ರಕ್ಷಿತಾ ಜಗಳಗಂಟಿಯಂತೆ, ಅಮ್ಮನನ್ನು ನೋಡುವ ಖುಷಿ ಜೊತೆ ಮೀನೂಟ ತಯಾರಿಸಿದ ಸ್ಪರ್ಧಿ!
ರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋನಲ್ಲಿ ಈ ವಾರ ಫ್ಯಾಮಿಲಿ ರೌಡ್ ನಡೆಯುತ್ತಿದೆ. ನಿನ್ನೆಯ ಸಂಚಿಕೆಯಲ್ಲಿ ಸೂರಜ್, ರಾಶಿಕಾ, ಧನುಷ್ ಅವರು ಕುಟುಂಬದವರು ಬಂದಿದ್ದು. ಇಂದು ರಕ್ಷಿತಾ ಶೆಟ್ಟಿ ಅವರ ಅಮ್ಮ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ರಕ್ಷಿತಾಗೆ ಏನ್ ಹೇಳಿದ್ರು ನೋಡಿ.
ಅಮ್ಮನ ನೋಡಿ ಫುಲ್ ಖುಷಿ
ರಕ್ಷಿತಾ ಶೆಟ್ಟಿ ಅಮ್ಮ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅಮ್ಮನನ್ನು ನೋಡಿ ರಕ್ಷಿತಾ ಖುಷಿಯಾಗಿದ್ದಾರೆ. ಅಮ್ಮನ ತಬ್ಬಿ ಕಣ್ಣೀರಿಟ್ಟಿದ್ದಾರೆ. ತುಂಬಾ ಮಿಸ್ ಮಾಡ್ಕೊಂಡೆ ಎಂದಿದ್ದಾರೆ.
ನೀನು ಜಗಳಗಂಟಿ
ಇನ್ನು ರಕ್ಷಿತಾ ಅಮ್ಮ ಆಕೆಗೆ ಬುದ್ದಿ ಮಾತು ಹೇಳಿದ್ದಾರೆ. ನೀನು ಯಾರ ಜೊತೆಯೂ ಜಗಳವಾಡಬೇಡ. ನೀನು ಜಗಳಗಂಟಿ. ಏಕೆ ಎಲ್ಲರ ಬಳಿ ಸುಮ್ಮನೆ ಜಗಳವಾಡ್ತಿ ಎಂದು ಕೇಳಿದ್ದಾರೆ.
ಮನೆಯಲ್ಲಿ ಮೀನೂಟ
ಇನ್ನು ಬಿಗ್ ಬಾಸ್ ರಕ್ಷಿತಾಗಾಗಿ ಮೀನು ಮತ್ತು ಕ್ಯಾಮೆರಾ ಕಳಿಸಿ, ಶುರು ಮಾಡಿ ನಿಮ್ಮ ಬ್ಲಾಗ್ ಎಂದಿದ್ದಾರೆ. ರಕ್ಷಿತಾ ಫುಲ್ ಖುಷಿಯಿಂದ ಹಾಯ್ ಗಾಯ್ಸ್ ಎಂದು ತಮ್ಮ ಬ್ಲಾಗ್ ಶುರು ಮಾಡಿದ್ದಾರೆ. ಅಲ್ಲದೇ ಮೀನೂಟ ತಯಾರಿಸುತ್ತಿದ್ದಾರೆ.
ಕರಾವಳಿ ಮೂಲದವರು
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದಾರೆ. ಅವರು ಕರಾವಳಿ ಮೂಲದವರಾಗಿದ್ದು, ತುಳು, ಕನ್ನಡ ಮತ್ತು ಹಿಂದಿ ಭಾಷೆಗಳನ್ನು ಮಿಕ್ಸ್ ಮಾಡಿ ಮಾತನಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ರಕ್ಷಿತಾ ಶೆಟ್ಟಿ ಯೂಟ್ಯೂಬ್ ಮತ್ತು ಇನ್‍ಸ್ಟಾಗ್ರಾಂ ವಿಡಿಯೊಗಳ ಮೂಲಕವೇ ಫೇಮಸ್ ಆದವರು.
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಜನಪ್ರಿಯತೆ ಗಳಿಸುತ್ತಿದ್ದು, ಅವರನ್ನು ಪದೇ ಪದೇ ಟಾರ್ಗೆಟ್ ಮಾಡಲಾಗುತ್ತಿದೆ. ರಕ್ಷಿತಾ ಕನ್ನಡ ಬರದಂತೆ ನಾಟಕವಾಡುತ್ತಿದ್ದಾರೆ ಎಂದು ಸಹ ಸ್ಪರ್ಧಿಗಳು ಆರೋಪಿಸುತ್ತಾರೆ.
ಇದನ್ನೂ ಓದಿ: https://kannada.newsnext.live/cinema/dhanush-choose-who-mother-or-wife/
ಇನ್ನು ಇಂದು ಬೇರೆ ಬೇರೆ ಸ್ಪರ್ಧಿಗಳ ಕುಟುಂಬದರು ಬಿಗ್ ಬಾಸ್ ಮನೆಗೆ ಬರಲಿದ್ದಾರೆ.



