kantara film :ಕಾಂತಾರ ವೀಕ್ಷಿಸಿ ಹುಚ್ಚೆದ್ದು ಕುಣಿದ ರಕ್ಷಿತ್​ ಶೆಟ್ಟಿ : ಇಂತಹ ಕ್ಲೈಮಾಕ್ಸ್​​ ಹಿಂದೆಂದೂ ಕಂಡೇ ಇಲ್ಲ ಎಂದ ಸಿಂಪಲ್​ಸ್ಟಾರ್​

kantara film : ಕನ್ನಡ ಚಿತ್ರಂಗಕ್ಕೆ ಈ ವರ್ಷ ಸುವರ್ಣ ಯುಗ ಅಂತಾ ಹೇಳಿದರೆ ತಪ್ಪಾಗಲಾರದು. ಕೆಜಿಎಫ್​ 2 ಸಿನಿಮಾದ ಬಳಿಕ ಸ್ಯಾಂಡಲ್​ವುಡ್​ನಲ್ಲಿ ತೆರೆ ಕಂಡ ಯಾವುದೇ ಸಿನಿಮಾಗಳು ಸೋತಿಲ್ಲ. ಬದಲಾಗಿ ಸಂಪೂರ್ಣ ದೇಶವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತೆ ಮಾಡುತ್ತಿದೆ. ಅದರಲ್ಲೂ ವಿಜಯ್​ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ ಅಂತೂ ಮುಟ್ಟಿದ್ದೆಲ್ಲ ಚಿನ್ನವಾಗ್ತಿದೆ. ಇಷ್ಟು ಕೆಜಿಎಫ್​ 2 ಸಿನಿಮಾದ ಯಶಸ್ಸಿನಲ್ಲಿ ಮಿಂದೇಳುತ್ತಿದ್ದ ಹೊಂಬಾಳೆ ಫಿಲ್ಮ್ಸ್​ ಇದೀಗ ಕಾಂತಾರ ಸಿನಿಮಾದ ಗೆಲುವಿನಲ್ಲಿ ತೇಲುವಂತಾಗಿದೆ.


ರಿಷಬ್​ ಶೆಟ್ಟಿ ನಿರ್ದೇಶನ ಹಾಗೂ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಇಂದು ಎಲ್ಲೆಡೆ ತನ್ನ ಮೊದಲ ದಿನದ ಪ್ರದರ್ಶನವನ್ನು ಪೂರೈಸಿದೆ. ನಿನ್ನೆ ಕಾಂತಾರ ಸಿನಿಮಾದ ಪ್ರೀಮಿಯರ್ ಶೋ ಕೂಡ ಆಯೋಜನೆಗೊಂಡಿತ್ತು. ಸಿನಿಮಾ ನೋಡಿ ಬಂದ ಪ್ರತಿಯೊಬ್ಬರೂ ಕೂಡ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್​ಗೆ ಫುಲ್​ ಫಿದಾ ಆಗಿದ್ದಾರೆ. ಈ ಸಾಲಿಗೆ ಸ್ವತಃ ನಟ ರಕ್ಷಿತ್​ ಶೆಟ್ಟಿ ಕೂಡ ಸೇರಿದ್ದಾರೆ.


ಸ್ಯಾಂಡಲ್​ವುಡ್​​ನಲ್ಲಿ ಸದ್ಯ ಶೆಟ್ಟಿಗಳ ಹಾವಳಿ ಜೋರಾಗಿದೆ ಅಂದರೆ ತಪ್ಪಾಗಲಾರದು. ರಾಜ್​ ಬಿ ಶೆಟ್ಟಿ, ರಕ್ಷಿತ್​ ಶೆಟ್ಟಿ ಹಾಗೂ ರಿಷಬ್​ ಶೆಟ್ಟಿ ಸಾಲು ಸಾಲು ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ನಿನ್ನೆ ರಕ್ಷಿತ್​ ಶೆಟ್ಟಿ ಕಾಂತಾರ ಸಿನಿಮಾದ ಪ್ರೀಮಿಯರ್​ ಶೋನಲ್ಲಿ ಭಾಗಿಯಾಗಿದ್ದರು, ಸಿನಿಮಾ ಮುಗಿಯುತ್ತಿದ್ದಂತೆಯೇ ರಕ್ಷಿತ್​ ಶೆಟ್ಟಿ ಥಿಯೇಟರ್​ನಿಂದ ಖುಷಿಯಿಂದ ಓಡಿ ಬಂದಿದ್ದು ಮಾತ್ರವಲ್ಲದೇ ಸ್ನೇಹಿತ ರಿಷಬ್​​ನನ್ನು ಅಪ್ಪಿಕೊಂಡು ಸಂತೋಷ ಹೊರಹಾಕಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ವೈರಲ್​ ಆಗ್ತಿದೆ.


