ಗುಟ್ಟಾಗಿ ಮದುವೆಯಾದ್ರಾ ರಶ್ಮಿಕಾ ಮಂದಣ್ಣ-ವಿಜಯ್​ ದೇವರಕೊಂಡ : ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​

ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್​ ದೇವರಕೊಂಡ ರಿಲೇಷನ್​ಶಿಪ್​ನಲ್ಲಿರುವ ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಅಲ್ಲದೇ ಕೆಲವು ದಿನಗಳ ಹಿಂದಷ್ಟೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡ ವಿಚಾರ ಕೂಡ ಬಹಳ ವೈರಲ್​ ಆಗಿತ್ತು. ಆದರೆ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಈ ಜೋಡಿ ಎಲ್ಲಿಯೂ ಹಂಚಿಕೊಳ್ಳದೇ ಗೌಪ್ಯತೆ ಕಾಯ್ದುಕೊಳ್ಳುವ ಪ್ರಯತ್ನ ಮಾಡಿತ್ತು. ಈ ಎಲ್ಲದರ ನಡುವೆ ಇದೀಗ ರಶ್ಮಿಕಾ ಮಂದಣ್ಣ ಹಾಗೂ ವಿಜಯ್​ ದೇವರಕೊಂಡ ಮದುವೆ ಫೋಟೋಸ್​ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಗೀತ ಗೋವಿಂದಂ ಸಿನಿಮಾದ ಮೂಲಕ ತೆರೆ ಮೇಲೆ ಮೊಟ್ಟ ಮೊದಲ ಬಾರಿಗೆ ಈ ಜೋಡಿ ಮೋಡಿ ಮಾಡಿತ್ತು. ಈ ಸಿನಿಮಾದ ಶೂಟಿಂಗ್​ ಸಮಯದಲ್ಲಿಯೇ ಇಬ್ಬರ ನಡುವೆ ಪ್ರೇಮಾಂಕುರವೂ ಆಗಿತ್ತು. ಈ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಈ ಜೋಡಿ ಡಿಯರ್​ ಕಾಮ್ರೇಡ್​ ಸಿನಿಮಾದಲ್ಲಿಯೂ ಒಟ್ಟಾಗಿ ಬಣ್ಣ ಹಚ್ಚಿತ್ತು. ಇದಾದ ಬಳಿಕ ನಿಜ ಜೀವನದಲ್ಲಿ ಅನೇಕ ಬಾರಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದೆ.
ಅಕ್ಟೋಬರ್​ 3ರಂದು ವಿಜಯ್​ದೇವರಕೊಂಡ ನಿವಾಸದಲ್ಲಿಯೇ ಇವರಿಬ್ಬರ ನಿಶ್ಚಿತಾರ್ಥ ಕಾರ್ಯ ನೆರವೇರಿತ್ತು. ಫೆಬ್ರವರಿಯಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಬಲ್ಲಮೂಲಗಳಿಂದ ಹೊರಬಿದ್ದಿತ್ತು. ಈ ಎಲ್ಲದರ ನಡುವೆ ಈಗ ವೈರಲ್​ ಆಗಿರುವ ಫೋಟೋ ಕಂಡು ಅಭಿಮಾನಿಗಳು ಶಾಕ್​ ಆಗಿದ್ದಾರೆ. ಆದರೆ ಇದೊಂದು ಎಐ ಜನರೇಟೆಡ್​ ಫೋಟೋ ಎಂದು ಕೂಡ ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಫೋಟೋದಲ್ಲಿ ಮಹೇಶ್​ ಬಾಬು ದಂಪತಿ ಹಾಗೂ ರಶ್ಮಿಕಾ ಮಂದಣ್ಣ – ವಿಜಯ್​ ದೇವರಕೊಂಡ ಇರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಸಾನ್ವಿ ಸುದೀಪ್ ಮೊದಲ ಗಾಯನ: ಮಾರ್ಕ್ ಚಿತ್ರದ ‘ಮಸ್ತ್ ಮಲೈಕಾ’ ಸಂಚಲನ

ಅಸಲಿಗೆ ಎಐ ಜನರೇಟೆಡ್​ ಫೋಟೋ ಆಗಿದ್ದು ಅಭಿಮಾನಿಗಳು ನಿಜವಾದ ಫೋಟೋ ಎಂದು ತಿಳಿದು ಸಾಮಾಜಿಕ ಜಾಲತಾಣದ ತುಂಬೆಲ್ಲ ಹಂಚಿಕೊಂಡಿದ್ದಾರೆ. ಸದ್ಯ ಈ ಎಐ ಜನರೇಟೆಡ್​ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹತ್ತಿಸಿದೆ. ಆದರೆ ಮೂಲಗಳ ಪ್ರಕಾರ ಈ ಜೋಡಿ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎನ್ನಲಾಗಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories