌ ಲಿಂಕ್‌ ಮಾಡಲು ಈ ಮೊದಲು ಡಿಸೆಂಬರ್‌ 31, 2021 ರವರೆಗೆ ಇದ್ದ ಕಾಲಾವಕಾಶವನ್ನು ಮಾರ್ಚ್‌ 31, 2022 ರವರೆಗೆ ಮುಂದುವರಿಸಲಾಗಿತ್ತು. ಆದರೆ ಇದೀಗ ಈ ಕಾಲಾವಕಾಶವನ್ನು ಜೂನ್‌ 30, 2022 ರವರೆಗೆ ಮುಂದುವರಿಸಲಾಗಿದೆ.

ಇದನ್ನೂ ಓದಿ: PAN Aadhar ಅನ್ನು ಮಾರ್ಚ್‌ 31ರ ಒಳಗೆ ಲಿಂಕ್‌ ಮಾಡಿ!

Aadhaar And Ration Card link ಮಾಡುವುದು ಹೇಗೆ?

ರೇಷನ್‌ ಕಾರ್ಡ್‌ಅನ್ನು ಆಧಾರ್‌ನೊಂದಿಗೆ ಸುಲಭವಾಗಿ ಲಿಂಕ್‌ ಮಾಡಬಹುದು. ಅದಕ್ಕೆ, ಹೀಗೆ ಮಾಡಿ:

  • ಆಧಾರ್‌ನ ಅಧಿಕೃತ ವೆಬ್‌ಸೈಟ್‌ uidai.gov.in ಗೆ ಹೋಗಿ .
  • Start Now ಮೇಲೆ ಕ್ಲಿಕ್ಕಿಸಿ.
  • ನಿಮ್ಮ ವಿಳಾಸ ಭರ್ತಿ ಮಾಡಿ. ಅದರಲ್ಲಿ ನಿಮ್ಮ ಜಿಲ್ಲೆ ಮತ್ತು ರಾಜ್ಯದ ಹೆಸರು ಕಡ್ಡಾಯವಾಗಿ ಇರುವಂತೆ ವಿಳಾಸ ಭರ್ತಿ ಮಾಡಿ.
  • ರೇಷನ್‌ ಕಾರ್ಡ್‌ ಬೆನಿಫಿಟ್‌ ಆಯ್ಕೆಯನ್ನು ಕ್ಲಿಕ್ಕಿಸಿ.
  • ನಂತರ ರೇಷನ್‌ ಕಾರ್ಡ್‌ ನಂಬರ್‌, ಆಧಾರ್‌ ನಂಬರ್‌, ಇ–ಮೇಲ್‌, ಮೊಬೈಲ್‌ ನಂಬರ್‌ ಬರೆಯಿರಿ.
  • ನಿಮ್ಮ ನೋಂದಾಯಿತ ಮೊಬೈಲ್‌ ನಂಬರ್‌ಗೆ ಬಂದ OTP ನಮೂದಿಸಿ. ತಕ್ಷಣ ನಿಮ್ಮ ಪ್ರಕ್ರಿಯೆ ಪೂರ್ಣಗೊಂಡ ಮೆಸೇಜ್‌ ನಿಮ್ಮ ಪರದೆಯ ಮೇಲೆ ಮೂಡುವುದು.
  • ನಿಮ್ಮ ಆಧಾರ್‌ ಪರಿಶೀಲನೆಗೊಂಡ ನಂತರ ಅದನ್ನು ನಿಮ್ಮ ರೇಷನ್‌ ಕಾರ್ಡ್‌ ಜೊತೆಗೆ ಲಿಂಕ್‌ ಮಾಡಲಾಗುವುದು.

ಇದನ್ನೂ ಓದಿ : Aadhaar History : ನಿಮ್ಮ ಆಧಾರ್‌ ತಪ್ಪಾಗಿ ಬಳಕೆಯಾಗಿರಬಹುದೆಂಬ ಅನುಮಾನವಿದೆಯೇ? ಅದನ್ನು ತಿಳಿಯಲು ನಾವು ಹೇಳಿದಂತೆ ಮಾಡಿ

(Aadhaar And Ration Card Link last Date Extended till 30th June 2022)

Comments are closed.