ಪ್ರೀಮಿಯರ್​ ಶೋ ಮುಗಿದ ಬಳಿಕ ಮಾತನಾಡಿದ ನಟ ರಕ್ಷಿತ್​ ಶೆಟ್ಟಿ, ರಿಷಬ್​ ನನಗೆ ಈ ಸಿನಿಮಾವನ್ನು ದೊಡ್ಡ ಪರದೆಯ ಮೇಲೆಯೇ ನೋಡಬೇಕು ಅಂತಾ ಹೇಳಿದ್ದ. ಈ ಸಿನಿಮಾದ ಕ್ಲೈಮಾಕ್ಸ್​ ಸೀನ್​ನ್ನು ನಾನು ಹಿಂದೆಂದೂ ಕಂಡೇ ಇಲ್ಲ. ಈ ಸಿನಿಮಾದ ಕೊನೆಯ ಮೂವತ್ತು ನಿಮಿಷಗಳನ್ನು ಪ್ರೇಕ್ಷಕರು ಎಂದಿಗೂ ನೆನಪಿನಲ್ಲಿ ಇಡುತ್ತಾರೆ ಎಂದು ರಕ್ಷಿತ್​ ಶೆಟ್ಟಿ ಹಾಡಿಹೊಗಳಿದ್ದಾರೆ,


ಈ ಸಿನಿಮಾ ಪ್ರಕೃತಿ ಹಾಗೂ ಮಾನವನ ನಡುವಿನ ಸಂಘರ್ಷದ ನಡುವೆ ಹೆಣೆದ ಕತಾ ಹಂದರವಾಗಿದೆ. ಸಿನಿಮಾದ ಶೂಟಿಂಗ್​ನ್ನು ಕರಾವಳಿ ಭಾಗದಲ್ಲಿಯೇ ಚಿತ್ರೀಕರಿಸಲಾಗಿದೆ. ಪ್ರಮುಖ ಪಾತ್ರದಲ್ಲಿ ರಿಷಬ್​ ಶೆಟ್ಟಿ ಹಾಗೂ ಸಪ್ತಮಿ ಗೌಡ ನಟಿಸಿದ್ದಾರೆ. ಇನ್ನುಳಿದಂತೆ ಕಿಶೋರ್​ , ಪ್ರಮೋದ್​ ಶೆಟ್ಟಿ, ಅಚ್ಯುತ್​ ಕುಮಾರ್​ ಸೇರಿದಂತೆ ಪ್ರಮುಖ ತಾರಾಗಣವೇ ಈ ಸಿನಿಮಾದಲ್ಲಿದೆ.

ಇದನ್ನು ಓದಿ : Kantara Movie Review : ಅಭಿಮಾನಿಗಳ ಮನ ಗೆದ್ದ ರಿಷಬ್‌ ಶೆಟ್ಟಿ “ಕಾಂತಾರ”

ಇದನ್ನೂ ಓದಿ : illicit relationship : ಅಕ್ರಮ ಸಂಬಂಧಕ್ಕಾಗಿ ಬಾಲಕನ ರುಂಡವನ್ನೇ ಕತ್ತರಿಸಿದ ಕಿರಾತಕನ ಬಂಧನ

rakshit shetty talks about rishab shetty kantara film

Comments are closed.